ಪುಟ:ಧ್ರುವಚರಿತ್ರೆ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧ್ರುವಚರಿತ್ರೆ

6.

ಒಂದುತಿಂಗಳು ಫಲಾಹಾರದಿಂ ಕಿಳಿಯೆ! ಮ |
ತ್ತೊಂದೆರಡು ಪಕ್ಷಕ್ಕೆ ತಜಗೆಲೆಗಳಾಹಾರ |
ವೊಂದೆರಡು ಮಾಸಕ್ಕೆಯನಿಲನಾಹಾರದಿಂದಿರೆ ಕಂಡು ಪ್ರೇಮದಿಂದ ||
ಇಂದಿರೇಶಂ ತನ್ನ ಭಜಿಸಿದಂ ಗಡ ಹಸುಳೆ |
ನೋಂದಂ ತಪೋಜ್ವಾಲೆಯೊಳಗೆಂದು'ವಿನತೆಯಾ |
ನಂದನನ ಕಂದರವನೇ' ಬೇಗನೆ ಬಂದು ಬಾಲಕನ ಮುಂದೆಸೆದನು ||

7.

ಹರಿಯೆ ಹತ್ತಿರ ಬಂದು ನಿಂದಿರಲ್ ಕರಚರಣ |
ಸರಿಸಿಜದ ತಂಗಾಳಿ ಬೀಸಲ್ಕೆ ತಪದಲಿ |
ರ್ದುರಿಗೆ ತಂಪಾಗಲೆತ್ತಣದು ಶೈತ್ಯವಿದೆಂದು ಕಣ್ದೆಳೆದು ನೋಡಲಾಗ ||
ಪರಮಪುರುಷಂ ಸಮೀಪದೊಳಿರದ ಕಂಡು |
ನರೆ ಗೋಚರಿಸಲು ಪೊಂಪುಳವೋಗಿ ಸಾಷ್ಟಾಂಗ |
ವೆಂಗಿ ಏನಮಿತಭಾವದಿಂದೊಂದು ಗಳಿಗೆವcಮಿಕಿ ನಿದನಾಬಾಲನು |

8.

ಅರುಣಾತಿತೇಜದಿಂ ಚರಣಸಂಕೇಜದಿಂ |
ಮೆಹವ ಧ್ವಜವಜ್ರ ರೇಖಾಂಕದಿಂ ಮುಖ್ಯದಿಂ |
ನೆಳೆ ಝಣತ್ಕಾರದಿವಮಂಜೀರದಿಂ ಕಿರುಗೆಜ್ಜೆ ಪೆಂಡಯದಲಿ
ಮುಖ ತೇಜದ ಜಾನು ಜಂಭೆಯಿಂ ಭಂಗಿಯಿಂ |
ದುರುಟಿನಿಂದೆಸೆವ ರಂಭೋರುಗಳ ವಿವರಗಳ |
ವರಸುಪೀತಾಂಬರದ ಉಡಿಗೆಯಿಂ ತೊಡಿಗೆಯಿಂದಾರ್ತಿಕಮಣ್ಗೆ ಸೆದನು ||


ಪಾ.-1. ಕೆಲವು ಸಲಹಾರದಿಂದ.2. ತರಗೆಲೆಯು ಆಹಾರವು.
3. ಮತ್ತೊಂದೆರಡು. 4. ವಿನುತಾತ್ಮಜನ ಕಂದರವೇರಿ ಐತಂದಾಗ ಬಾಲ
ಕನಮುಂದೆ ಎಸೆದಿರ್ದನಂದು. 5. ಶೀತಳಸ್ಥಳದೆಂದು. 6. ಪರಿಯಂತರಂ
7. ಅರಣತಿತೇಜದಿಂ. 8, 9, 10, 11, 12, ನಂ. 13 ವನು.
14, ಜಂಗನಂ ರಂಗನಂ.