ಕಲಾಪ್ರದರ್ಶನದಲ್ಲಿ ದೊರೆಯುವ ಬಹುಮಾನ....ಛೆ, ಈ ಚಿತ್ರ ಸಣ್ಣ ಹುಡುಗಿಯ
ಹಾಗೆ ವ್ಯರ್ಥ ಕನಸು ಕಾಣಲು ಪ್ರೇರೇಪಿಸುತ್ತಿದೆಯಲ್ಲ ತನ್ನನ್ನು - ಎಂದು ಅವಳಿಗೆ
ನಗು ಬಂದಿತು.
ರವಿವಾರವಿತ್ತೆಂದು ಮನೆಯಲ್ಲುಳಿದಿದ್ದ ಸರೋಜಳ ಗಂಡ ಆ ಸಂಜೆ ಚಿತ್ರ
ನೋಡಿ ಹೇಳಿದ್ದ, "ನನಗೇನೂ ನಿಮ್ಮ ಮಾಡರ್ನ್ ಆರ್ಟ್ ತಿಳಿಯೂದಿಲ್ಲ ಮಿಸ್
ಸಹನಾ, ಆದರೂ ಒಂದು ಮಾತು ಹೇಳಬೇಕನಸ್ತದ."
"ಹೇಳ್ರೆಲಾ, ಅದರಾಗೇನು" - ಅವನ ಅಭಿಪ್ರಾಯಕ್ಕೆ ತಾನೇನೂ
ಬೆಲೆಕೊಡುವುದಿಲ್ಲೆಂಬ ಧಾಟಿಯಲ್ಲಿ ಹೇಳಿದಳು ಆಕೆ.
"ನಿಮ್ಮ ಚಿತ್ರ ನೋಡಿದರ ನೀವು ಆದರ ಸಲುವಾಗಿ ಭಾಳ ತ್ರಾಸು
ತಗೊಂಡೇರಂಬೋದು ಗೊತ್ತಾಗತದ ಖರೆ ; ಆದರ ಯಾಕೊ ಅದೆಲ್ಲಾ
ಆರ್ಟಿಫಿಶಿಯಲ್ ಅನಸತದ."
“ಏನಂದ್ರಿ ?" ಹೊಡೆದೆಬ್ಬಿಸಿದಂತಾಯಿತು ಅವಳಿಗೆ, “ಯಾವ ದೃಷ್ಟಿಯಿಂದ
ಹೇಳತೀರಿ ಅದು ಆರ್ಟಿಫಿಶಿಯಲ್ ಅಂತ ? ನೀವು ಮಾಡರ್ನ್ ಆರ್ಟ್ ಬಗ್ಗೆ ಇರುವ
ಫ್ರೆಂಚ್ ಸಾಹಿತ್ಯ ಓದಬೇಕು. ಆಮ್ಯಾಲೆ ಬೇಕಾದರೆ-"
-ಅವನ ನಗುವ ಕಣ್ಣುಗಳನ್ನು ನೋಡಿದಾಗ ತನ್ನನ್ನು ತಾನು
ಸಮರ್ಥಿಸಿಕೊಳ್ಳುವ ಪ್ರಯತ್ನ ಆಸಫಲವಾಗುತ್ತಿದೆಯೆಂಬ ಅರಿವಾಗಿ ಒಮ್ಮೆಲೆ
ಅವಳು ಸುಮ್ಮನಾದಳು. “ನನ್ನ ಅಭಿಪ್ರಾಯ ತದ್ರೂ ಇರಬಹುದು ಸಹನಾ. ಅದನ್ನು
ಸೀರಿಯಸ್ಸಿ ತಗೋಬ್ಯಾಡ್ರಿ."
-ಹೌದು. ಅವನ ಅಭಿಪ್ರಾಯ ತಪ್ಪಿರಲೇಬೇಕು. ಇಷ್ಟು ಜೀವ ಆರೆದು ತೆಗೆದ
ಈ ಚಿತ್ರಕ್ಕೆ ಜೀವಕಳೆ ಇಲ್ಲವೆಂದರೇನು ? ಆವನಿಗೇನು ಮಣ್ಣು ತಿಳಿಯುತ್ತದೆ ?....
ಯಾರಿಗೂ ಏನೂ ತಿಳಿಯುವದಿಲ್ಲ. ತನಗೊಬ್ಬಳಿಗೆ ಮಾತ್ರ ತಿಳಿಯಬಲ್ಲದು.
ಚಿತ್ರದಲ್ಲಿಯ ಅವನು ನೆಟ್ಟಗಾಗಿ ತನಗೆ ಕೆಲಸವಾದ ಊರಿಗೆ ಹೋಗುವಾಗ ಅವನ
ಕಣ್ಣಲ್ಲಿ ಒಂದು ಕ್ಷಣ ಮಿಂಚಿದ- ಕೃತಜ್ಞತೆಯೋ ಮತ್ತೇನೋ- ಆ ಬೆಳಕು ರಿಪೇರಿ
ಮಾಡಿದ ಈ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಜಗತ್ತಿಗೇಕೆ ಕಾಣುತ್ತಿಲ್ಲ ?
-ಜಗತ್ತಿಗೆ ಕಂಡರೆಷ್ಟು, ಬಿಟ್ಟರೆಷ್ಟು ? ಕಾಣುವ ಕಣ್ಣು ತನಗಾದರೂ
ಇದೆಯಲ್ಲ, ಇಷ್ಟು ಸಾಕು.....
-ನಿಮ್ಮ ಕಾಕಾನ ಪತ್ರ ಬಂದದ ನೋಡು ಸಹನಾ' ಹೊರಗಿನಿಂದ ಕೂಗಿ
ಹೇಳಿದಳು ಸರೋಜ.
“ನೀನೇ ಓದಿ ಹೇಳು ಏನು ಬರದಾರಂತ'.