ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಏನು ? ಕಡೀಕೆ ನನ್ನ ಪ್ರಯತ್ನಕ್ಕ ಫಲ ಸಿಕ್ಕಿತು ಅಂತ ಸಮಾಧಾನ ನನಗ."
"ನೀವು ಕೈಹಾಕಿದ ಕೆಲಸ ಎಂದೂ ಫೇಲ್ಗೊಡಿಲಾ ಬಿಡ್ರಿ ." "ಹಹ್ಹಹ್ಹ........." ಪ್ರಿಯವಾಗಿತ್ತು ಆ ಕಾಂಪ್ಲಿಮೆಂಟು,ಯೋಗ್ಯವೂ ಆಗಿತು . .......
ಹೌದು ಬಹಳ ಪ್ರಮಾಣಿಕವಾಗಿ ಪ್ರಯತ್ನಿಸಿದ್ದ ತಾನು, ಚಂದೂಲಾಲ್ ತಮ್ಮ ಜನರಲ್ ಮ್ಯಾನೇಜರ್ ಮಗಳನ್ನು ಮದುವೆಯಾಗಲು ಒಪ್ಪುವಂತೆ ; ಕಾಲದ ವರ್ಶ ನಡೆದದ್ದೆಲ್ಲಾ ಆತ ಮರೆತುಬಿಡುವಂತೆ :ಅದೆಲ್ಲ ಬರಿ ಕನಸು ಎಂದೂ, ಹುಚ್ಚು ಎಂದೂ ನಂಬುವಂತೆ : ತನ್ನ ಪ್ರಯತನ ಸಿದ್ಧಿಸಿದ್ದೇನು ಸಣ್ಣ ಮಾತೆ ? ಕೊನೆಗೊಮೆ ತಾನು ನಿರೀಕ್ಷಿಸಿದಂತೆ ಎಲ್ಲ ನಡೆಯತೊಡಗಿತ್ತು.
-'ನಾ ಹಿಂದಿನದೆಲ್ಲಾ ಮರ್ರ್ತಬಿಟೇನಿಶಂಕರಮಾಮಾ, ನೀವು ಹೇಳಿಧಾಂಗ ಬಾಸ್ ಮಗಳನ್ನು ಲಗ್ನಾ ಮಾಡಿಕೊಳ್ಳಿಕ್ಕೆ ತಯಾರಿದ್ದೀನಿ. ಇಷ್ಟ ದಿವಸ ಆದದೆಲ್ಲಾ ಮನಸಿನ್ನ್ಯಾಗಿನಿಂದ ತಗದ ಬಿಟ್ಟು ಹೊಸಾ ಜೀವನ ಸುರು ಮಾಡುತೀನಿ' -ಅಂದಿದ್ದ ಚಂದೂಲಾಲ್ ಅಂದು ಸಂಜೆ ಚೌಪಾಟಿಯಲ್ಲಿ ಅಡ್ಡಾಡುತಿದ್ದಾಗ, ಬಹಳ ಆತ್ಮೀಯವಾಗಿ. ತನ್ನ ಗೆಲುವು ಅದು ಆ ಗೆಲುವು ಪೂರ್ಣವಾಗಲು ಇನ್ನೂ ಒಂದಿಷ್ಟು ಏನೋ ಆಗಬೇಕಿತ್ತು. ಅದು ಆದದ್ದು ಇಂದು ಮುಂಜಾನೆ. "ಚಹಾ ತಗೋಬರ್ರಿ ಮಾಮಾ" -ಬಾಗಿಲಲ್ಲಿ ನಿಂತು ಹೇಳಿದ್ದಳು ಕಲಾ ತಲೆಯ ಮೇಲೆ ಸ್ನಾನ ಮಾಡಿದ್ದಿರಬೇಕು, ಕೂದಲು ಬೆನ್ನಮೇಲೆ ಹರಡಿದ್ದವು : ಸಾದಾ ಬಿಳಿಯ ಸೀರೆ : ಯಾವ ಅಲಂಕಾರವು ಇಲ್ಲದ್ದೇ ಇದ್ದರೂ ಮಿಂಚುತ್ತಿದ್ದ ಕಾಣುಗಳು.... ಇಪ್ಪತ್ತು ವರ್ಷಗಳ ಹಿಂದೆ ಇವಳ ಅಕ್ಕನನ್ನು ತಾನು ಮಾದುವೆಯಾದಾಗ ಆವಳೂ ಹೀಗೇ ಕಾಣುತ್ತಿದ್ದಳು. ಈಗ..ಓಹ್, ಕರಿ ಬಿಳಿ ಕೂದಲಿನ ನಿರಿಗೆಗಟ್ಟಿದ ಹಣೆಯ,ಜೋತುಬಿದ್ದ ಎದೆಯ,ದಪ್ಪ ನಿತಂಬದ ಸಿಡುಕಿ ಹೆಂಡತಿಯ ಈಗಿನ ಸ್ವರೂಪ ನೆನೆಯಲೂ ಬೇಸರವಾಯಿತು ಶಂಕರಮಾಮಾಮನಿಗೆ.ಅದರ ಬದಲು ಇನ್ನೊಮ್ಮೆ ಕಲಾನನ್ನೇ ನೋಡಿದರೆ ಈ ಪೈಲುಗಳಿಂದ ಹಿಡಿದ ತಲೆಚಿಟ್ಟು ಕಡಿಮೆಯಾದೀತು'
-ಕಲಾ:ತಾಯಿ-ತಂದೆಯಿಲ್ಲದ ತಬ್ಬಲಿಯೆಂದು ತನ್ನ ಹೆಂಡತಿ ಮದುವೆಯಾದಾಗ ತನ್ನೋಂದಿಗೇ ಈ ಪುಟ್ಟ ತಂಗಿಯನ್ನೂ ಕರೆತಂದಿದ್ದಳು ಗಂಡನ ಮನೆಗೆ.ಆಗಿನ್ನೂ ಕಲಾಗೆ ಎಂಟು ಹತ್ತು ವರ್ಷವಿದ್ದೀತು.ಆವಳನ್ನು ತಾನೂ ತನ್ನ