ಪುಟ:ಧರ್ಮಸಾಮ್ರಾಜ್ಯಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬] ಎರಡನೆಯ ಅಂಗ ೪೧ ಯೋಚಿಸಿದರೆ, ಮಹಾ ರೂಪವತಿಯಾಗಿಯೂ ಯವನಸಮನ್ವಿತೆಯಾ ಗಿಯೂ ಇರುವ ಮಗಳನ್ನು ಮನೆಯಲ್ಲಿ ಇಟ್ಟುಕೊಂಡಿರ್ದರೆ, ಮಹಾ ನರ್ಥಗಳೂ ಅನೇಕಜನರ ದ್ವೇಷವೂ ಪ್ರಾಪ್ತವಾಗುವುವು, ಅವೆಲ್ಲವೂ ಹಾಗಿರಲಿ' ಎಂದು ಯೋಚಿಸಿದರೆ, ಕಾಲಾನುಸಾರವಾದ ದೇಹವ್ಯಾಪಾ ರಕ್ಕೆ ಸಮಸ್ತ ಪ್ರಾಣಿಗಳ ಮನವೂ ಒಡಂಬಡುವುದು ಲೋಕಸ್ವಭಾವ ವಾಗಿರುವುದರಿಂದ, ಇವಳೇನಾದರೂ ಕಾಮಕ್ಕಧೀನಳಾಗಿ ಅಂತರಂಗ ಪಾಪಗಳನ್ನಾಗಲೀ ಕುತಸಂಗವನ್ನಾಗಲೀ ಮಾಡಿದಲ್ಲಿ ಲೋಕಾಪ ವಾದವು ಪ್ರಾಪ್ತವಾಗುವುದಲ್ಲದೆ ಕುಲಕ್ಕೆ ಹಾನಿಯ ವಂಶಕ್ಷಯವೂ ಆಗುವುವು, ಈಗೇನು ಮಾಡಲಿ ? ಎಂದು ಚಿಂತಿಸಿದ ಬಳಿಕ ಒಂದು ಕ್ಷಣಕಾಲ ಯೋಚಿಸುತಿರ್ದು ಬಳಿಕ ಸಂತೋಷದಿಂದ: 14 ಆ8! ಎಮ್ಮ ಮಹಾ ರಾಜನ ಸೇನಾಪತಿಯಾದ ಅಭಿಪಾರಗನು, ನಿನ್ನ ಮಗಳಿಗೆ ಇನ್ನೂ ವಿವಾ ಹವಿಲ್ಲ ವೇಗಿ ಮಹಾಲಾವಣ್ಯವತಿಯಾಗಿಹಳು.' ಎಂದು ಎನ್ನೊಡನೆ ಈಗ್ಗೆ ಎಂಟು ಹತ್ತು ದಿನಗಳ ಹಿಂದೆ ಹೇಳಿರ್ದನು; ಅವನಿಗೆ ಇನ್ನೂ ವಿವಾಹವೇ ಇಲ್ಲ: ಸರ್ವಗುಣಗಳಲ್ಲಿಯೂ ಅವನು ಮಹಾರಾಜನಿಗೆ ಎರಡನೆಯ ವನೇ ಆಗಿರುವನು; ಒಳ್ಳೆಯದು! ಈಗಲೇ ಉನ್ಮಾದಿನಿಯನ್ನು ಅವನಿಗೆ ಕೊಟ್ಟು ವಿವಾಹವನ್ನು ಮಾಡಿಬಿಡುವೆನು. ಎಂದು ನಿಶ್ಚಯಿಸಿಕೊಂಡು ಅಭಿಪಾರಗನ ಬಳಿಗೆ ಹೊರಟು ಹೋದನು. ಅರನೆಯ ಸಂಧಿ. WOMAN'S TRUE LOVE CANNOT BE ALTERED. ಸತೀತಾವಷ್ಟಂಭ. ಬಳಿಕ ಕಿರೀವತ್ಸನು ಅಭಿಪಾರಗನ ಗೃಹವನ್ನೆ ದಿ, ಉನ್ಮಾದಿನಿ ಯನ್ನು ರಾಜನು ಧಿಕ್ಕರಿಸಿದುದೇ ಮುಂತಾದ ವಿಷಯಗಳಲ್ಲೊಂದನ್ನೂ ಅವನಿಗೆ ತಿಳಿಸದೆ, ಅವಳನ್ನು ನೀನು ವಿವಾಹಮಾಡಿ ಕೊಳ್ಳೆಂದು ಪ್ರಾರ್ಥಿ