ಪುಟ:ನಡೆದದ್ದೇ ದಾರಿ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕೊನೆಯ ದಾರಿ / ಮಳೆ ಬಂದಾಗ

೧೦೭

ಇದೇನು ಸಹನಾ?ನಿನಗೇನು ಹುಚ್ಚುಗಿಚ್ಚು ಹಿಡದsದೋ ಏನು? ಇಷ್ಟು ದಿವಸ
ಕೂತು ತೆಗೆದ ಚಿತ್ರಾ ಈ ಮಳೆಯ ನೀರೊಳಗ ನೆನಸತಾ ಇದ್ದೀಯಲ್ಲ ! ಅಯ್ಯೋ
ದೇವರs,ಎಲ್ಲಾ ಬಣ್ಣ ನೀರಿಗೆ ಕರಗಿ ಹರಿದು ಹೋಗಲಿಕ್ಹತ್ತೇದಲ್ಲ s ಸಹನಾ.
ಹಿಂಗ್ಯಾಕ ನಮ್ಮವ್ವಾ? ತಲೀ ಗಿಲೀ ಕೆಟ್ಟsದೇನು?'
'ಬಿಡು ನನ್ನ ಸರೋಜ,ನೀ ಒಳಗ ಹೋಗು'.
'ಅಲ್ಲ s ಹುಚ್ಚಿ,ನೀ ಬೇಕಾದರ ತೋಯ್ಸಿಗೋ. ಆದರ ಆ ಚಿತ್ರಾ ಯಾಕ
ಕೆಡಸತೀ? ಛೆ,ಇದರಾಗೇನೂ ಉಳೀಲಿಲ್ಲ ಈಗ.ಒಂದ ಸ್ವಲ್ಪ ಕಣ್ಣಿನ ಹೊರತು
ಮತ್ತೇನೂ ಕಾಣ್ಸೂದಿಲ್ಲ. ಈ ಮನುಷ್ಯಾನ ಮೈ-ಕೈ,ಗಿಡಾ-ಗುಡ್ಡ ಎಲ್ಲಾ ಮಳೆಯ
ನೀರೂಳಗ ತೊಯ್ಡು ಹೋದವಲ್ಲ ಪೂರಾ ಬಿಳೇ ಕಾಗದ ಆಗಿಹೋಯ್ತೂ. ಹಿಂಗ್ಯಾಕ
ಮಾಡಿದೀ ಸಹನಾ?'
Incurable....Incurable...'
-ಮಳೆಯ ನೀರು ಅವಳನ್ನು ಪೂರಾ ತೋಯಿಸಿತ್ತು.ಅವಳ ಮುಖದ ಮೇಲೆ
ಹರಿಯುತ್ತಿದ್ದ ನೀರಿನಲ್ಲಿ ಅವಳ ಕಂಬನಿ ಬೆರೆತಿದೆಯೇ ಎಂದು ತಿಳಿದುಕೊಳ್ಳಲು
ವ್ಯರ್ಥಪ್ರಯತ್ನ ಮಾಡುತ್ತಿದ್ದಳು ಸರೋಜ.
-ಮಳೆ ಸುರಿಯುತ್ತಲೇ ಇತ್ತು.