ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ನಡೆದದ್ದೇ ದಾರಿ

                               ಮುಕ್ತಿ
      ಪ್ಲ್ಯಾಟ್ ಫ಼ಾರ್ಮ್ ಮೇಲಿನ ಆ ಗದ್ದಲ,ಹೊರಗಡೆ ಆ ಗಿಡಗಳ ಕೆಳಗೆ ಸೇಂಗಾ ಮಾರುವ ಮುದುಕಿ,ಅಲ್ಲೇ ಸ್ವಲ್ಪ ಮುಂದೆ ರಸ್ತೆಯ ಬದುಗೆ ಎಂದಿನಿಂದಲೂ ತಳವೂರಿದ್ದ ಕುಷ್ಟ ರೋಗಿ ಭಿಕ್ಷುಕ-ಎಲ್ಲಾ ಎಂದಿನಂತೆಯೇ ಇದೆ.ಏನೂ ಬದಲಾವಣೆಯಿಲ್ಲ.ತಲೆಯ ಮೇಲೆ ಸುಡುವ ಬಿಸಿಲು,ಮೈತುಂಬ ಹರಿಯುವ ಬೆವರು,ಹೊತ್ತಾಗಿಹೋಯಿತಲ್ಲಾ ಎಂಬ ಧಾವತಿ-ಎಲ್ಲ ಎಂದಿನಂತೆಯೆ.ದೂರದಿಂದಲೇ ಕಾಣುವ ಆಫ಼ೀಸಿನ ಗೋಪುರದ ಗಡಿಯಾರ,ಗೇಟಿನಲ್ಲಿ ಬೀಡಿ ಸೇದುತ್ತ ನಿಂತಿರುವ ನರೆಗೂದಲಿನ ಪ್ಯೂನ್,ಎರಡೂ ಬದಿಗೂ ಇದ್ದ ಟೇಬಲುಗಳ ನಡುವಿನಿಂದ ಹಾಯ್ದ ಹೋಗುವಾಗ ಹಲವು 'ಗುಡ್ ಮಾರ್ನಿಂಗ್ ಶಂಕರ ಮಾಮ',ಆ ತನ್ನ ಹಳೆಯ ಕುರ್ಚಿ,ಬದಿಯ ಚೇಂಬರಿನ ಮುಚ್ಚಿದ ತೂಗಾಡುವ ಬಾಗಿಲಿಗೆ ನೇತುಬಿದ್ದ 'ಮಿ.ಚಂದೂಲಾಲ ಶಹ.ಅಸಿಸ್ಟಂಟ್ ಮ್ಯಾನೇಜರ್'-ಅದು ಸಹ ಎಂದಿನಂತೆಯೆ.ಆದರೂ ಇಂದು ಹೊಸ ಹುರುಪು ತನಗೆ.ಯಾಕೋ ಜೀವನ ಒಮ್ಮೆಲೆ ಹೊಸದಾಗಿ ಸುರುವಾದಂತೆ ಅನಿಸುತ್ತಿದೆ.ಹತ್ತು ವರ್ಷ ಸಣ್ಣವನಾದಂತೆ ಅನಿಸುತ್ತಿದೆ.ಎದುರಿನ ಟೇಬಲಿಗೆ ಕುಳಿತ ಸ್ಟೆನೋ ಮಿಸ್ ಪರ್ವತಿಯ ಬಣ್ಣ ಬಳಿದ ಮುಖ ನೋಡಿ ಶಿಳ್ಳು ಹಾಕಬೇಕೆನಿಸುತ್ತಿದೆ.ಇವತ್ತು ನಡುವಿನ ಬಿಡುವಿನಲ್ಲಿ ಎಲ್ಲರಿಗೂ ಸರ್ಪ್ರೈಜ್ ಟೀ ಕೊಟ್ಟುಬಿಡಬೇಕು ಅನಿಸುತ್ತಿದೆ.ಯಾಕೆ ಹೀಗೆ?
    

"ಗುಡ್ ಮೊರ್ನಿಂಗ್ ಶಂಕರ ಮಾಮಾ,ಯಾಕೋ ಭಾಳ ಖುಷಿ ಕಾಣಸ್ತೀರಲ್ಲ ಇವತ್ತು ? ಮತ್ತೇನು ಪ್ರಮೋಶನ್-ಗಿಮೋಶನ್ ಸಿಕ್ಕಿತೇನು ?" -ಮೂಲೆಯ ಟೇಬಲಿನ ಬೀಟಲು ಕೂದಲಿನ ಕ್ಲಾರ್ಕ್ ಗಿರಿಧರನ ಕೇಳಿದೆ. ಕೋಟು ಕಳಚಿ ಕುರ್ಚಿಯ ಬೆನ್ನಿಗೆ ಹಾಕುತ್ತ ಹಿರೋನ ಸ್ಟ್ಯ್ ಲಿನಲ್ಲಿ ನಕ್ಕು ಉತ್ತರಿಸಿದ ಆತ, "ಛೇ, ಎಲ್ಲೀ ಪ್ರಮೋಶನ್ ? ಪ್ರಮೋಶನ್ ಸಿಕ್ಕೀತು ಅಂತ ಹಾದಿ ಕಾಯೋದರಾಗ ರಿಟಾಯರ್ ಆಗಲಿಕ್ಕೆ ಬಂದೆ. ಹೆಡ್ ಕ್ಲಾರ್ಕ್ ಆಗೇ ಸಾಯಬೇಕು ಅಂತ ಬರಧಾಂಗ ಕಾಣಸ್ತದ ಹಣೆಯೊಳಗ." "ಆದ್ಯಾಕ್ರೀ ? ಆಸಿಸ್ಟಂಟ್ ಮ್ಯಾನೇಜರು ನಿಮ್ಮ ಬುಟ್ಟಿಯೊಳಗ ಇರೋತನಕಾ ನಿಮಗ್ಯಾಕ ಚಿಂತಿ ? ನಾಳೆ ಅವರು ಮ್ಯಾನೇಜರ್ ಆದಕೊದ್ಲೆ ಅವರ ಈಗಿನ ಜಾಗಕ್ಕೆ