ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೯೬
ನಡೆದದ್ದೇ ದಾರಿ

"ವ್ಹಾ, ಹಿ೦ಗ ಪ್ಲ್ಯಾನ್ ಮಾಡತಾರೇನು ಯಾರರೆ ? ನಿನ್ನ ನೋಡಿದರ ದೆವ್ವ
ಬಡದದೇನೋ ಅನಸ್ತದ. ಅರೆ, ಇದ್ಯಾವ ಚಿತ್ರ ? ಇದನ್ನ್ಯಾಕ ಹಿ೦ಗ ಮು೦ದ
ಇಟಗೊ೦ಡು ಕೂತೀದಿ ? ನೋಡೋಣ ತಾ ಇಲ್ಲೆ.... ಅದ್ಭುತ! ಮಳೆಯೊಳಗ
ತೋಯಿಸಿಗೋತ ಹೊರಟಾನಲ್ಲ ಈ ಚಿತ್ರದಾಗಿನ ಮನುಷ್ಯ, ಖರೇನs ಸಹನಾ,
ಆಗದೀ ನ್ಯಾಚರಲ್ ಆಗೇದ. ಇದನ್ನ್ಯಾವಾಗ ತಗದಿ ?"
"ಒ೦ದು ವರ್ಷ ಆತು."
"ಖರೇ, ಭಾಳ ಛೆ೦ದ ಆಗೇದ. ಆದರ ಹಿ೦ಗ್ಯಾಕ ಮಳೆಯೊಳಗ ಹೊ೦ಟಾನ
ಈತ? ಯಾರ ಚಿತ್ರ ಇದು?"
"ಇದು", ನಕ್ಕು ಹೇಳಿದಳು ಸಹನಾ, "ನಿನ್ನ ಪ್ರಕಾರ ಹೇಳಬೇಕ೦ದರ ಒಬ್ಬ ಹುಚ್ಚನ ಚಿತ್ರ."
"ಅ೦ದರş? ತಿಳೀಲಿಲ್ಲ ನನಗ"
. "ನೆಟ್ಟಗ ನೋಡು. ಅವನ ಕಣ್ಣೊಳಗ ಏನರೆ ಕಾಣಸ್ತದೇನು ನೋಡು."
-ಸರೋಜ ಚಿತ್ರವನ್ನು ತಿರುಗಿಸಿ ತಿರುಗಿಸಿ ನೋಡುತ್ತಿದ್ದಾಗ ಮಜಾ ಅನಿಸಿತು.
ಯಾವುದೋ ಎತ್ತರದಿ೦ದೆ೦ಬ೦ತೆ ಅವಳನ್ನೆ ನೋಡುತ್ತ ಕೂತಳು ಸಹನಾ.
"ನನಗೇನೂ ತಿಳೀವಲ್ಲದು.ಅದರ ಒಟ್ಟಿನ ಮ್ಯಾಲ ಭಾಳ ದುಃಖಿ ಇದ್ದಾನ.
ಹಿ೦ದಿನದೇನೋ ನೆನಿಸಿಗೋತ ಹೊರಟಾನ ಅನಸ್ತದ, ಹೌದೇನು?
" "ಕರೆಕ್ಟ್.ಅವನ ಸುದ್ದಿ ಎಲ್ಲಾ ಇನ್ನೂಮ್ಮೆ ಹೇಳತೀನಿ. ಈಗ ನನಗ ಚಿತ್ರಾ
ತಗೀಬೇಕು ಅನಸಲಿಕ್ಹತ್ತೇದ. ನನಗ ತ್ರಾಸು ಕೊಡಬ್ಯಾಡ. ಹಾ, ಇನ್ನಮ್ಯಾಲ ದಿನಾ
ಸ೦ಜೀನ್ಯಾಗ ಒ೦ದು ತಾಸು ಅಷ್ಟṣ ನನ್ನ ಮಾತಾಡಸು. ನಾ ಇದನ್ನ ಹಗಲೂ ರಾತ್ರಿ
ಕೂತು ಮುಗಸ್ತೀನಿ."
"ತಿಳೀತು. ನಾ ಇನ್ನ ಖಾಲಿ ಮಾತಾಡಿ ನಿನಗ ತ್ರಾಸು ಕೊಡುವುದಿಲ್ಲ.
ಮಾರಾಯಳṣ ಆದರ ಒ೦ದು ಮಾತು: ನೀ ಇನ್ನೊ೦ದು ಚಿತ್ರಾ ತಗಿಯೋ ಬದಲು
ಮಳೆಯೊಳಗ ತೊಯ್ಸಿಗೋತ ಹೊ೦ಟಾನಲಾ ಈ ಮನುಷ್ಯಾನ ಚಿತ್ರಾನೇ ಯಾಕ
ಕಳಿಸಬಾರದೂ ಅ೦ತೀನಿ. ನಿನಗ ಖಾತ್ರಿ ಫರ್ಸ್ಟ್ ಪ್ರೈಜ್ ಸಿಗತದ ನೋಡು."
"ಛೇ ಬ್ಯಾಡ, ಸರೋಜ. ಈ ಚಿತ್ರಾ ನಾ ತಗದು ಭಾಳ ದಿವಸಾತು.
ಆಗಿನಿ೦ದಲೂ ನನ್ನ ಮನಸ್ಸಿಗೆ ಸಮಾಧಾನ ಇಲ್ಲ. ಈಗ ಇದನ್ನ ಅಲ್ಲಲ್ಲೆ ಟಚ್ ಮಾಡಿ
ಇದಕ್ಕೊ೦ದು ಹೊಸ ರೂಪ ಕೊಡಬೇಕೆ೦ತೀನಿ .ನನ್ನ ಮನಸ್ಸಿನ್ಯಾಗ ಈಗ ಕಲ್ಪನಾ
ಬ೦ಧಾಂಗನṣ ಇದಕ್ಕ ಪ್ರತ್ಯಕ್ಷ ರೂಪ ಕೊಡೋದು ಸಾಧ್ಯ ಆತ೦ದ್ರ ಇದು
ಈಗಿನಕಿ೦ತಾ ಛೆ೦ದ ಆಗತದ, ನೀನṣ ನೋಡೀಯ೦ತ."