ಪುಟ:ಧರ್ಮಸಾಮ್ರಾಜ್ಯಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ) ಎರಡನೆಯ ಅಂಗ ಸ್ತಬ್ಬಳಾಗಿ ದುಃಖಾತಿಶಯವನ್ನು ಸಹಿಸಲಾರದೆ ಗದ್ದ ದಸ್ವರದಿಂದ: -- « ನಾನಿನ್ನಾ ರನ್ನೂ ವರಿಸುವುದಿಲ್ಲ! ಎಂದುಹೇಳಿ ರೋದಿಸುತ್ತ ತನ್ನ ಕೇಳೀಮಂದಿರವನ್ನು ಕುರಿತು ಹೊರಟುಹೋದಳು. ಇದೆಲ್ಲವನ್ನೂ ನೋಡುತಿರ್ದ ಇಂದುಮತಿಯು, ಮಗಳ ದುಃಖವನ್ನು ನೋಡಿ ಸಹಿಸ ಲಾರದೆ ವ್ಯಸನಗೊಂಡವಳಾಗಿ, ಪತಿಯನ್ನು ಕುರಿತು ವಿನಯದಿಂದ: ಆರ್ಯ! ಇದೇಕೆ ಉನ್ನಾದಿನಿಯಮೇಲೆ ಇಷ್ಟು ಕೋಪಿಸುವೆ ? ಆ ಕಾಗದದ ವಿಷಯವೇನು?” ಎಂದು ಕೇಳಲು ಕಿರೀಟವನು ಜುಗುಪ್ಪೆ ಯಿಂದ: ಅಯ್ಯೋ ! ನಿನ್ನ ವೇಧೆ ಬೇರೆ ಪ್ರಾಪ್ತವಾಯಿತೆ! (ಉಚ್ಚ ಸ್ವರದಿಂದ) ನನ್ನ ಮಗಳು ಕುಲಕ್ಷಣೆಯಾದುದರಿಂದ ಅವಳ ಮುಖಾವ ಲೋಕನವೂ ಕೂಡ ಅಶ್ರೇಯಸ್ಕರವು. ಆದಕಾರಣ ನಾನು ಅವಳನ್ನು ವಿವಾಹಮಾಡಿಕೊಳ್ಳುದಿಲ್ಲ, ಎಂದು ಮಹಾರಾಜನು ಪತ್ರದಲ್ಲಿ ಬರೆದು ಕಳುಹಿಸಿರುವನು! ಎಂದು ಹೇಳಲು ಇಂದುಮತಿಯು ಬೆದರಿ, ಬಳಿಕ ಒಂ ದುಕ್ಷಣಕಾಲ ಹಾಗೆಯೇ ಯೋಚಿಸುತಿರ್ದು ಪುನಃ ಪತಿಯನ್ನು ಕುರಿತು ದೈನ್ಯದಿಂದ:-ಆರ್ಯ! ನೀನೂ ಹೀಗೆ ಕೋಪಿಸಿದರೆ ನಾನಿನ್ನಾರಿಗೆ ಮೊರೆ ಯಿಡಲಿ? (ಕೈಮುಗಿದುಕೊಂಡು) ಎನ್ನ ಮಾತನ್ನು ಲಾಲಿಸು-ಮಧ್ಯದಲ್ಲೇ ನೋ ಕೃತ್ರಿಮವು ನಡೆದಂತೆ ತೋರುವುದು; ಆದಕಾರಣ ನೀನಿನ್ನೊ ಂದುವೇಳೆ ರಾಜನಲ್ಲಿಗೆ ಹೋಗಿ ಸ್ವತಃ ಪರೀಕ್ಷಿಸೆಂದು ವಿಜ್ಞಾಪಿಸುವನಾಗು.ಎಂದು ಪ್ರಾರ್ಥಿಸಿದುದನ್ನು ಕೇಳಿದ ಕಿರೀಟವನು ಕೋಪದಿಂದವಳಕಡೆಗೆ ತಿರು ಗಿ:- ನಿನಗೇನು ಎವೇಕವಿದೆಯೋ ಇಲ್ಲವೊ? ನಿನ್ನ ಮಾತನ್ನು ಕೇಳಿ ದೇಶ ಭ್ರಷ್ಟನಾಗಲೆ? ಇಲ್ಲವೆ ಶೋಲಾರೋಹಣಕ್ಕೆ ಸಿದ್ಧನಾಗಲೆ ? ?” ಎಂದು ಗಜರಲು ಇಂದುಮತಿಯು ಲಜ್ಞಾ ಭೀತಿಗಳಿಂದ ಕುಗ್ಗಿ ಅಳುತ್ತ:- ಇದೇ ಕಿಂತು ಕೋಪಿಸುವೆ? ” ಎಂದು ಖಿನ್ನಳಾಗಿ ನಿಂತಿರಲು ಕಿರೀಟವನು ನೋಡಿ ಕೃಪಾನ್ವಿತನಾಗಿ:- ಅಯ್ಯೋ ! ಮುಗ್ಡೆ! ನಿನ್ನ ಉದ್ದೇಶವು ಎನಗೆ ತಿಳಿಯದೇ ಇಲ್ಲ ; ನಿನಗಿಂತಲೂ ಎನಗೆ ವ್ಯಥೆಯು ಸಹಸ್ರಪಾಲು ಅಧಿಕವಾಗಿದೆ; ಆದರೇನುಮಾಡಲಿ? ಮಹಾರಾಜನೇ ತನ್ನ ಹಸ್ತಾಕ್ಷರ