ಪುಟ:ಧರ್ಮಸಾಮ್ರಾಜ್ಯಂ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಧರ್ಮಸಾಮ್ರಾಜ್ಯಮ್ [ಸಂಧಿ

  1. !!t 1, 14 /
  • * * * * *1* * * * * * * * *

ಬಿಡೋಣ.”ಎಂದು ಈರ್ವರೂ ಉನ್ಮಾದಿನಿಯ ತಾಯಿಯ ಬಳಿಗೆ ಹೊರ ಟುಹೋದರು. ಬಳಿಕ ಉನ್ಮಾದಿನಿಯು, ತನ್ನ ವಿವಾಹಕ್ಕಾಗಿ ತನ್ನ ತಂದೆಯು ಮಾಡಿರುವ ಗೂಡೋಪಾಯಗಳೊಂದನ್ನೂ ಅರಿಯದೆ, ತನ್ನ ಸಖಿಯರೂ ಮತ್ತು ತನ್ನ ತಾಯಿಯ ತನ್ನ ವ್ಯಥೆಯನ್ನು ಶಾಂತಿಗೊಳಿಸುವುದಕ್ಕಾಗಿ, ವಿವಾಹಕ್ಕೆ ಸರ್ವವೂ ಸಿದ್ಧವಾಗಿರುವುದೆಂಬುದಾಗಿಯೂ ಅದಕ್ಕಾಗಿ ಎನ್ನ ನ್ನು ಸಿಂಗರಿಸಿಕೊಳ್ಳೆಂಬುದಾಗಿಯೂ ಹೇಳಿದರೆಂದು ಭಾವಿಸಿಕೊಂಡು, ನಿಜವಾಗಿಯೂ ವಿವಾಹವನ್ನು ನಿಶ್ಚಯಿಸಿರುವುದನ್ನು ತಿಳಿಯದೆ ರಾಜ ನನ್ನ ಕುರಿತು ಹಂಬಲಿಸುತ್ತ, ಅಲ್ಲಿಯೇ ನಿಂತುಕೊಂಡು ನಿಟ್ಟುಸಿರು ಬಿಡುತಿರ್ದಳು, ಅಷ್ಟರಲ್ಲಿಯೇ ಆಗತಾನೇ ಉದಯಿಸುತಿರ್ದ ಚಂದ್ರ ನನ್ನು ಅಂಧಕಾರವು ಮುಸುಕುತ್ತಿರುವಲ್ಲಿ, ವಿರಹದಿಂದ ಹಾರಾಡುತಿರ್ದ ಚಕೋರಿಯು ಕಣ್ಣೆ ಕಾಣಿಸಲು, ಅದನ್ನು ಕುರಿತು ಅನ್ಯಾಪದೇಶವಾಗಿ * ಹಾ ! ದುರ್ದೆವವೆ ! ನಾನೊಬ್ಬಳೇ ಹತಭಾಗ್ಯಳೆಂದಿರ್ದೆನು ; ಎಲ್‌ ಚಕೋರಿಯೇ ! ನೀನೂ ಭಾಗ್ಯಹೀನೆಯೆ ? ಮಹಾಧರ್ಮಜ್ಞರೆಂದೂ ಲೋಕಪೂಜ್ಯರೆಂದೂ ಪ್ರಖ್ಯಾತಿಯನ್ನು ಪಡೆದಿರುವ, ಎಲೈ ಪವನಪರ್ಜ ನ್ಯರಿರಾ! ಹಸಿವಿನಿಂದ ಬಳಲಿ ಕಂಗೆಟ್ಟ ಚಕೊರಾಂಗನೆಯನ್ನು ದುಃಖ ಗೊಳಿಸುವುದು ಯುಕ್ತವೆ? ನಿಮ್ಮ ಕ್ರೌರ್ಯವನ್ನು ಅಬಲೆಯರಮೇಲ ಸಾತ್ವಿಕರಮೇಲೂ ಪ್ರಯೋಗಿಸುವುದು ನಿಮಗೆ ಗೌರವವೆ? ಹಾ! ರಾಜ ನೆ! ಜನಾಹ್ಲಾದಕರನೆಂದೂ ಕರುಣಾಶಯನೆಂದೂ ಸಕಲಕಲಾಭಿಜ್ಞ ನೆಂದೂ ಪ್ರತೀತಿಯನ್ನು ಪಡೆದ ನೀನೂ ಪರಕೈತವಕ್ಕಧೀನನಾಗಿ ಜಡಮತಿ ಯೆನಿಸಬಹುದೆ? ಹಾ! ಚಕೋರಿಗೆ ನೀನಲ್ಲದೆ ಜೀವನವಿನ್ನಾ ರು ? ನೀನೂ ನಿರ್ದಯನಾಗಬಹುದೆ? ಇದು ನಿನ್ನ ದೋಷವಲ್ಲ : ಏಕೆಂದರೆ ನೀನು ಪರ ಮಶಾಂತನು ದಯಾರಸಭರಿತನು;ಇತರರು ನಿನಗೆ ಹಾನಿಯನ್ನುಂಟುಮಾಡಿ ದರೂ ಆಕಷ್ಟಗಳನ್ನೆಲ್ಲ ಶಾಂತತೆಯಿಂದ ಸಹಿಸಿ ಪುನಃ ನಿನ್ನ ಗುಣಪ್ರಭಾವ ವನ್ನು ತೋರುವೆ; ಎಲೌ ಚಕೋರಿಯೇ! ಸ್ವಲ್ಪ ಕಾಲ ನಿನ್ನ ದುಃಖವನ್ನು