ಪುಟ:ನಂಜಕವಿಯ ಕಪೋತ ವಾಕ್ಯಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಆವ ದೇಶಗಳಿಂದೆ ಹವಣಿಸಿ ಬಂದಿರಿ | ಭಾವದಿ ಪೇತಮಗೆನಲು | ನಾವೀಗ ದೇವರ ಲೋಕದಿಂದಿದೆವು | ಭೂವಳಯವನು ನೋಡಲಿಕೆ || ೧೧ ನಿಮ್ಮ ಲೋಕದೊಳಿಹ ಧರ್ಮವ ಪೇರೆಂದು | ವೊಮ್ಮನದೊಳು ಬೆಸಗೊಳಲು | ಉಮ್ಮ ಹದಲಿ ಸೇದು ಕಪೋತಕನಾಗ | ಗಮ್ಮನೆ ಶಿವನಿರ್ಪ ತಾವ || ೧೨ ಹರನೆಡಬಲದಲ್ಲಿ ಹರಿಯಜಮುನಿಗಳು | ಇರುವರು ಭರವಶದಿಂದೆ || ಧುರಧೀರ ಪಡೆವಳ್ಳ ಸುರರು ದಿಕ್ಷಾಲರು | ಇರುವರು ಶಿವನೆಡಬಲದಿ || ೧೩, ನಂದಿನಾಥನು ಶೃಂಗಿ ವೀರೇಶಷಣ್ಮುಖ | ಹೊಂದಿಹ ವಿಚ್ಛೇಶ್ವರನು | ಇಂದುಧರನಯೆಡಬಲದಲ್ಲಿ ಸೂರಿಯ | ಚಂದ್ರರು ಮೆರೆದು ರಾಚಿದರು || ೧೪ ಸುತ್ತಲು 'ಸಕೋಟಿ ದೇವತೆಗಳು | ನೆಲ ಗಂಗೆ ತೊಡೆಯೊಳು | ಸತ್ಯಳು ಪಾರ್ವತಿಯೊತ್ತಿಲಿ ಗಣಗಳ | ಮೊತ್ತವರೇನ ಬಣ್ಣಿಸುವೆ || ೧೫ ಕಕ್ಕಯ್ಯ ಚೀಳಾಳ ರಕ್ಕಸ ಬೊಮ್ಮಯ್ಯ ನೊಕ್ಕಲಿಗರ ಮುದ್ದಯ್ಯ | ಅಕ್ಕಿಂ ನಿಂದರು ಒಲ್ಲಾಳ ಜೋಳರು | ಮುಕ್ಕಣ್ಣ ಶಿವನೆಡಬಲದಿ || ೧೬ ಚೆಂದೈಯ್ಯ ಪ್ರೀತಿಯ ನಂದಿಕೇಶ್ವರ ಮುನ್ನ | ಕಂದ ಗಣಪ ದೇವಯ್ಯ | ಅಂದದ ಶಿವಶರಣರುಯಿಂತಿರುತಿಹ | ಚೆಂದವನೇನ ಬಣ್ಣಿಸುವೆ || ಚೆನ್ನಯ್ಯನಪ್ಪಣ್ಣ ಕಿನ್ನರಿಬೊಮ್ಮೆಯ | ಮಾನನು ಕವಿಕಾಮದೇವ | ಉನ್ನತ ಹರಳಯ್ಯ ಮಧುವಯ್ಯ, ಶ್ವಪಚಯ | ಪನ್ನಗಧರನೆಡಬಲದಿ || ಕಂದ ಬೆಳ್ಳಾಳರು ಸಂಗಣ್ಣ ಭೌಮರು | ನಂದಿಕೇಶ್ವರ ಮೊದಲಾಗಿ | ಬಂದು ನೆರೆದರು ಸಂಗನ ಶರಣರು | ಇಂದುಧರನಯೆಡಲದಿ !! ಇಂತಪ್ಪ ಶರಣರು ಸಂತೋಷದಿಂದಲಿ | ಕಂತುಹರನ ಯೆಡಒಲದೆ ಅಂತಕಾಂತಕ ರವಿಕೋಟಿಯ ಗಣಗಳು | ಸಂತೋಷದಿಂದಿರುತಿಹರು || ೨೦ ಶಿವನಿಹ ಕೈಲಾಸಪ್ರರದಿಂದಲು ದೆವು | ಭವೆಯರಸನ ಕರುಣದಲಿ | ತವೆ ಹದಿನಾಲ್ಕು ಲೋಕವ ಚರಿಸುತಲೀಗ | ಅವಸೀಧರಕಿದಕಿದೆ || ೨೧ ಹೊಂದಾವರೆ ಗಿಡ ಮರಬಾಳೆ ಸಸಿಗಳ | ಚೆಂದವನೇನ ಬಣ್ಣಿಪೆವು || ಒಂದಕ್ಕೆ ನೂರ್ಮಡಿ ಯೋಗಿಗಣಂಗಳು | ಬಂದರು ನಮ್ಮ ಪರ್ವತಕೆ || ೨೨ ಎಂದ ಮಾತನು ಕೇಳಿ ನಿಂದು ಕಪೋತಕ | ನೋಂದಿ ಸುಬದಿ ಬಾತಿರಲು | ಕಂದನ ಪಡೆದದು ಚೆಂದದಿಂದಿರುತಿರೆ | ಮುಂದೊಂದು ವಿಘ್ನ ಸಂಭವಿಸೆ || ೨೩ ಇರುತಿರೆ ಸುಖದಲ್ಲಿ ಮಗುಳೊಂದು ದಿವಸದಿ | ಭರದಿಂದೆ ಬೇಡ ಬೇಂಟೆಯನು | ಸರವಲೆ ಹಾಸುವಲೆಗಳಿಂದ ಬಿಗಿದನು | ತರುಗಳ ಮy.ತೆಯಲ್ಲಿ ಬರುತೆ || ೨೪ ಸುತ್ತ ಹನ್ನೆರಡು ಯೋಜನ 'ಯರೆಮಲೆಯೊಳ | ಗೊತ್ತಾಗಿ ಬಲೆಯ ಬೀಸಿದನು | ...