ಪುಟ:ನಂಜಕವಿಯ ಕಪೋತ ವಾಕ್ಯಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಅಂತವರಿಗೆ ಸಗ್ಗ ಶತಕಾಲವಾಯಿತ | ನಂತಕಾಲವು ಪರಹಿತಕೆ |
ಸಂತಸದಿಂದಲನ್ನ ವನಿತ್ತ ನರರಿಗ | ನಂತಪದವಿಯೀವ ಶಿವನು ǁ

೧೦೭


ಪರಹಿತದಿಂದಲಿ ನಡೆವ ಸತ್ಪುರುಷರ | ಕರೆದುಯ್ವನು ಕೈಲಾಸಕ್ಕೆ |
ಪರಪುರುಷಾರ್ಥವಗೈದರೆ ಮುಕುತಿಯ | ನಿರದೀವನು ನಿಶ್ಚಯವು ‖

೧೦೮


ವರಗುರುಮೂರ್ತಿಯ ಕರುಣದಿ ಪೇದೆ | ನುರುತರಕಾವ್ಯಮಾಲೆಯನು |
ಧರಿಸುತ್ತೆ ಮೆತ್ತಿಯಿಪ ಶರಣರ ಸಂಘಕ್ಕೆ | ನಿರುತ ಸೌಭಾಗ್ಯದೊರೆವುದು

೧೦೯


ಈಕತೆಯನು ಏಕಚಿತ್ತದಿ' ಕೇಳ್ವರ್ಗೆ| ಸಾಕಾರನಾಗುವ ಶಿವನು |
ಬೇಕಾದ ಪದವಿಯನಿತ್ತೋವುವ ಚಂದ್ರ | ಶೇಖರಲಿಂಗಕ್ಕೆ ಶರಣು ‖ಟೆಂಪ್ಲೇಟು:Right೧೧೦ಪುಲಿಸಮ್ಮವನುಟ್ಟ ಹರನಿಗೆ ಬಾಣಾ | ಸುರನ ಬಾಗಿಲ ಕಾದವಗೆ || ಅಲರುವಿಲ್ಲನ ಸುಟ್ಟು ಬೂದಿಯ ಧರಿಸಿದ | ಶಿವನಿಗೆ ಮಂಗಳಾರತಿಯು|| ೧೧೧

ಕಪ್ಪಗೊರಲಿಗೆ ಕಂದರ್ಪಸಿತಹಿತ | ಮುಪ್ಪರ ಗೆಲಿದಂತ ಶಿವಗೆ || ಸರ್ಪಭೂಷಣನಿಗೆ ಮುನಿಜನಸ್ತೋತ್ರಗೆ | ಯೊಪ್ಪಿಯಾರತಿ ಬೆಳಗುವೆನು| ೧೧೨ ಗಜಚರ್ಮಾಂಬರನಿಗೆ ಗೌರಿಯ ರಮಣಗೆ | ತ್ರಿಜಗವ ಪೊರೆಯುವ ಶಿವಗೆ || ಅಜಹರಿಸುರರೆಲ್ಲ ವಂದಿಸುತಿರುತಿಹ | ಭುಜಗಭೂಷಣನಿಗಾರತಿಯು|| ೧೧೩. ಗಂಗಾಧರನಿಗೆ ಮಂಗಳಮಹಿಮಗೆ | ಸಂಗ ಬಸವ ಲಿಂಗನಿಗೆ || ಹಿಂಗದೆ ಭಕ್ತರುತ್ತುಂಗಪದವನೀವ | ಲಿಂಗೇಶ್ವರನಿಗಾರತಿಯು || ೧೯ ೪ ಕಾಮಿತಫಲವೀವ ಕಾರುಣ್ಯಸಿಂಧುಗೆ | ನೇಮನಿಷ್ಟೆಯೊಳಿರುತಿಗೆ || ಕಾಮನೈಯಗೆಯರ್ಧಾಂಗವನಿತ್ತ ಹರಿಹರ | ನಾಮಗೆ ಮಂಗಳಾರತಿಯು|| ೧೧೫ ಧರೆಯೊಳು ಸನ್ಮೂಲಶಿಖರಿನಿವಾಸಗೆ | ಕರುಣಿ ಕಾಶಿಯ ವಿಶ್ವೇಶ್ವರಗೆ | ಗುರುವರನಹ ಚಂಪಕ ಸಿದ್ಧಲಿಂಗೇಶ | ಗೆ¥ಗಿಯಾರತಿ ಬೆಳಗುವೆನು|| ೧೧೬. ಇಂತು ಕಪೋತವಾಕ್ಯಂ ಸಂಪೂರ್ಣ --C7,44+xx -

  • * 14 }+