________________
ಕೊನೆಯ ದಾರಿ } ಮುಕ್ತಿ ೧೨೫ ಯಾವಾಗಲೂ ನನಗ ಛಲೋದನ್ನೇ ಹೇಳತೀರಿ ಅಂತ ಗೊತ್ತದ. ನಾ ನೀವು ಹೇಳಿದಾಂಗ ಕೇಳತೀನಿ. ಅವರನ್ನ ಮರೆಯೋ ಪ್ರಯತ್ನ ಮಾಡ್ತೀನಿ.'
ಇನ್ನು ಚಂದ್ರಲಾಲನ ಸರದಿ. ಚಂದೂಲಾಲ ಎಂಥವನಾದರೇನು, ಅವನಿಗೂ ಒಳ್ಳೆಯದಾಗಬೇಕೆಂಬುದೇ ತನ್ನ ಉದ್ದೇಶ. ಅವನೂ ಸುಖವಾಗಿರಲೆಂದೇ ತನ್ನ ಇಚ್ಛೆ. 'ನಾ ಹಿಂಗ ಹೇಳತೀನಂತ ತಪ್ಪು ತಿಳಕೋಬ್ಯಾಡ್ರಿ ಸರ್, ನೀವು ನನ್ನ ತಮ್ಮನ ಸರಿ, ನಿಮ್ಮ ಮುಂದಿನ ಜೀವನ ಸುಖೀ ಆಗಲೀ ಅಂತ ಇಷ್ಟೆಲ್ಲಾ ಹೇಳಿದೆ.' `ಕಲಾ ಮೊದಲಿನಿಂದಲೂ ಹೀಂಗ ಅಂತೀರ ಶಂಕರ ಮಾವಾ ? ಆಕಿ ಛಲೋ ಹುಡುಗಿ ಅಂತ ತಿಳಿದಿದ್ದೆ ನಾ ಆಕೀ ಕ್ಯಾರೆಕ್ಟರ್ ಸ್ವಲ್ಪ ಲೂಜ್ ಅಂತ ನೀವು ಹೇಳಿದ್ದು ನಂಬಲಿಕ್ಕೇ ಆಗೂದಿಲ್ಲ. ಬ್ಯಾರೆ ಯಾರು ಹೇಳಿದ್ರೂ ನಾ ನಂಬಲಿಕ್ಕಿಲ್ಲ. ಆಕೀ ಮ್ಯಾಲೆ ಭಾಳ ಜನರದು ಮರ್ಜಿ ಅಂತ ಎಷ್ಟು frank ಆಗಿ ಹೇಳಿದೀರಲ್ಲಾ ಅಂತೀನಿ. ನಿಮ್ಮ ಜಾಗಾದಾಗ ಬ್ಯಾರೇ ಯಾರಿದ್ರೂ ಹೀಂಗ ಹೇಳೋ ಧೈರ್ಯ ಮಾಡತಿದ್ದಿಲ್ಲ. 'ನನಗೂ ಅದನ್ನ ಹೇಳಲಿಕ್ಕೆ ಕೆಟ್ಟನಸತದ ಸರ್. ಆದರ ನಮ್ಮ ಜವಾಬ್ದಾ ರಿಕಿಂತಾ ನಿಮ್ಮ ಹಿತ ಮುಖ್ಯ ನನಗ.' 'ಶಂಕರ ಮಾವಾ, ನೀವು ಎಷ್ಟು ನಿಸ್ವಾರ್ಥಿ ಇದ್ದೀರಿ ! ನನ್ನ ಹಿತದ ಸಲುವಾಗಿ ಎಷ್ಟು ಕಾಳಜಿ ಮಾಡತೀರಿ !' ........ - ತಾನು ಸುಮ್ಮನೆ ಇದ್ದಾಗ ನಕ್ಕು ಕಣ್ಣು ಮಿಟುಕಿಸಿ ಕೇಳಿದ್ದ ಚಂದೂಲಾಲ. 'ಕಲಾನ ಮ್ಯಾಲೆ ನಿಮ್ಮದೂ ಮರ್ಜಿ ಆದ ಏನು ಮತ್ತ ?' ಲುಜ್ಞಾ ಇದ್ದಾನೆ ಈ ಅಸಿ. ಮ್ಯಾನೇಜರ್, ಬಾಯಿಗೆ ಬಂದದ್ದು ಮಾತಾಡುತ್ತಾನೆ. ಮೌನವೇ ಇವನಿಗೆ ಸರಿಯಾದ ಉತ್ತರ. ಬೇಕಾದದ್ದು ತಿಳಿಯಲಿ. - ಏನೂ ತಿಳಿದನೋ. 'ಹಹ್ಹಹ್ಮಜ್ಞಾ' ಎಂದು ಗಹಗಹಿಸಿ 'ಬೆಸ್ಟ್ ಲಕ್ ಶಂಕರ ಮಾಮಾ" ಅಂದ ಚಂದೂಲಾಲ. ಎರಡು ಕ್ಷಣ ಬಿಟ್ಟು ತಾನಂದಿದ್ದ, 'ನಿಮ್ಮ ಸಲುವಾಗಿ ಬೇಕಾದ್ದು ಮಾಡ್ಲಿಕ್ಕೆ ತಯಾರಿದ್ದೀನಿ ನಾ.' - ತಾನಂದದ್ದರಲ್ಲಿ ಅಪ್ರಾಮಾಣಿಕತೆಯ ನೆರಳೂ ಇರಲಿಲ್ಲ.
ಸಂಜೆ ಆಫೀಸಿನಿಂದ ತಿರುಗಿ ಮನೆಗೆ ಹೋದಾಗ ಕೋಣೆಯಲ್ಲಿ ಕಲಾ ಡಬ್ಬು