ಪುಟ:ನಡೆದದ್ದೇ ದಾರಿ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬ ನಡೆದದ್ದೇ ದಾರಿ

        ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ , ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."
            " ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."
             ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ  ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."
             "ಹೆ ಹ್ಹೆ ಹ್ಹೆ" ಎ೦ದರು ಕೆಲವರು.
              ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು. 
           - " ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್  ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ." 
      _ ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ............
                       ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ . 
                                                      *
                           ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ ,ನಿಮ್ಮೂರಿಗೆ ಹೋಗೋಣ ನಡಿ , ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ  ದರ್ಶನವಾಗಿತ್ತು ಮಾಲತಿಗೆ . ಏನೂ ತಕರಾರು ಮಾಡದೆ ,ಕೂಗಾಡದೆ ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ '  ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.