ಪುಟ:ಧರ್ಮಸಾಮ್ರಾಜ್ಯಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬] ಎರಡನೆಯ ಅಂಗ ೪೫ .vv • •v• • • \\• • • • •\ \ \ \ \ \14+ +1 ಶಾಂತತೆಯಿಂದ ಸಹಿಸು; ಏಕೆಂದರೆ ಪವನಸರ್ಜನ್ಯರ ದೃಷ್ಟತೆಯು ಕ್ಷಣ ಕವಾದುದು; ಬಳಿಕ ನಿನ್ನ ಮನೋರಥವು ನೆರವೇರಿ ರಾಜನ ಕರಸ್ಪರ್ಶದಿಂದ ನಿನ್ನ ದಾರುಣದುಃಖಗಳೆಲ್ಲವೂ ಶಮನಮಾಡಲ್ಪಡುವುವು?” ಎಂದು ಹಂಬ ಲಿಸುತ್ತಿರುವಲ್ಲಿ ನೂಪುರದ ಝಣತ್ಕಾರಶಬ್ದವು ಕೇಳಿಬರಲು.ಬೆಚ್ಚಿ ಅತ್ತಿತ್ತ ನೋಡಿ ಲಜ್ಜೆಯಿಂದ ಪುನಃ: ಎಲ್ಲಿಯೋ ಸಮಿಾಪದಲ್ಲಿಯೇ ಅಂದು ಗೆಯ ಝಣತ್ಕಾರವು ಕೇಳಿಬರುತ್ತಿರುವುದು ; ನಾನೀರೀತಿ ಮಾತನಾಡಿ ಕೊಂಡುದನ್ನು ಆರಾದರೂ ಕೇಳಿದರೊ? ಒಳ್ಳೆಯದು! ನಾನಿನ್ನು ದುಃಖ ವನ್ನು ಮರೆಮಾಚುವೆನು. ' ಎಂದು ಸೆರಗಿನಿಂದ ಕಣ್ಣೀರನ್ನು ಒರಸಿ ಕೊಂಡಳು. - ಇತ್ತಲಾ ಇದೆಲ್ಲವನ್ನೂ ಮರೆಯಲ್ಲಿ ನಿಂತು ಕೇಳುತಿರ್ದ ಇಂದು ಮತಿಯು ಉನ್ಮಾದಿನಿಗೆ ಕಾಣಿಸದಂತೆ, ಮರೆಯೋgಂದು ವ್ಯಸನದಿಂದ:- ಆಹಾ!ಉನ್ಮಾದಿನಿಯು, ತನ್ನನ್ನು ಚಕೋರಿಗೂ, ಮಹಾರಾಜನನ್ನು ಚನ್ದ್ರ ನಿಗೂ, ತನ್ನ ವಿವಾಹಕ್ಕೆ ವಿಘ್ನ ವನ್ನು ಂಟುಮಾಡಿದ ಪುರೋಹಿತಶಿಕ್ಷಣ ಜ್ಞರನ್ನು ಪವನಪರ್ಜನ್ಯರಿಗೂ, ಅಂತರಿಕ್ಷವನ್ನು ವಿಧಿಗೂ, ಹೋಲಿಸಿಕ್ಕೊಂ ಡು ಮಾತನಾಡಿಕೊಳುತಿರ್ದುದನ್ನು ನೋಡಿದರೆ-ಇವಳಿಗೆ ರಾಜನಲ್ಲಿಯೇ ಮನಸ್ಸು ನೆಟ್ಟಿರುವ ಅಂಶವೂ, ಮತ್ತು ಚಕೋರಿಯನ್ನು ಸಂತೈಸುವ ವ್ಯಾ ಜದಿಂದ ತಾನು ಮುಂದೆ ರಾಜನನ್ನೇ ಹೇಗಾದರೂ ಸೇರುವೆನೆಂಬ ಭರವಸೆ ಯಿಂದ, ತನ್ನನ್ನು ತಾನೇ ಸಂತೈಸಿಕೊಂಡ ಸಿಷಯವೂ ವ್ಯಕ್ತವಾಗುವುವು. ಮತ್ತುರಾಜನು ತನ್ನನ್ನು ತಿರಸ್ಕರಿಸಿರ್ದರೂ ಇತರಸ್ತ್ರೀಯರಂತೆ ಅವನನ್ನು ನಿಂದಿಸದೆ ಅವನ ಗಣಗಳನ್ನೇ ಕೆಂಡಾಡುವುದನ್ನು ನೋಡಿದರೆ, ಇವಳು ಇತರರನ್ನು ವರಿಸಲು ಇಚ್ಛೆಯಿಲ್ಲದವಳೆಂದು ವ್ಯಕ್ತವಾಗುವುದು, ನಿಜ! ಮಹಾನದಿಗಳು ಸಮುದ್ರದಲ್ಲಿ ಬೆರೆಯಲಿಚ್ಚಿಸುವವೇ ಹೊರತು ಪಲ್ಯ ಲಗಳನ್ನು ಬೆರೆಯುವುವೆ? ಇಲ್ಲ! ಮನೆಯ ಯಜಮಾನನಾದರೋ ಇವಳ ಮನೋನಿಶ್ಚಯವನ್ನು ತಿಳಿಯದೆ ವಿವಾಹವನ್ನು ತ್ವರೆಗೊಳಿಸಿರುವನು; ಇವಳಿಗಂತೂ ಈ ವಿಷಯವು ಇನ್ನೂ ಚೆನ್ನಾಗಿ ತಿಳಿಯದು; ಈಗೇನು