ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೮
ನಡೆದದ್ದೇ ದಾರಿ

ಇವರು ಆಫೀಸಿನಿಂದ ಬರೂತನಕಾ.'
-ಸಹನಾನ ಬ್ರಷ್ ಚಿತ್ರದ ಮೇಲಾಡುತ್ತಿತ್ತು. ಬಟ್ಟೆ ತೊಯ್ದಿರುವ
ಗುರುತನ್ನು ಅಳಿಸಿಹಾಕಲು ಯತ್ನಿಸುತ್ತ. ಯೋಚಿಸಿದಷ್ಟೇನೂ ಕಠಿಣವೆನಿಸಿರಲಿಲ್ಲ ಈ
ಕೆಲಸ. ಒಮ್ಮೆ ಬಣ್ಣ ಹಾಕಿದ್ದರ ಮೇಲೆಯೇ ಮತ್ತೊಮ್ಮೆ ಬಣ್ಣ ಹಾಕಿದರೂ.
ಹಾಗೆಂದು ನೋಡಿದವರಿಗೆ ತಿಳಿಯುವಂತಿರಲಿಲ್ಲ. ಹೀಗೇ ಮುಂದುವರಿದರೆ ಎಂಟೇ
ದಿನಗಳಲ್ಲಿ ಪೂರಾ ಮುಗಿಯಬಹುದು. ಈ ಚಿತ್ರದಲ್ಲಿನ ವ್ಯಕ್ತಿ ಮಳೆಯಲ್ಲಿ ನೆನೆದ
ಗುರುತೊಂದೂ ಉಳಿಯದೆ ಎಳೆಬಿಸಿಲಲ್ಲಿ ವಾಕಿಂಗ್ ಹೊರಟಿರುವಂತೆ ಕಾಣಬಹುದು.
ತನ್ನ ಪ್ರೊಫೆಸರ್ ಮೆಚ್ಚುವುದು ನಿಶ್ಚಿತ....
"ಯಾರು ಸಹನಾ ಈ ಮನುಷ್ಯ ?"
ಇವನ್ಯಾರೋ ಮಹತ್ವದ ವ್ಯಕ್ತಿಯೆಂದುಕೊಂಡಿರುವಂತಿದೆ ಸರೋಜ. ಒಂದೇ
ವರ್ಷದ ಹಿಂದೆ ಮುಂಬಯಿಯ ಜನನಿಬಿಡ ಬೀದಿಗಳಲ್ಲಿ ವ್ಯರ್ಥ ಹಗಲು-ರಾತ್ರಿ ಆಲೆಯುತ್ತಿದ್ದ ಸಾಮಾನ್ಯ ತಲೆತಿರುಕ ಇವನೆಂದು ಅವಳಿಗೆ ತಿಳಿದರೆ, "ಛೆ, ಇಂ
ಥವನ ಚಿತ್ರ ತೆಗೆಯುವುದೆ ನೀನು? ಆನ್ನಬಹುದು ಆಕೆ, ತಾನೇಕೆ ತೆಗೆದೆ ಇಂಥವನ
ಚಿತ್ರ?
"ಹೇಳಿದೆನಲ್ಲ ಸರೋಜ, ಅವನೊಬ್ಬ ಹುಚ್ಚ."
"ಈ ಜಗತ್ತಿನ್ಯಾಗ ಒಂದ ರೀತಿಯಿಂದ ಎಲ್ಲಾರೂ ಹುಚ್ಚರೇ ಅಂದಿದ್ದಿ ಮೊನ್ನೆ.
ಈತ ಎಂಥಾ ಹುಚ್ಚ ? ನಿನಗೆಲ್ಲೆ ಗಂಟುಬಿದ್ದ ?"
"ನೀ ಸುಳ್ಳೇ ಏನರೆ ಅನಬ್ಯಾಡ. ಹಾಂಗ ಕೇಳೆದರೆ ಆತ ಹುಚ್ಚನs ಅಲ್ಲ. ನಮ್ಮ
ಕಾಕಾನ ಕಡೆ ಬಂದಿದ್ದ ಒಮ್ಮೆ ಹಿಂದಕ. ತನ್ನ ವಿಚಿತ್ರ ಜಡ್ಡಿನ ವಿಷಯ ಹೇಳಿ, ಔಷಧ
ಕೊಡ್ರಿ ಅಂದ."
"ಅಂದ್ರ ಖರೇನs ಹುಚ್ಚನ ಚಿತ್ರೇನಿದು ?"
"ಅನ್ನು ಬೇಕಾದರ. ಅವನು ಜಡ್ಡು ಅಂದರ -ಅವನಿಗೆ ಸದಾ ಮಳೆಯೊಳಗ
ತೊಯಿಸಿಗೋತ ತಿರುಗಾಡಬೇಕು ಅನಸತಿತ್ತಂತ. ಅದು ತಪ್ಪು, ಅದರೊಂದ ತ್ರಾಸ
ಆಗತದಂತ ಗೊತ್ತಿದ್ದರೂ ಮಳೆ ಬಂದ ಕೂಡಲೇ ತನಗೆs ಗೊತ್ತಾಗಧಾಂಗ
ಹೊರಟಬಿಡತಿದ್ದನಂತೆ. ಒಮ್ಮೊಮ್ಮೆ ಹಿಂಗ ಎರಡೆರಡು ದಿವಸ ತೊಯಿಸಿಗೊಂಡು
ಆಮ್ಯಾಲ ಜಡ್ಡು ಬಂದು ಮಲಗತಿದ್ದನಂತ. ಆದರ ಮತ್ತ ಮಳೆ ಸುರು ಆದಾಗ
ಎದ್ದು ಹೊರಗ ನಡೀತಿದ್ದನಂತ. ನಮ್ಮ ಕಾಕಾ ಬೇಕಾದಷ್ಟು ಮಾನಸಿಕ ರೋಗಕ್ಕ
ಔಷಧ ಕೊಟ್ಟಾರ. ಅದರ ಈ ಕೇಸು ಮಾತ್ರ ಅಗಿದೀ ವಿಚಿತ್ರ ಇತ್ತು."
"ಮುಂದೇನಾತು ?"
'ನಮ್ಮ ಕಾಕಾ ಅವನಿಗೆ ಆರು ತಿಂಗಳು ಅವಧಿ ಕೊಟ್ಟರು. ದಿನಾ ಸಂಜೀನ್ಯಾಗ