ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೪
ನಡೆದದ್ದೇ ದಾರಿ

ಪುಣ್ಯವಂತ ನೋಡು. ಇನ್ನೇನು ಮುಗೀಲಿಕ್ಕೆ ಬಂತಲ್ಲ ನಿನ್ನ ಚಿತ್ರ. ಅಂತೂ ದೊಡ್ಡ
ಕೆಲಸ ಮಾಡಿ ಮುಗಿಸಿದಿ ಬಿಡು."
*
*
*
ನಾಲ್ಕು ದಿನ ಕೂತು ಒದ್ದಾಡಿದರೂ ಈ ಚಿತ್ರ ಮುಗಿಯಲೊಲ್ಲದು.
ತೊಯ್ದಿರುವ ಹಾಗೆ ಕಾಣುವ ತಲೆ ಏನು ಮಾಡಿದರೂ ಪೂರಾ ಒಣಗಿದ ಹಾಗೆ
ಕಾಣಲೊಲ್ಲದು. ಸ್ವಲ್ಪು ಹೆಚ್ಚು ಕಡಿಮೆಯಾದರೂ ಬಣ್ಣ ಮುಖದ ಮೇಲೆಯೇ
ಇಳಿದೀತೆಂಬ ಭಯ. ಎಲ್ಲ ಮುಗಿದ ನಂತರ ಕೊನೆಗುಳಿದ ಈ ಸ್ವಲ್ಪ ಭಾಗ ಯಾಕಿಷ್ಟು
ಕಾಡಿಸುತ್ತದೆ ? ಛೇ, ಕೊನೆಯ ಪ್ರಯತ್ನ, ಸಾಧ್ಯವಾಗದಿದ್ದರೆ ಬಿಟ್ಟೇ ಬಿಡಬೇಕು.
ಎಲ್ಲಿಯೋ ಏನೋ ತಪ್ಪುತ್ತಿದೆ. ಎಲ್ಲಿ ಏನೆಂದು ಗೊತ್ತಾಗುತ್ತಿಲ್ಲ. ಒಟ್ಟಿಗೆ
ನೋಡಿದಾಗ ಇಡಿಯ ಚಿತ್ರ ಒಂದು ಬಗೆಯ ಕೃತ್ರಿಮತೆಯ ಮುಸುಗು ಹೊದ್ದಂತೆ
ಕಾಣುತ್ತಿದೆ. ಎಂದೂ ತನ್ನ ಯಾವ ಕೃತಿಯೂ ಹೀಗಾಗಿರಲಿಲ್ಲ. ಇಷ್ಟೊಂದು ಕಷ್ಟಪಟ್ಟು
ತೆಗೆದ ಈ ಚಿತ್ರ ಕೃತ್ರಿಮವಾಗಿ ಕಾಣಬೇಕೆ ?.....ಚಿತ್ರದಲ್ಲಿ ಜೀವಕಳೆ ಇಲ್ಲದಿದ್ದರೆ
ಹಿಂದು-ಮುಂದು ನೋಡದೆ ಹರಿದು ಹಾಕಬೇಕೆಂದು ಪ್ರೊಫೆಸರು ಹೇಳಿದ್ದು
ನೆನಪಿದೆ....
ಅಥವಾ ಈ ಕೃತ್ರಿಮತೆ ತನ್ನ ಭ್ರಮೆಯೇ ಆಗಿರಬಾರದೇಕೆ ? ಇಂದು ಬೆಳಗಿನಿಂದ
ಸಣ್ಣದಾಗಿ ಮತ್ತೆ ಹನಿಯತೊಡಗಿರುವ ಮಳೆಯಿಂದಾಗಿ ತುಸು ವ್ಯಗ್ರವಾಗಿರುವ ತನ್ನ
ಮನಸ್ಸಿನ ತಪ್ಪು ಕಲ್ಪನೆಯಾಗಿರಬಾರದೇಕೆ ಈ ಕೃತ್ರಿಮತೆ ? ಹಾಗೂ ಇರಬಹುದು.
ಇಂಥ ಮನಸ್ಥಿತಿಯಲ್ಲಿದ್ದಾಗ ಕಲಾವಿದ ಎಂದೂ ಕೆಲಸ ಮಾಡಬಾರದು. ಈಗ ಸ್ವಲ್ಪ
ವಿಶ್ರಾಂತಿ ತೆಗೆದುಕೊಂಡು ಸಂಜೆ ನೋಡಿದರೆ ಈ ಚಿತ್ರದಲ್ಲಿ ಕೃತ್ರಿಮತೆ ಬಹುಶಃ
ಕಾಣಲಿಕ್ಕಿಲ್ಲ...
ಅಂತೂ ಕೊನೆಗೊಮ್ಮೆ-ಕೊನೆಗೊಮ್ಮೆ ಈ ಚಿತ್ರದಿಂದ ಬಿಡುಗಡೆ
ದೊರಕಿದಂತಾಯಿತು. ಈ ಚಿತ್ರ ಮೊದಲಲ್ಲಿ ತೆಗೆದಾಗಿನಿಂದ ಮನಸ್ಸನ್ನು ಮುಸುಕಿದ್ದ
ಯಾವುದೋ ಆತೃಪ್ತಿ, ಏನೋ ಅಸಮಾಧಾನ ಈಗ ಇಲ್ಲದಂತಾಗಿದೆ. ದೊಡ್ಡ ಭಾರ
ಇಳಿದಂತೆ, ಎಂಥದೋ ಮಹತ್ಕಾರ ಸಾಧಿಸಿದಂತೆ ಮನಸ್ಸು ಹಗುರಾಗಿದೆ. ಈ
ಚಿತ್ರದಲ್ಲಿನ ಮನುಷ್ಯನಿಗೆ ಈಗ ಪೂರ್ಣ ಹೊಸ ರೂಪ ಬಂದಿದೆ. ಸ್ಟ್ಯಾಂಡ್ ಗೆ ಇದನ್ನು
fix ಮಾಡಿ ದೂರ ನಿಂತು ಇದರೆಡೆ ನೋಡುತ್ತಿರುವುದೇ ಒಂದು ಆನಂದ. ಇನ್ನು
ಮುಂಬಯಿಗೆ ತಿರುಗಿ ಹೋದ ನಂತರ ಕಾದಿರುವ ಜೊತೆಯವರ ಮೆಚ್ಚುಗೆ. ಬರಲಿರುವ