ನಮೂನೆ ವಾಸನೆ ಬರ್ತದಲ್ಲಾ,ಆದ್ದರಿಂದ ಮನುಷ್ಯಾಗ ಹಳೇ ನೆನಪು ಆಗತದಂತ
ಒಮ್ಮೆ ನೀ ಹೆಳೀದ್ದಿ ಹೈಸ್ಕೂಲಿನ್ಯಾಗಿದ್ದಾಗ.ಅದಕ್ಕೂ ಇದಕ್ಕೂ ಏನರೆ ಸಂಬಂಧ ಅದş
ಏನು?
"ನಿನ್ನ ನೆನಪಿನ ಶಕ್ತಿ ಪ್ರಶಂಸನೀಯ ಸರೋಜ. ನಾ ಹೆಳೀದ್ದು ನನ್ನ ಸ್ವತಃದ
ಅನುಭವ ಅಲ್ಲ. ಸೈಕಾಲಜಿಯ ಒಂದು ಥಿಯರಿ. ಅವನಿಗೆ ಹಾಂಗಾಗಲಿಕ್ಕೆ ಇದೂ
ಕಾರಣ ಇರಬಹುದು. ಅದರ
ಅವನ ಮಾನಸಿಕ ವಿಕ್ರುತಿಯ ಕಾರಣಕ್ಕಿಂತಾ ನಾನು ಚಿಕಿತ್ಸಾದ ಕಡೆ ಹೆಚ್ಚು ಲಕ್ಷ್ಯ ಕೊಟ್ಟಿದ್ದೆ."
"ಅಂದರ ಈ ಕೇಸಿನ್ಯಾಗ ನೀನş ಡಾಕ್ಟರ್ ಆಗಿದ್ದಿ ಅಂಧಾಂಗಾತು".
"ಒಂದು ರೀತಿಯಿಂದ.ಯಾಕಂದರ ಅವನಿಗೆ ಪೂರ ನೆಟ್ಟಗಾಗೋ ತನಕ
ಸ್ವಾಲ್ಪು ಸಮಾಧಾನ ಇರಲಿಲ್ಲ .ನಾ ನನ್ನ ಕಾಲೇಜಿನ ಕೆಲಸ ಸುದ್ದಾ ಬಿಟ್ಟು ಎಷ್ಟೋ
ಸರೆ ಅವನ ಜೋಡಿ ಕೂತು ವ್ಯಾಳ್ಯಾ ಕಳದೀನಿ.ಮುಂದ ಸ್ವಲ್ಪ ದಿವಸಕ್ಕ ಅವನಿಗೆ
ಪೂರಾ ನೆಟ್ಟಗಾಗೋ ಲಕ್ಷಣ ಕಾಣಿಸಿದವು.ಮಳೆ ಬಂದಾಗ ಈಗ ಆತ ಶಾಂತನಾಗೇ
ಇರ್ತಿದ್ದ.ಮೊದಲಿನ್ಹಾಂಗ ಎದ್ದು ಹೊರಗ ಹೋಗತಿರ್ಲಿಲ್ಲ.ಕೂತಲ್ಲೇ
ಚಡಪಡಿಸ್ತಾನೂ ಇರ್ಲಿಲ್ಲ.ಆರಾಮ ಕೂತು ಏನೇನರೆ ಮಾತಾಡತಿದ್ದ".
"ಮಜಾ ಅದ ಬಿಡು ಅಂತೂ.ಹೊತ್ತಾತು.ನೀ ಅನಕಾತ ನಿನ್ನ ಚಿತ್ರಾ ತಗಿಯೋ
ಕೆಲಸಾ ಮಾಡು.ನಾ ಹೋಗಿ ಅನ್ನಕ್ಕ ಎಸರಿಡತೀನಿ".
*
*
*
ಹದಿನೈದು ದಿನದ ಸತತ ಶ್ರಮದಿಂದಾಗಿ ಈ ಚಿತ್ರ ಇಂದು ಪೂರ್ಣತೆಯ ಹಂತ
ಮುಟ್ಟಿದೆ.ಮಳೆ ಹನಿಯ ಗುರುತು ಒಂದೂ ಉಳಿದಿಲ್ಲ.ತೊಯ್ದಂತೆ ಕಾಣುತ್ತಿದ್ದ
ಒಂದೇ ಒಂದು ಗಿಡ ಈಗ ಬಿಸಿಲು ಹೊದ್ದು ನಿಂತಿದೆ.ರಸ್ತೆಯಲ್ಲಿನ ಕೆಸರು ನೀರು
ಸಹ ಪತ್ತೆಯಿಲ್ಲದಂತಾಗಿದೆ. ಬಣ್ಣ ಸ್ವಲ್ಪ ದಪ್ಪನಾಗಿ ಕಾಣುವುದೇ?ಅದರೂ
ಅಡ್ಡಿಯಿಗಲ್ಲ. ಗುಡ್ಡದ ಮೇಲೆ ಈ ಬಿಸಿಲಿನ shade ಬಹಳ ಚೆನ್ನಾಗಿ ಬಂದಿದೆ. ಹಳೆಯ
ಚಿತ್ರದಲ್ಲೇ ಇಷ್ಟು ಹೊಲಸಾಟ ಮಾಡಿದೆನೆಂದು
ಪ್ರೊಫೆಸರಿಗೆ ತಿಳಿದರೆ ನಕ್ಕಾರು.
ಎಂದೂ ಯಾರು ಮಾಡಲಾರದ ಹುಚ್ಚು ಕೆಲಸ; ಆದರೂ ಎಷ್ಟು ಯಶಸ್ವಿ!ಇದನ್ನು
ನೋಡಿದರೆ ಯಾರಿಗೂ ಕಲ್ಪನೆ ಬರಲಾರದು.ಇನ್ನು ಈ ತೊಯ್ದು ಹಾಗಿರುವ ಮುಖ-
ತಲೆಯನ್ನಿಷ್ಟು ಒಣಗಿದ ಹಾಗೆ,ಕೂದಲು ನಾಳಿಗೆ ಹಾರಾಡುತ್ತಿರುವ ಹಾಗೆ
ಮಾಡಿಬಿಟ್ಟರೆ ತೀರಿತು, ತನಗೇ ಅದರ ಕಲ್ಪನೆ ಬರಲಾರದು.....
ಪುಟ:ನಡೆದದ್ದೇ ದಾರಿ.pdf/೧೦೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೨
ನಡೆದದ್ದೇ ದಾರಿ