ಪುಟ:ನಡೆದದ್ದೇ ದಾರಿ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೦

ನಡೆದದ್ದೇ ದಾರಿ

ಇಂದು ಸಾಕಷ್ಟು ಬಿಸಿಲು ಬಿಡಿದರಿಂದಲೋ ಏನೋ, ಚಿತ್ರದ ಕೆಲಸದಲ್ಲಿ
ಉತ್ಸಾಹವೆನಿಸ ತೊಡಗಿದೆ. ಇದನ್ನು ನೋಡಿದರೆ ಒಮ್ಮೆ ತೆಗೆದ ಚಿತ್ರವನೇ ರಿಪೇರಿ
ಮಾಡಿದ ಹಾಗೆ ಅನಿಸುವುದಿಲ್ಲ. ಅವನ ಬಟ್ಟೆಯಂತೂ ಒಮ್ಮೆ
ತೊಯಿಡ್ತ್ಯಂಬುದರ ಗುರುತೇ ಇಲ್ಲ. ಇದಕ್ಕಾಗಿ ರಾತ್ರಿ ಯಿಡೀ ಕಣ್ಣಲಿ ಕಣ್ಣಟ್ಟು
ಶ್ರಮಿಸಬೇಕಾಯಿತು. ಈ ಚಿತ್ರವನ್ನು ಹಿಂದೆ ಆಯಿಲ್ ಪೈಂಟ್ ಮಾಡದೆ
ವಾಟರ್ ಪೈಂಟ್ ಮಾಡಿದ್ದು ಈಗ ಎಷ್ಟು ಅನುಕೂಲವಾಯಿತು ! ಇನ್ನು
ಹಿನ್ನಲೆಯಲ್ಲಿನ ಗಿಡ -ಗುಡ್ಡ ರಸ್ತೆಯ ಮೇಲಿನ ಮಳೆಯ ಗುರುತು ಅಳಿಸಿ,
ಮುಗಿಲ ಲೊಬ್ಬ ಸೂರ್ಯನನ್ನು ಮುಡಿಸಿ , ಮತ್ತೆ ಸ್ವಲ್ಪ ನೆರಳು-ಬೆಳಕನ್ನು
ಚಿತ್ರಿಸಿದರಾಯಿತು . ಕೊನೆಗೆ ಮುಖ - ತಲೆಯನ್ನು ಸ್ವಲ್ಪ ಟಚ್ ಮಾಡಬಹುದು.....
-"ಏನಂತೀರಿ ಆರ್ಟಿಸ್ಟ್ ಬಾಯಿಯವರು, ಊಟಾ, ಸುದ್ದಾ, ನೆಟ್ಟಗೆ
ಮಾಡಲಿಲ್ಲ ಇವತ್ತು. ಹಿಂಗಾದರ ನಿನ್ನ ಪ್ರಕೃತಿ ಕೆಟಿತು ಅಂತ ಅಂಜಿಕೆ ನನಗ ... ಅರೆರೆ,
ಎಷ್ಟು ಪ್ರೋಗ್ರೆಸ್ ಆಗೇದಲ್ಲ ಸಹನಾ ನಿನ್ನ ಚಿತ್ರದಾಗ ! ಈ ಮನುಷ್ಯನ ತಲಿ ಒಂದು
ಬಿಟು ಉಳದದ್ದೆಲ್ಲ ಬದಲಾಗಿ ಬಿಟ್ಟದಿದೆ . ಇದೆಂಥ ಜಾದು ಆದ ನಿನ್ನ
ಕೈ ಯೊಳಗೆ ! ನಿನ್ನ ಪ್ಲಾನ್ ಕೇಳಿದಾಗ ಎಷ್ಟು ಇದು ನ್ಯಾಚುರಲ್ ಆಗಬಹುದು
ಅನಿಸಿದ್ದಿಲ್ಲ. ನನಗೆ ಖರೇನ ಸಹನಾ. ಎಂಥಾದೋ ಹೊಸಾ ಜೀವ ತುಂಬಿಧಾಂಗ
ಅನಸ್ತದ ಅವನ ಮೈಯೊಳಗೆ."
"ನಿನ್ನ ಗಂಡ ನೀ ಸಿಟ್ಟಗೆದ್ದಾಗ ನಿನ್ನ ಸುಳ್ಳು ಹೊಗಳೂಹಾಂಗ ನನ್ನ
ಹೊಗಳಬ್ಯಾಡ ಸರೋಜ . ನೀ ಹೇಳಿದಷ್ಟು ಛಲೋ ಆಗಿತ್ತಂದ್ರ ನನಗೆ ಈಗ
ಒಂದು ಕಪ್ ಕಾಫಿ ಮಾಡಿಕೊಡು ನೋಡೋಣ. ಯಾಕೋ ಕೆಟ್ಟ ತಲೆನೋವು
ಬಂದದ."
"ಓ, ಯಸ್ ! ಆದರೆ ಅಮೂಲ್ಯ ನನಗೆ ನೀನು ಅವತ್ತು ಅರ್ಧಕ್ಕೆ ಬಿಟ್ಟು ಹುಚ್ಚನ
ಕಥಿ ಹೇಳಬೇಕು "
"ನೀ ಅವನಿಗೆ ಹುಚ್ಚ ಅಂತ ಹೆಸರೇ ಇಟ್ಟುಬಿಟ್ಟೇನು ? ಒಳ್ಳೇದು ಹೇಳತೀನಂತ
ಹೋಗು."
'ಹುಚ್ಚನ ಕಥೆ' ಅಂದಿದ್ದಳು ಸರೋಜ. ಅವನು ಹುಚ್ಚನೇ? ಅವನು ಏನು
ಎಂತು ಎಂಬುದು ಡಾಕ್ಟರ್ ದೇಶಮುಖರಂಥವಾರಿಗೂ ಗೊತ್ತಾಗಿರಲ್ಲಿಲ . ಅವನೊಬ್ಬ
ಮಾನಸಿಕ ರೋಗಿ ಆಷ್ಟ ಅವರ ಪಾಲಿಗೆ.
-ತನ್ನ ಪಾಲಿಗೆ ?
ತನ್ನ ಪಾಲಿಗೂ ಅಷ್ಟೇ. ಏನೋ ಕುತೂಹಲವೆನಿಸಿ ಅವನ ವಿಷಯದಲ್ಲಿ ಆಸಕ್ತಿ