ಪುಟ:ನಂಜಕವಿಯ ಕಪೋತ ವಾಕ್ಯಂ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ರನು ಸುಗ್ರೀವಾದಿಗಳಿಗೆ ಈ ಇತಿಹಾಸವನ್ನು ಹೇಳಿದುದಾಗಿಹೇಳಿದೆ. ಈ ಗ್ರಂಥ ದಲ್ಲಿ ಪತಿಪತ್ನಿಯರ ಅನುರಾಗವೂ ಕರ್ತವ್ಯಗಳೂ ಚೆನ್ನಾಗಿ ನಿರೂಪಿತವಾಗಿವೆ. ಇದರ ಬಂಧವು ಸರಳವಾಗಿದೆ ; ಗ್ರಂಥವಿಷಯವು ಶ್ರೇಷ್ಠವಾಗಿದೆ. ಈ ಗ್ರಂಥದಲ್ಲಿ ೭೫ ರಿಂದ ೮೫ ವರೆಗಿನ ಸಾಂಗತ್ಯಗಳಲ್ಲಿ ಹೇಳುವ ವಿಷಯವು ಬಾಲ ಪಾಠಕರಿಗೆ ಯೋಗ್ಯವಲ್ಲವಾದುದರಿಂದ ಅವು ಬಿಡಲ್ಪಟ್ಟಿವೆ. ಈ ಗ್ರಂಥದ ಪ್ರಚಾರದಲ್ಲಿ ಮ|| ರಾ| ಯಸ್. ಜೆ. ಗೋವಿಂದರಾಜಯ್ಯಂ ಗಾರರ ಸಹಾಯವು ಸ್ಮರಣೀಯವಾಗಿದೆ. 7-11. 1912. ಪ್ರವರ್ತಕ