ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೦೮
ನಡೆದದ್ದೇ ದಾರಿ

ನೆರಳು

"ಮಾಲತೀ...."
"ಓ",
"ಏ ಮಾಲತೀ...."
"ಬಂದೇ ಸ್ವಲ್ಪ ತಡೀಯವ್ವಾ,ಹಾಲಿಟ್ಟೀನಿ ಸ್ಟೋ ಮ್ಯಾಲೆ."
"ಏ ಮಾಲತೀ...."
"ಬಂದೆ,ಒಂದು ಮಿನಿಟು."
"ಏ ಮಾಲತೀ,ಒಂದಸವನ ಒದರಿಕೋಳ್ಲಿಕತ್ತೀನಿ,ನಿನಗೇನರೆ ಖಬರದ
ಏನು? ಒಂದು ಮಿನಿಟು ಅಂತೀ,ಅಷ್ಟರಾಗ ನಾ ಸತ್ತರೂ ನಿನಗ ದರಕಾರ ಇಲ್ಲ,
ನೀನೂ ನಿನ್ನ ಮಕ್ಕಳೂ ನಾ ಸಾಯೋ ಹಾದೀನೇ ಕಾಯ್ಲಿಕ್ಹತ್ತೀರಿ-ಈ ಮುದುಕಿ
ಎಂದ ಪ್ರಾಣಾಬಿಟ್ಟೀತೋ ಅಂತ-"
ಹಾಲು ಕಾಯದೇ ಇದ್ದರೂ ಸ್ಟವ್ ಆರಿಸಿ ಮಾಲತಿ ಅವಸರವಸರವಾಗಿ
ತಾಯಿಯತ್ತ ನಡೆದಳು. "ಯಾಕ ಸುಮ್ನ ಆಭದ್ರ ಮಾತಾಡ್ತೀಯವಾ
ಮುಂಜಾನೆದ್ದು ? ಇಲ್ಲದ್ದ ವಿಚಾರ ಮಾಡಿ ತ್ರಾಸು ಮಾಡಿಕೋಬ್ಯಾಡಾ ಅಂತ
ಡಾಕ್ಟರು ಹೇಳಿಲ್ಲೇನು ?"
{{gap}'ಆ ಡಾಕ್ಟರು ಸುಟ್ಟ ಬರ್ಲಿ. ಅವನಿಗೇನ ನನ್ನ ಜಡ್ಡು ಗುಣಾ ಮಾಡೂದು
ಆಗೂದಿಲ್ಲ ಬಿಡು. ಮತ್ತ ನೀನೇ ಅವನಿಗೆ ಹೇಳಿಗೀಳೀಯೋ ಏನೂ ಲಗೂ
ಸಾಯೋವಂತಾ ಔಷಧ ಕೊಟ್ಟ ಬಿಡೂ ಅಂತ."
"ಹಿಂಗೆಲ್ಲಾ ಅನಬಾರದವ್ವಾ,ನನ್ನ ಯಾಕ ಕರದಿ ಹೇಳು ಲಗೂನ.ಇನ್ನೂ
ಏನೂ ಕೆಲಸಾಗಿಲ್ಲ ನಂದು."
"ನಿನ್ನ ಯಾಕ ಕರದೆ ?" -ಮುದುಕಿ ಕ್ಷಣ ಹೊತ್ತು ವಿಚಾರಿಸಿದಳು.ಅವಳ
ಮುಖ ಹುಚ್ಚಾಪಚ್ಚಾ ಆಗಿತ್ತು.ನಂತರ ಹಿಂದೆ ನೋಡುತ್ತ ಒಮ್ಮೆಲೆ ಬೆಚ್ಚಿ ಬಿದ್ದು
ಅವಳೆಂದಳು, "ನೋಡು ಮಾಲತೀ,ಈ ಖೋಲಿಯೊಳಗ ಯಾರರೆ ಬಂದಿದ್ರೇನು?"
"ಇಲ್ಲ್ಯಾರು ಬರ್ತಾರವಾ ? ನೀ ಒಬ್ಬಾಕೀನೇ ಇದ್ದೀಯಲ್ಲ."
"ನಿಮ್ಮಪ್ಪ ಸತ್ತಾಗಿನಿಂದ ನಾ ಒಬ್ಬಾಕೀನೇ ಇದ್ದೀನಿ ಅನ್ನೂದು ಗೊತ್ತದನs,