ಪುಟ:ಧರ್ಮಸಾಮ್ರಾಜ್ಯಂ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಧರ್ಮಸಾಮ್ರಾಜ್ಯ (ಸಂಧಿ

  • * \\\

ಸಿದನು. ಇದನ್ನು ಕೇಳಿದ ಅಭಿಪಾರಗನು, ತಾನು ರಾಜನಾಜ್ಞೆಯಂತೆ ಇನ್ನು ನಾದುದಿನಗಳಲ್ಲಿಯೇ ಸೇನೆಯೊಡನೆ ಕಾಶ್ಮೀರದೇಶಕ್ಕೆ ಹೋಗ ಬೇಕಾಗಿರುವ ವಿಷಯವನ್ನು ಹೇಳಲು, ಕಿರೀಟವನು ತನ್ನ ಉಪಾ ಯವು ಕಾಲಾತಿಕ್ರಮದೋಷದಿಂದ ವಿಫಲವಾದೀತೆಂಬ ಶಂಕೆಯಿಂದ, ಅಷ್ಟರೊಳಗೇ ವಿವಾಹವನ್ನು ನೆರವೇರಿಸುವುದಾಗಿ ವಾಗ್ದಾನಮಾಡಿ, ಆತ ನಿಂದ ಸಂಮತಿಯನ್ನು ಪಡೆದು ಮನೆಗೆಬಂದು, ಮೌಹೂರ್ತಿಕರಿಂದ ವಿವಾಹಲಗ್ನವನ್ನು ನಿಶ್ಚಯಗೊಳಿಸಿ, ವಿವಾಹಕ್ಕೆ ತಕ್ಕ ಸಾಮಗ್ರಿಗಳ ನ್ನೆಲ್ಲ ಸಿದ್ಧ ಮಾಡಿದನು. ಬಳಿಕ ವಿವಾಹದ ದಿನ ಕಸ್ಯೆಯನ್ನು ಅಲಂಕರಿ ಸುವುದಕ್ಕೆ ಇಂದುಮತಿಯು ಪ್ರಯತ್ನ ಮಾಡಲು, ಉನ್ಮಾದಿನಿಯು ಅಸಂ ಮತಿಯನ್ನು ಸೂಚಿಸಿದಳು, ಅನಂತರ ಇಂದುಮತಿಯು ಉನ್ಮಾದಿನಿ ಯನ್ನು ಸಿಂಗರಿಸುವುದಕ್ಕೆ ಕುಂತಳೆ ಮತ್ತು ಕನಕಲತೆಯರೆಂಬ ಅವಳ ಗೆಳತಿಯರನ್ನೇ ನಿಯಮಿಸಿದಳು, ಅದರಂತೆ ಆಗೆಳತಿಯರು ಉನ್ಮಾದಿ ನಿಯ ಕೇಳೇಗೃಹಕ್ಕೆ ಪ್ರವೇಶಿಸಿ, ಅವಳನ್ನು ಸಿಂಗರಿಸಿಕೊಳ್ಳೆಂದು ಅನೇಕ ವಿಧವಾಗಿ ಬೋಧಿಸಿದರು, ಆದರೂ ಉನ್ಮಾದಿನಿಯು ಒಡಂಬಡದೆ ವ್ಯಸ ನದಿಂದ ಆಸ್ಥಳವನ್ನು ಬಿಟ್ಟು ತನ್ನ ಮನೆಯ ಹಿಂದಣ ಕೇಳೀವನಕ್ಕೆ ಹೊರಟುಹೋದಳು. ಬಳಿಕ ಕುಂತಳೆಯ ಕನಕಲತೆಯ ಅವಳ ಬೆನ್ನ ಟ್ವಿಬರಲು ಉನ್ಮಾದಿಸಿಯು ಜುಗುಪ್ಪೆಯಿಂದ:- ಎಲ್ಲಿಗೆ ಹೋದರೂ ಎನ್ನನ್ನು ಈ ಸಖಿಯರು ಬಿಡರಲ್ಲ; ಇವರ ಪರಿಹಾಸಗಳೆನಗೇನುಬೇಕು??? ಎಂದು ಹೇಳಲು ಕುಂತಳೆಯು ಕನಕಲತೆಯನ್ನು ಕುರಿತು ಆಶ್ಚರ್ಯದಿಂದ :- ಎಲೌ ಸಖಿ! ಇದೇಕೆ ಉನ್ಮಾದಿಯು ಹೀಗಾಡುವಳು? ಮಾತನಾಡಿಸಿ ದರೂ ಮಾತನಾಡಳು?” ಎಂದು ಕೇಳಲು ಕನಕಲತೆಯು ಹಾಸ್ಯದೊಡನೆ:- “ಎಲ್‌ ಕುಂತಳೆ! ಅದರ ತತ್ವವು ನಿನಗೆ ತಿಳಿಯದು ; ಅದು ಬೇರೆ. ) ಎಂದು ಹೇಳಲು ಕುಂತಳೆಯು ಕುತೂಹಲದಿಂದ:-“ ಅದೇನು ಹೇಳು??? ಎನಲು ಕನಕಲತೆಯು ಕಿರುನಗೆಯೊಡಗೂಡಿ ಓರೆನೋಟದಿಂದ ಉನಾ ದಿನಿಯನ್ನು ನೋಡುತ್ತ:- “ ಇದು ವಿವಾಹಕಾಲವೆಂಬುದರಿಯಯಾ?