ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕೊನೆಯ ದಾರಿ / ನೆರಳು
೧೧೨



ಹ್ಞು, ತನ್ನ ಅವ್ವ ಅವನನ್ನೇಕೆ ಮದುವೆಯೂಗಲಿಲ್ಲ ?

-'ಮಾಲೀ. ನನಗ ಗೊತ್ತದಽ ಎನು ? ನಾ ಸ್ಕೂಲಿನ್ಯಾಗ ಕಲಿಯೋವಾಗ
ಸದಾಶಿವ ನನಗ ಇಂಗ್ಲೀಷು ಹೇಳಿಕೊಡತಿದ್ಡ.ಅವನ ಲಗ್ನಕ್ಕ ಆದದ್ದು ಗೊತ್ತಿದ್ರೂ
ನಾ ಅವನನ್ನ ಪ್ರೀತಿ ಮಾಡತಿದ್ದೆ. ಪ್ರೀತಿಗೆ-ಲಗ್ನಕ್ಕ ಎನೂ ಸಂಬಂಧ ಇಲ್ಲಂತ ಅವನ
ಹೇಳಿದ್ದ.ಆದರ-'

ಮುಂದಿನ ಕತೆ ಗೊತ್ತಿದೆ ಮಾಲತಿಗೆ.ಅವ್ವನಂತೆಯೇ ಇನ್ನೂ ಬಹಳ
ಹುಡುಗಿಯರಿಗೆ ಅವನು ಇಂಗ್ಲೀಷು ಹೇಳಿಕೊಡುತ್ತಿದ್ದುದು,ಅವರೆಲ್ಲರಿಗೂ ಅವನು
ಪ್ರೀತಿಗೂ-ಲಗ್ನಕ್ಕೂ ಸಂಬಂಧವಿಲ್ಲ ವೆಂದು ಹೇಳುತ್ತಿದ್ದುದು ....ಅವ್ವನಿಗೆ ಈ
ವಿಷಯ ಗೊತ್ತಾದಾಗ ಅವಳಿಗೆ ಬಹಳ ಶಾಕ್ ಆದದ್ದು,ಮುಂದೆ ಅವನು ಲಾ ಓದಲಿಕ್ಕೆ
ಬೇರೆ ಊರಿಗೆ ಹೋದದ್ದು.ಎಲೆಕ್ಷನ್ನು ಸುಡುಗಾಡು ಅಂತ ರಾಜಕಾರಣ ಸೇರಿದ್ದು,
ಅನೇಕ ವರ್ಷಗಳ ನಂತರ ಬೇಸರವಾಗಿ ಅಪ್ಪನನ್ನು ಮದುವೆಯಾಗಲು ಒಪ್ಪಿದ್ದು,
ಸದಾಶಿವರಾಯನನ್ನು ಮರೆತುಬಿಟ್ಟದ್ದು......

ಹಳೆಯ ಕತೆ.ಅವ್ವನ ಹೃದಯದ ತೀರ ಒಳಗಿನ ಪದರಿನ ಕೆಳಗಿನ
ಪಾತಾಳಗವಿಯೊಳಗುಳಿದಿರಬೇಕು ಅದು.ಮೇಲೆ ಮಾತ್ರ ಅವ್ವ ಗಂಭೀರ.ಸ್ಥಿರ.ಎಲ್ಲ
ಗೊತ್ತಿದ್ದೂ ಎಲ್ಲವನ್ನೂ ಸಹನಯಿಂದ ಎದುರಿಸಿ ಜೀವಿಸಿದ್ದೂ.ಮುಪ್ಪಿನ
ದಿನಗಳಲ್ಲೇಕೆ ಹೀಗಾಗತೊಡಗಿದ್ದಾಳೆ ಅವ್ವ ?

ಏ ಮಾಲತೀ...
ಏನವ್ವಾ?
"ಯಾರೋ ಬಂದಾರ ನೋಡಽ"

ಯಾರೇ ಬಂದಿದ್ದರೂ ಬಂದವರ ಹೆಸರು-ಕುಲಗೋತ್ರ ಎಲ್ಲವನ್ನೂ
ಒಳಗಡೆ ಕೂತಿರುವ ಅವ್ವನಿಗೆ
ಒಯ್ದು ತಿಳಿಸಬೇಕು.ಇಲ್ಲವಾದರೆ ಕೂಗಾಡಲು ಸುರು.
ಈಗೀಗ ಅವ್ವ ಎಲ್ಲದರಲ್ಲೂ ಬಾಯಿಹಾಕಿ ಬೇಸರವುಂಟು ಮಾಡುತ್ತಿದ್ದಾಳೆ. ಅವಳಿಗೆ ಎಲ್ಲರ ಬಗೆಗೆ ವಿಪರೀತ ಕುತೂಹಲ.
ಏ ಮಾಲತೀ..
ಯಾರೂ ಇಲ್ಲವ್ವಾ,ಸುಮ್ನಿರು.
ಯಾರೋ ಮಾತಾಡ್ತಾರಲ್ಲಽ,ಸುಳ್ಳ ಯಾಕ ಹೇಳತೀ ?ನನ್ನ ಮಾತು ಅಂದ್ರ
ಎಷ್ಟು ಅಲಕ್ಷ್ಯ ನಿನಗ-
ಮುಂದೆ ಕೇಳಲಾಗದೆ ಮಾಲತಿ ಎದ್ದು ಅವ್ವನ ಕೋಣೆಗೆ ಹೋಗಿ
ಪಿಸುಧ್ವನಿಯುಲ್ಲಿ ಹೇಳಿದಳು.ಅವ್ವಾ,ದಯಮಾಡಿ ಬಾಯಿಮಾಡಬೇಡ.ಬೀನಾನ