ಕೊನೆಯ ದಾರಿ/ನೆರಳು
ಆದರೆ ಆವ್ವ...?
ರಾಜ ದಿನಾ ಸಂಜೆ ಹೋಗಿ ಆಜ್ಜಿಯನ್ನು ನೋಡಿಕೊoಡು ಬರುತ್ತಿದ್ದ.'ಆಕಿ ಆರಾಮಿದಾಳ.ನೀ ಚಿoತೀ ಮಾಡಬ್ಯಾಡ ಮಮ್ಮೀ'ಎoದು ಹೇಳುತ್ತಿದ್ದ.'ಆಕೀಗೇನು ಬೇಕಾದರೂ ಒಯ್ದುಕೊಡು ರಾಜೂ'ಎನ್ನುತ್ತಿದ್ದಳು ಮಾಲತಿ.ಅವ್ವನಿಗೆ ಪ್ರೀಯವಾದ ತಿನಿಸು ಕಳಿಸಿದಾಗ ಆಕೆ ಅದನ್ನು ತಿoದಿರಲಿಲ್ಲವೆoದು ಕೇಳಿ ರಾತ್ರೀಯಿಡೀ ಆತ್ತಿದ್ದಳು...
ಅoದು ಸಂಜೆ ಬoದ ರಾಜ ಹೇಳಿದ್ದ,"ಆಜ್ಜಿ ತನ್ನ
ಖೋಲಿಯೂಳಗೆ ತಲೆದಿoಬಿನ ಕೆಳಗೆ ಡೈರಿ ಇಟ್ಟಾಳoತ ಮಮ್ಯೀ.ಅದನ್ನ ತoದುಕೊಡೂoತ ನಾಲ್ಕು ದಿವಸದಿoದ ಹೇಳ್ಲಿಕ್ಹತ್ತಾಳ. ನನಗೆ ನೆನಪೇ ಆಗಿರಲಿಲ್ಲ." ಅವನಿಗೇಕೆ ನೆನಪಾಗಬೇಕು.ಅವನ ಹಾಸ್ಟಿಲಿಗೆ ಹೋಗುತ್ತಿದ್ದುದೂ ಮಮ್ಮಿಯ ಸಲುವಾಗಿ.ಆಜ್ಜಿಯ ಬೇಕುಬೇಡಗಳೊಂದಿಗೆ ಅವನದೇನು ಸಂಬಂಧ ?-ತುಂಬ ಕಸಿವಿಸಿಯಾಯಿತು ಮಾಲತಿಗೆ;'ನಾ ಈಗ ಸಧ್ಯಾ ಹುಡಿಕಿ ಕೊಡ್ತೀನಿ ರಾಜೂ,ಈಗಿಂದೀಗ ಹೋಗಿ ಅದನ್ನು ಅವ್ವಗ ಕೊಟ್ಟ ಬಾ.ಆಮ್ಯಾಲೆ ಚಹಾ ಕುಡದೀಯಂತ.ಏನು? ಶ್ಯಾಣ್ಯಾ ನನ್ನ ಮರಿ."
-ಆವ್ವನ ರೂಮಿನ ತುಂಬ ಕತ್ತಲು.ತಡವರಿಸುತ್ತ ಒಳಬಂದಳು ಮಾಲತಿ.ತಲೆದಿಂಬಿನ ಕೆಳಗೆ ಹರಿದರೇಶಿಮೆ
ಸೀರೆಯ ತುಕಡಿಯಲ್ಲಿ ಸುತ್ತಿದ್ದ ಪುಟ್ಟ ಡೈರಿ.ನಡುವೆ ಸವೆದುಹೋಗಿದ್ದ ಪೆಸ್ಸಿಲಿನದೊಂದು ತುಣುಕು.ಏನು ಬರೆಯುತ್ತಿದ್ದಳು ಅವ್ವ ಈ ಡೈರಿಯಲ್ಲಿ?
ಕಣ್ಣು ಕಿರಿದುಗೊಳಿಸಿ ಮಾಲತಿ ಕೊನೆಯ ಪೇಜಿನಲ್ಲಿ ಗೀಟುಗಳು ಹಾಗೆ ಕಾಣುತ್ತಿದ್ದ ಪೆನ್ಸಿಲಿನ ಗುರುತುಗಳ ಮೇಲೆ ದೃಷ್ಟಿಯೋಡಿಸಿದಳು:
ಒಣಗಿದ ಗಿಡದ ಹಾಗೆ ಕಾಣುತ್ತಿದ್ದ ಒಂದು ಚಿತ್ರ,ಎಲೆ, ಹೂ-ಎಲ್ಲ ಮಕ್ಕಳು ಬರೆದ ಹಾಗೆ.ಕೊನೆಯಲ್ಲಿ ಸೊಟ್ಟ ಆಕ್ಷರಗಳಲ್ಲಿ ಎರಡು ಸಾಲು;'ಸದಾಶಿವ,ನನ್ನ ಇಡೀ ಜೀವನ ನಿನ್ನ ಮರೀಲಿಕ್ಕೆ ಪ್ರಯತ್ನ ಮಾಡೋದ್ರಾಗ ವ್ಯರ್ಥ ಕಳೆದೆ.ನೀ ನನ್ನ ನೆರಳಾಗಿ ನನಗ ಬೆನ್ನುಹತ್ತಿರುವಿ.ನಿನ್ನ ನೆನಪಿನಿಂದ ನನಗ ಬಿಡುಗಡೀನೇ ಇಲ್ಲ.ಇಗಾ.ನಾನೂ ಬಂದೆ ತಡಿ,ಸದೂ...ಸದ್ಯೂ...
-ಇನ್ನೇನು ಮಾಲತಿಯ ಕಣ್ಣೀರು ಮೇಲೆ ಉರುಳಬೇಕು.ಬಾಗಿಲಲ್ಲಿ ರಾಜನ ಹೆಜ್ಜೆಯ ಸದ್ದು.ತಟ್ಟನೆ
ಕಣ್ಣೊರೆಸಿಕೊಂಡು ಎದ್ದು ನಿಂತಳು ಆಕೆ,"ಇದನ್ನ ತಗೋ ರಾಜೂ,ಅವ್ವಗ ಕೊಟ್ಟ ಬಾ ಹೋಗು."