ಪುಟ:ಧ್ರುವಚರಿತ್ರೆ.djvu/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಿಕೆ

ಪುಣ್ಯಶ್ಲೋಕನಾದ ಧ್ರುವನ ಸ್ಮರಣೆಯನ್ನು ಮಾಡಿದರೆ ಪಾಪವು ನಾಶ
ವಾಗಿ ಪುಣ್ಯವು ಲಭಿಸುವುದೆಂದು ಸಾಮಾನ್ಯವಾಗಿ ನಮ್ಮ ಜನರಲ್ಲಿ ಮುಖ್ಯವಾಗಿ
ನಮ್ಮ ಹೆಂಗಸರಲ್ಲಿ ನಂಬಿಕೆ ಇರುವುದರಿಂದ ಅನೇಕರು ಈ ಉದಯರಾಗವನ್ನು
ಏಳುತ್ತಲೇ ಹಾಡುತ್ತಾರೆ. ಇದು ಉಡುಪಿಯ ಪ್ರಾಂತದಲ್ಲಿ ವಿಶೇಷವಾಗಿ ಪ್ರಚಾರ
ದಲ್ಲದೆ.

{{gap}]ಈ ಗ್ರಂಥದ ಕೊನೆಯ ಪದ್ಯದಲ್ಲಿ “ವರದವೇಂಕಟರಾಯ ಕರುಣಿಸುವನು"
ಎಂದಿರುವುದನ್ನು ನೋಡಿದರೆ, ಯಾವನೋ ವೆಂಕಟರಾಯನೆಂಬ ಕವಿಯು ಇದನ್ನು
ಬರೆದಿರಬಹುದೆಂದು ತೋರುತ್ತದೆ. ಶೈಲಿಯನ್ನು ನೋಡಿದರೆ ಸುಮಾರು ಮೂರು
ಶತಮಾನಗಳ ಹಿಂದೆ ಹುಟ್ಟಿರಬಹುದೆಂದು ತೋರುತ್ತದೆ. ಶೈಲಿಯು ಸುಲಭವಾಗಿದೆ.
ಗ್ರಂಥವು ಕಿರಿದಾದರೂ ಕಥೆಯು ಸಮಗ್ರವಾಗಿದೆ. ಸ್ತೋತ್ರಭಾಗದಲ್ಲಿ ಕೆಲವು
ಪದ್ಯಗಳು ಬಿಟ್ಟು ಹೋಗಿರುವಂತೆ ತೋರುತ್ತದೆ.

ಅಕ್ಷರಜ್ಞರಲ್ಲದ ಹೆಂಗಸರ ಬಾಯಲ್ಲಿ ಪಾಠವಾಗಿ ಬಂದಿರುವ ಕಾರಣ ಇದ
ರಲ್ಲಿ ಬಹಳ ತಪ್ಪುಗಳು ಬಿದ್ದಿದ್ದುವು. ಸಾಧ್ಯವಾಗುವತನಕ ಆ ತಪ್ಪುಗಳನ್ನು
ತಿದ್ದಿ, ತಿದ್ದಿದ ಭಾಗಗಳನ್ನು ಮೇಲುಗಡೆ ಹಾಕಿ ಗ್ರಂಥಸ್ಥ ಪಾಠಭೇದಗಳನ್ನು
ಪಾಠಾಂತರವಾಗಿ ಕೆಳಗೆ ಹಾಕಿದ್ದೇವೆ.

ಈ ಗ್ರಂಥವು ಮುದ್ದಾಗಿ, ಮಕ್ಕಳಿಗೆ ಬಾಯ ಪಾಠವನ್ನು ಮಾಡಲು ಉಪ
ಯುಕ್ತವಾಗಿರುವುದರಿಂದ ಇದನ್ನು ಮುದ್ರಿಸಿದ್ದೇವೆ. ಈ ಗ್ರಂಥವನ್ನು ಕಳುಹಿ
ಸಿಕೊಟ್ಟ ಮ||ರಾ|| ನೀಲಕಂಠರಾಯರಿಗೆ ಬಹಳ ಕೃತಜ್ಞರಾಗಿದ್ದೇವೆ.