ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೩
ಮಳೆ ಬಂದಾಗ....

ಜಿಟಿಜಿಟಿ ಮಳೆ ..... ಹಾಳು ಮಳೆ....ಹಗಲು - ರಾತ್ರಿ ಸದಾ ಮಳೆ ಆದೂ ಈ
ಅಕ್ಟೋಬರದ ಆಕಾಲದಲ್ಲಿ .ಸದ್ದು -ಗದ್ದ ಲ, ಗಡಿಬಿಡಿ -ಭಾನಗಡಿ ತುಂಬಿದ
ಮುಂಬಯಿಯ ಯಾಂತ್ರಿಕ ಜೀವನದಿಂದ ದೂರವಾಗಿ ದೀಪಾವಳಿ ರಜೆಯ ಒಂದು
ತಿಂಗಳನ್ನಾದರು ಸ್ವಲ್ಪ ಶಾಂತಿಯಿಂದ ಕಳೆಯೋಣವೆಂದು ಬೃಹದಾಸೆ ಹೂತ್ತು,
ನಿರ್ಜನವಾದ ದಾರಿಗಳಗುಂಟು ಏಕಾಕಿಯಾಗಿ ತಿರುಗಾಡಿ ಆನಂದಿಸಬಹುದೆಂದು
ಬಯಕೆಯೋಂದಿಗೆ ಬೆಳಗಾವಿಯಲ್ಲಿ ಗೆಳತಿ ಸರೊಜಳ ಮನೆಗೆ ಬಂದಿದ್ದಾಗಿತ್ತು. ಬಂದು
ಎಂಟು ದಿನ ಕಳೆದರೂ ಈ ಮಳೆ ನಿಲ್ಲುವ ಚಿಹ್ನೆಯೇ ಕಾಣಲೊಲ್ಲದು. ಬರುವಾಗ
ಇದ್ದ ಉತ್ಸಾಹದ ಒಂದಂಶವೂ ಉಳಿಯಲಿಲ್ಲ. ಹೊರಗಡೆಯ ಮುಗಿಲು ತುಂಬ ಕಪ್ಪುಮೋಡ. ರಸ್ತೆ ತುಂಬ
ಕೆಸರು ನೀರು. ಮತ್ತೆ ಎಡೆಬಿಡದೆ ಸುರಿಯುವ,ಒಮ್ಮೆ
ನಿಧಾನವಾಗಿ ಹನಿಯುವ ಮಳೆ.ಹೊರಗೆ ಹೋಗಲಾಗದು.ಒಳಗೆ ಕುಳಿತಿರಲು ಬೇಸರ.
ಹಿಗಾಗುವುದೆಂದು ಮೂದಲೇ ಸ್ವಲ್ಪ ಕಲ್ಪನೆಯಾದರೂ ಬಂದಿದ್ದ ರೆ....ಛೆ‌....
"ಈಕಿ ನನ್ನ ಹಳೇ ಗೆಳತಿ ಸಹನಾ.ಮುಂಬಯಿಯೊಳಗ ಸ್ಕೂಲ್ ಆಫ್ ಆರ್ಟ್ಸ್
ಆದ ಆಲ್ರಿ ,ಆಲ್ಲೆ ಕಡೀ ವರದಾಗ ಇದ್ದಾಳ ಈ ಸರೆ"-ಸರೊಜ ತನ್ನ ಗಂಡನಿಗೆ
ಪರಿಚಯ ಮಾಡಿಕೊಡುತ್ತ ಹೇಳಿದ್ದಳು.
"ಓಹೊ, ಹಂಗಾರ ನೀವೂ ಒಬ್ಬ ಮಾಡರ್ನ್ ಆರ್ಟಿಸ್ಟ್ ಇರಬೇಕು"
--ಎಂದಿದ್ದ ಆವಳ ಗಂಡ ತನ್ನ ಕಡೆ ವಿಚಿತ್ರವಾಗಿ ನೊಡುತ್ತ,'ಮಾಡರ್ನ್ ಆರ್ಟಿಸ್ಟ್'
ಎಂದರೆ ಯಾವುದೊ ಝೂದೊಳಗಿನ ಪ್ರಾಣಿಯೆಂಬಂತೆ.
ಸಹನಾ ಉತ್ತರಿಸುವ ಮೊದಲೇ ಹುರುಪಿನಿಂದ ಹೇಳಿದ್ದಳು ಸರೋಜ,
"ಹೌದ್ರೀ,ಸಹನಾನ ಎಲ್ಲ ಪೇಂಟಿಂಗ್ಸ್ ಒಂದೊಂದು ಕ್ರಾಂತಿ ಮಾಡ್ಯಾವ. ಅಲ್ಲಿಯ
ಪ್ರೊಫೆಸರುಗಳಿಗೂ ಆಕೆಯ ಪೂರ analyse ಮಾಡೊದು
ಸಾಧ್ಯಿಲ್ಲಂತ .ಏನಂತ ತಿಳದ್ರಿ ನನ್ನ ಗೆಳತಿ ಆಂದರ ! -ಆಷ್ಟರಿಂದಲೇ
ಬೇಸರವಾಗಿತ್ತು ತನಗೆ .ಆಕೆಯ ಗಂಡನ ಮಾತು ಕೇಳಿದಾಗಂತೂ ಸಿಟ್ಟೇ ಬಂದಿತ್ತು.
"ಹೌದಲ್ಲ ಅದೇ ಮತ್ತು ಈ ಮಾಡರ್ನ್ ಆರ್ಟಿನ ಮಜಾ, ಯಾರಿಗೂ
ತಿಳೀಲಾಧಾಂಗ ಏನಾರೆ ಒಂದು ತಗದಬಿಟ್ಟರಾತು, ಅದ್ಭುತ ಮಾಡರ್ನ್ ಪೇಂಟಿಂಗ್