ಪುಟ:ಧ್ರುವಚರಿತ್ರೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕರ್ಣಾಟಕ ಕಾವ್ಯಕಲಾನಿಧಿ


ಎಂದೊಡಂಬಡಿಸೆ ಕೇಳದೆಯ ಸಂಗಂ ಪಿಡಿದು |
ಬಂದವೆನು ತಾ ನಿನ್ನ ಸಂಗಡೆಂಬುದ ಕಂಡು |
ನಿಂದು ಅಂತರ್ಧಾನಮಂ ನೆನೆಯಲಾಗ ಮನಗುಂದಿ ಕಡುಹಮ್ಮೈಸುತ ǁ
ನೊಂದು ಮಾಡುವುದೇನು ಹರಿ ಬಿಟ್ಟು ಪೋದನವ |
ನೆಂದ ಮಾತಿನವೊಲಾಂ ಪೋಪೆ ನಿಜಪುರಕೆನುತ |
ಅಂದು ಮನದಲ್ಲಿ ಯೋಚನೆಗೆಯ್ದು ಮೆಲ್ಲನಲ್ಲಿಂದ ನಡೆತಂದನಾಗ ǁ೧೭ǁ

17.

ಪುರಕೆ ನಡೆತರೆ ಕಂಡು ನಾರದಂ ಪಿತನೆಡೆಯೊ |
ಳರುಹಲ್ಕೆ ಬಂದು ಪಿತನತಿಜವದೆ ತಕ್ಕೈಸಿ |
ಕರೆದುಯ್ದು ರಾಜ್ಯಾಭಿಷೇಕವಂ ವಿರಚಿಸಲ್ ಪ್ರೇಮದಿಂದಾಗ ಧ್ರುವನು ǁ
ಧರೆಯನಿಪ್ಪತ್ತು (ಮೇಲಾ)ರು ಸಾಸಿರ (ವೆನಿಪ) |
ವರುಪ(ಪರಿಯಂತರಂ ಪೊರೆಯುತ್ತೆ) ಧರ್ಮದಿಂ |
ವರಸುದತಿ ಪುತ್ರರೌತ್ರಾದಿ ಸಂಪದ(ವೊಂದಿ) ಹರಿಧ್ಯಾನದೊಳಗಿರ್ದನು ǁ

18.

ಸಿರಿಯರಸ ಧ್ರುವಗೊಲಿದ ಚಾರಿತ್ರಸುಧೆಯನಾಂ |
ವಿರಚಿಸಿದೆನೊಲಿದು ಸಂಕ್ಷೇಪದಿಂದನುದಿನದೊ |
ಳರುಣೋದಯದೊಳಿದಂ ಹೇಳಿ ಕೇಳಿದ ಜನರ ದುರಿತೌಘಸಂಕುಲವನುǁ
ಪರಿದಿಕ್ಕಿಯವರ ಮನದಿಷ್ಟಸಂಪದಗಳಂ |
ವರದ ವೇಂಕಟರಾಯ ಕರುಣಿಸುವನೆಂಬುದಿದು |
ನಿರುತ ನಿಶ್ಚಯವೆಂದು ನೆರೆ ನಂಬಿ ಸಜ್ಜನರು ಮಹಿಳೆಯದಾಚರಿಪುದಿದನು ǁ


ಶ್ರೀ ಹರಯೇ ವಾಸುದೇವಾಯ ನಮಃ.