ರಾಜ, ಬೀನಾ ಯಾರಾದರೂ ಕೇಳಿಸಿಕೊಂಡರೇನೋ ಎಂದು. ಯಾರೂ ಇಲ್ಲದ್ದು
ಕಂಡು ಸಮಾಧಾನವಾಗಿತ್ತು ಅವಳಿಗೆ. ಅಳುತ್ತಿದ್ದ ಅವ್ವನನ್ನು ರಮಿಸುವ
ಮನಸ್ಸಿದ್ದರೂ ಇನ್ನೂ ಅಲ್ಲೇ ಕುಳಿತಿದ್ದರೆ ಏನೇನು ಕೇಳಬೇಕಾಗುವುದೋ ಎಂಬ
ಭಯದಿಂದ ಮಾಲತಿ ಎದ್ದು ಬಂದಿದ್ದಳು.
ಹೌದು, ಅವ್ವ ಶೆಟ್ಟರ ಸದಾಶಿವರಾಯನನ್ನು ಚಿಕ್ಕಂದಿನಲ್ಲಿ ಪ್ರೀತಿಸಿದ್ದು ತನಗೆ
ಗೊತ್ತಿದ್ದ ವಿಷಯವೇ. ಆ ಬಗ್ಗೆ ಅವ್ವ ತನ್ನೊಂದಿಗೆ ಮಾತ್ರ ಮನಬಿಚ್ಚಿ
ಮಾತಾಡಿದ್ದಳು. ಬಹುಶಃ ಅಪ್ಪನಿಗೂ ಈ ವಿಷಯ ಪೂರಾ ಗೊತ್ತಿರಲಾರದು. ಅಕ್ಕನ
ಮಗಳೆಂದು ಅವ್ವನನ್ನು ಮದುವೆಯಾಗಿದ್ದ ಅಪ್ಪ. ಅವರಿಬ್ಬರ ದಾಂಪತ್ಯದಲ್ಲಿ
ತೊಡಕುಗಳೇನೂ ಇರಲಿಲ್ಲ. ಒಬ್ಬಳೇ ಮಗಳಾದ ತನ್ನನ್ನು ಅವರಿಬ್ಬರೂ ಬಹಳ
ಪ್ರೀತಿಯಿಂದ ಬೆಳೆಸಿದ್ದರು. ಮದುವೆ ಮಾಡಿದ್ದರು. ಪೆನ್ ಶನ್ ಆಗುವ ಹೊತ್ತಿಗೆ
ಅವ್ವ ಗಲ್ಸ್೯ ಸ್ಕೂಲಿನ್ ಹೆಡ್ ಮಿಸ್ಟ್ರೆಸ್ ಆಗಿದ್ದಳು. ಅವಳಿಗೆ ಎಲ್ಲರೂ- ಸ್ವತಃ ಏ.ಓ.
ಸಾಹೇಬರೂ ಅಂಜುತ್ತಿದ್ದರು. ಅಂಥ ದಪ೯ದ ಹೆಂಗಸು ತ್ನ್ನ ಅವ್ವ. ಮನೆಯಲ್ಲಿಯೂ
ಹಾಗೇ. ಎಲ್ಲ ಅವಳು ಹೇಳಿದ ಹಾಗೇ ನಡೆಯುತ್ತಿತ್ತು. ವಿಧಿಯನ್ನೇ ತನ್ನ ಮನಬಂದ
ಹಾಗೆ ತಿರುಗಿಸಿ ನಡೆಯಿಸುವ ಶಕ್ತಿಯುಳ್ಳ ಹೆಣ್ಣು ಆಕೆ. ಗಂಡ-ಮಗಳು-ಅಳಿಯ-
ಮೊಮ್ಮಕ್ಕಾಳು ಎಲ್ಲರ ಮಧ್ಯೆ ನಗುತ್ತ ತುಂಬು ಜೀವನ ಸಾಗಿಸಿದ್ದಾಕೆ... ಅಂಥವಳಿಗೆ
ಈಚೀಚೆ ಹೀಗೆ ಆಗಿದೆ.
'ನಿಮ್ಮವ್ವಗ ದೆವ್ವ ಬಡಿದಿರಬೇಕ್ರೀ ಮಾಲತೀಬಾಯಿ, ಗುಡೀ ಮುಂದಿನ
ಗಂಗಪ್ಪ ಶಾಸ್ತ್ರೀ ಕಡೆ ಕರಕೊಂಡು ಹೋಗ್ರಿ' - ಎಂದು ನೆರೆಮನೆಯಾಕೆ ಹೇಳಿದಾಗ
ವಿಪರೀತ ಸಿಟ್ಟು ಬಂದಿತ್ತು ತನಗೆ. ದೆವ್ವವಂತೆ ! ಛೆ, ತನಗಂತೂ ಅಂಥದರಲ್ಲೆಲ್ಲ
ನಂಬಿಕೆಯಿಲ್ಲ. ಅಂತೂ ಒಟ್ಟು ಅವ್ವ ಪಡುವ ತ್ರಾಸನ್ನು ಈಗೀಗ ನೋಡಲಾಗುತ್ತಿಲ್ಲ
ತನಗೆ. ಅವ್ವ ಇಷ್ಟು ವಷ೯ಗಳ ಆಯುಷ್ಯದಲ್ಲೆಲ್ಲಾ ತೋರಿಸಿದ್ದ ದಪ೯,
ಗಂಡನೊಂದಿಗಿದ್ದಾಗ ಜಗತ್ತಿನಲ್ಲಿ ತನ್ನಷ್ಟು ಸುಖಿಗಳೇ ಇಲ್ಲವೆಂಬ ಧಾಟಿಯಲ್ಲಿ
ನಗುತ್ತಿದ್ದ ಬಗ್ಗೆ ಮಗಳ ಬಗೆಗಿನ ಅವಳ ಉತ್ಸಾಹ, ಮಾಲತಿ ಗ್ರ್ಯಾಜುಯೇಟ್ ಆದಾಗ
ಸ್ಕೂಲಿನ ಮಾಸ್ತರಿಣಿಯರಿಗೆಲ್ಲ ಅವ್ವ ಪಾಟಿ೯ ಕೊಟ್ಟದ್ದು, ವಿಜೃಂಭಣೆಯೊಂದಿಗೆ
ಎಂಜಿನಿಯರನೊಬ್ಬನೊಂದಿಗೆ ಮಾಲತಿಯ ಮದುವೆ ಮಾಡಿದ್ದು, ನಂತರ
ಮೊಮ್ಮಕ್ಕಳೊಂದಿಗೆ ಅವ್ವ ತಾನೂ ಮಗುವಾಗಿ ಕುಣಿದದ್ದು - ಎಲ್ಲವೂ ಅವ್ವನ
ಸಹಜ ಪ್ರವೃತ್ತಿಯಾಗಿರದೆ ಅವಳೊಳಗಿನ ಯಾವುದೋ ಅಸಹಜವಾದ ಏನೋ
ಒಂದನ್ನು ಹತ್ತಿಕ್ಕಿಡುವ ಪ್ರಯತ್ನವಾಗಿತ್ತೇ - ಎಂದನಿಸುವದು ತನಗೆ ಈಗಿಗ
ಒಮ್ಮೊಮ್ಮೆ.
ಪುಟ:ನಡೆದದ್ದೇ ದಾರಿ.pdf/೧೧೯
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೧೧೨
ನಡೆದದ್ದೇ ದಾರಿ