ಪುಟ:ನಡೆದದ್ದೇ ದಾರಿ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ -ತನ್ನ ಕೆಲಸ ನಿಜವಾಗಿಯೂ ಕಠಿಣವಾದುದಾಗಿತ್ತು. ಆದರೆ ದೇವರು ದೋಡ್ಡವನು ನಿಜಕ್ಕೂ. ಜನರಲ್ ಮ್ಯಾನೇಜರ್ ಸ್ವತಃ ತನ್ನನ್ನು ಕರೆಸಿ,ತಮ್ಮ ಮಗಳು ವಿಷಯ ಪ್ರಸ್ತಾಪಿಸಿದ್ದರು.ಚಂದೂಲಾಲನನ್ನು ಕೇಳಿ ನೋಡೆಂದು ಕೇಳಿಕೊಂಡಿದ್ದರು.'ನೀವು ಹಿರೇ ಮನುಷ್ಯಾರು.ನಿಮ್ಮ ಮಾತು ಕೇಳತಾನ ಆತ'-ಎಂದು ಉಬ್ಬಿಸಿದ್ದರು. ಚಂದೂಲಾಲನಿಗೆ ಒಳ್ಲೆಯದಾಗುವಂತೆ ಮಾಡಬೇಕು.ಲಗ್ನದ ನಂತರ ಹಿಂದಿನದನ್ನು ಮರೆಯುವುದೇನೂ ತ್ರಾಸಾಗುವುದಿಲ್ಲ.ಅವನ ಲಗ್ನವಾದರೆ ಕಲಾನೂ ಅವನನ್ನು ಮರೆಯಬಹುದು. ಅವರಿಬ್ಬರ ಮನಸ್ಸನ್ನು ಬದಲಿಸಬೇಕಾದುದು ತಾನು ಮಾಡಬೇಕಾದ ಕೆಲಸ ಈಗ.ಉದ್ದೇಶ ಒಳ್ಳೇದಿದ್ದಾಗ ದಾರಿ ಯಾವುದಾದರೇನು?ಒಂದಿಷ್ಟು ಸುಳ್ಳು-ಪಳ್ಳು ಹೇಳಬೇಕಾಗಿ ಬಂದರೂ ಅಡ್ಡಿಯಿಲ್ಲ. ಕಲಾ ಅಂತೂ ತನ್ನನ್ನು ನಂಬುತ್ತಾಳೆ;ಚಂದೂಲಾಲ ಸ್ವಲ್ಪ ಹುಷಾರು ಪೈಕಿ ಮನುಷ್ಯ.ಆದರೂ ಅಡ್ಡಿಯಿಲ್ಲ.ತನಗೆ ಆವನ ದುಪ್ಪಟ್ಟು ಸರ್ವೀಸಾಗಿದೆ... 'ಚಂದೂಲಾಲನಂಥ ಬೇಜವಾಬ್ದಾರಿ ಮನುಷ್ಯನಿಂದ ನಿನಗ ಎಂದೂ ಸುಖ ಆಗೋದಿಲ್ಲಾ ಕಲಾ.ದಿನಾ ಸಂಜೀನ್ಯಾಗ ಫ಼ರಾಸ್ ರೋಡಿನ್ಯಾಗ ಕುಡಿದು ಬಿದ್ದಿರತಾನ ಆ ಮನುಷ್ಯ.' ಕಲಾನಿಗೆ ಸಹಜವಾಗಿಯೇ ಶಾಕ್ ಆಗಿತ್ತು.'ಹೌದೇನ್ರೀ ಮಾಮಾ?ನನಗ ನಂಬಲಿಕ್ಕೆ ಆಗೋದಿಲ್ಲ...' 'ನಾ ಯಾಕ ನಿಂಗೆ ಸುಳ್ಳು ಹೇಳ್ಲೀ ಕಲಾ?ಹೂವಿನಾಂಗ ಬೆಳೆಸೀವಿ ನಿನ್ನ.ನನ್ನ ಸಂಕಟಾ ನಿನಗೇನು ಗೂತ್ತವ್ವಾ?'-ನಿಜವಾಗಿಯೂ ಕಳಕಳಿಯಿಂದ ಹೇಳಿದ್ದ ತಾನು.ಚಂದೂಲಾಲ ಪಾರ್ಟಿಗಳಲ್ಲಿ ಕುಡಿಯುತ್ತಿದ್ದುದೇನೂ ಸುಳ್ಲಿರಲಿಲ್ಲವಲ್ಲಾ! 'ಒಬ್ಬ ಛಲೋ ಹುಡುಗನ್ನ ನೋಡಿ ನಿನ್ನ ಲಗ್ನ ಮಾಡಿಕೊಟ್ಟು ನೀ ಸುಖದಿಂದ ಇರೋದು ನೋಡಿದಾಗ ನನಗೆ ಸಮಧಾನ.ನಿನ್ನ ಅಕ್ಕನಿಗೂ ಸಮಾಧಾನ.ಚಂದೂಲಾಲ ಪಾತರಗಿತ್ತಿ ಇದ್ದಾಂಗ.ನೀ ಸಣ್ಣಾಕಿ.ತಿಳಿವಳಿಕೆ ಇಲ್ಲ ದಾಕಿ.ಮೋಸ ಹೋಗಿ ದುಃಖ ಪಡಬಾರಧು ಅಂತ ಹೇಳಲಿಖ್ಹತ್ತೀನಿ.ನೀ ಕಣ್ಣೀರು ಹಾಕೋಹಾಂಗ ಆದರ ನಾವು ಹ್ಯಾಂಗ ಸಹಿಸೋಣವಾ?' ಕಲಾನ ಧ್ವನಿ ಗದ್ಗದಿತವಾಯಿತು.'ಆಳಬ್ಯಾಡ್ರೀ ಮಾಮಾ,ನೀವು