ಪುಟ:ನಡೆದದ್ದೇ ದಾರಿ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ನಡೆದದ್ದೇ ದಾರಿ

-ಈ ಚಿತ್ರದೆದುರು ಕೂತಿದ್ದರೆ- ಎದ್ದು ಹೋಗಲು ಮನಸ್ಸಾಗುವುದಿಲ್ಲ.
ಇಂಥ ಕೃತಕೃತ್ಯತೆಯ ಭಾವವನ್ನು-ಸ್ವಲ್ಪ ಸೆಂಟಿಮೆಂಟಲ್
ಅನಿಸಿದರೇನಂತೆ ? -ತನ್ನಲ್ಲಿ ಹುಟ್ಟಿಸಿದ ಈ ಚಿತ್ರ ಆರ್ಟಿಫಿಶಿಯಲ್ ಆಗಿದೆಯೆಂದರೆ
ಮೂರ್ಖತನವೇ ಸರಿ....
-'ಮತ್ತೇನಿಲ್ಲ ವಿಶೇಷ. ನೀ ಯಾವಾಗ ಮುಂಬಯಿಗೆ ಬರ್ತೀ ಅಂತ ಕೇಳ್ಯಾರ
ನಿಮ್ಮ ಕಾಕಾ.ನಿನ್ನ ಕ್ಲಾಸು ಸುರು ಆಗತಾವಂತ ಮುಂದಿನ ವಾರ. ಮನೆಯೊಳಗ
ಎಲ್ಲರೂ ಆರಾಮ ಇದ್ದಾರಂತ....ಹ್ಞಾ, ಮತ್ತು ಒಂದು ಆಗದೀ ಇಂಟರೆಸ್ಟಿಂಗ್
ನ್ಯೂಜು....'
'ಏನು ಅದು ?' -ಕೂತಲ್ಲಿಂದಲೇ ಕೇಳಿದಳು ಸಹನಾ.
'ಹಹ್ಹಹ್ಹ. ಏಷ್ಟು ಮಜಾ ನೋಡು ಸಹನಾ. ನೀ ಚಿತ್ರಾ ತಗದು ಅಮರ
ಮಾಡೀಯಲ್ಲ ಆ ಹುಚ್ಚನ್ನ....'
'ಶಟಪ್, ಅವನಿಗೆ ಹುಚ್ಚ ಅನ್ನಬ್ಯಾಡಂತ ಹೇಳಿಲ್ಲ s ? ಆತ ಈಗ ಹೊಸಾ
ಮನುಷ್ಯ ಆಗಿಬಿಟ್ಟಾನ.'
ನೀ ಒಬ್ಬಾಕಿ ದೊಡ್ಡ ಹುಚ್ಚಿ. ನಿಮ್ಮ ಕಾಕಾ ಏನು ಬರದಾರ ಕೇಳಿಲ್ಲೆ :ಮೊನ್ನೆ
ಮುಂಬೈದಾಗ ಭಾರಿ ಮಳೆ ಆತಲಾ, ಆವಾಗ ಅಕಸ್ಮಾತ್ ಅವರಿಗೆ ಭೆಟ್ಟಿ ಆತಂತ
ಅವನದು. ಕೆಟ್ಟ ಮಳೆಯೊಳಗ ತೊಯ್ಸಿಗೋತ ಸಾವಕಾಶ ಹೊರಟಿದ್ದನಂತ
ಚೌಪಾಟೀಕಡೆ. ಕಾರು ನಿಲ್ಲಿಸಿ ಡಾಕ್ಟರರು, 'ಯಾವಾಗ ಬಂದ್ರಿ ? ಇಲ್ಲೇಟ್ರಾನ್ಸ್ ಫರ್
ಆತೇನು ನಿಮಗೆ ? 'ಅಂತ ಕೇಳಿದರ ಅವರ ಗುರುತೇ ಸಿಗಲಾರದ್ಹಾಂಗ ಸುಮ್ಮನs
ಮುಂದ ಹೋದನಂತ. ಅವನಿಗೆ ನೆಟ್ಟಗಾಗೇದಂತ ತಿಳದದ್ದು ತಮ್ಮದೇ ತಪ್ಪು ಅಂತ
ಅವರಿಗೆ ಅನಿಸಿತಂತ. 'This is an incurable case....' ಅಂತ ಬರದಾರ ನಿಮ್ಮ
ಕಾಕಾ. ಹಹ್ಹಹ್ಹ....'
'this is an incurable case'.... 'incurable case....'
*
*
'ಕೆಟ್ಟ ಮಳೆ ಬರಲಿಕ್ಹತ್ತೇದ. ಅಂಗಳದಾಗ ನಿಂತು ಏನು ಮಾಡತೀ ಸಹನಾ,
ಒಳಗ ಬಾರಲಾ.'
'.............'
'ಅರೆ ಏ ಹುಚ್ಚಿ,ಪೂರಾ ತೊಯ್ಸಿಗೊಂಡು ಸುಮ್ಮನs ನಿಂತೀಯಲ್ಲ
 ? ಇಲ್ಲೇನು ನಡಸೀ ನೀನು ? ಮಳೆಯ ಖಬರು ಇಲ್ಲಧಾಂಗ ನಿಂತೀದೆಲ್ಲ ?....ಅರೆ.