ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೨೬ ನಡೆದದ್ದೇ ದಾರಿ
ಮಲಗಿದ್ದು ಕಾಣಿಸಿತು.ಪಾಪ ಅನಿಸಿತು.ಸದ್ದಾಗದ ಹಾಗೆ ಹೋಗಿ ಅವಳ ಮಂಚದ ಪಕ್ಕದಲ್ಲಿ ನಿಂತ ಆತ.ಅವಳ ನಿಟ್ಟುಸಿರುಗಳಿಗೆ ಕಿವಿಗೊಟ್ಟ.ಮನಸ್ಸು ಕರಗಿತು.ಮೆತ್ತಗೆ ಅವಳ ಕೈ ಅದುಮಿ 'ಕಲಾ' ಅಂದ. ತಟ್ಟ್ಟನೆ ಕಣ್ಣ್ಣು ತೆರೆದ ಆಕೆ ಒರಟಾಗಿ ಕೈ ಕೊಸರಿಕೊಂಡಿದ್ದಳು.ಕಣ್ಣು ಕೆಂಪಾಗಿದ್ಡವು."ಮನಸಿಗೆ ಹಚ್ಚಿಗೋ ಬ್ಯಾಡ ಕಲಾ.ಮರೆತುಬಿಡು ಅವನನ್ನ. ಅವನ ಅಪ್ಪನಂಥಾ ವರ ಹುಡುಕಿ ಲಗ್ನಾ ಮಾಡ್ತೀನಿ ನಿಂದು.' 'ಲಗ್ನಾ ಬ್ಯಾಡ್ರೀ ಮಾಮಾ ನನಗ,ಎಲ್ಲಾ ಸಾಕಾತು"-ಭಗ್ನಪ್ರೇಮಿಯ ಭಾರವಾದ ದನಿ. "ಹಾಂಗಂದ್ರ ಹ್ಯಾಂಗ ಕಲಾ? ಜೀವನದಾಗ ಇಂಥಾ ಪ್ರಸಂಗ ಬರೋವೇ. ಆವನಂಥಾ ಚಂಚಲ ಮನುಷ್ಯ ನಿನಗ ಯೋಗ್ಯ ಅಲ್ಲವೇ ಆಲ್ಲ.ಬರೇ flirt ಮಾಡಿಕೋತ ತಿರುಗ್ಯಾಡೋ ಸ್ವಭಾವ ಅವನದು." -ಇದ್ದಕ್ಕಿದ್ದಂತೆ ಕಲಾ ಆತನ ಕಾಲುಗಳ ಬಳಿ ಕುಸಿದು ಅಳಲಾರಂಭಿಸಿದಳು. ಅವಳ ಬೆನ್ನ ಮೇಲೆ ಕೈಯಿಟ್ಟ ಆತ,"ಸಮಾಧಾನ ಮಾಡಿಕೊ ಕಲಾ,ನೀ ಒಬ್ಬ ವ್ಯಕ್ತಿ ಸಲುವಾಗಿ ಕೊರಗಲಿಕ್ಕೆ ಆ ವ್ಯಕ್ತಿಗೆ ಯೋಗ್ಯತಾ ಇರಬ್ಯಾಕೋ ಬ್ಯಾಡೋ?" ಬಿಕ್ಕುತ್ತಲೇ ಹೇಳಿದಳು ಆಕೆ,"ನೀವು ಬೇಕಾದ್ದ ಹೇಳ್ರೀ ಮಾಮಾ. ನನಗ ಚಂದೂಲಾಲನ್ನ ಮರೆಯೋದು ಆಗೋದಿಲ್ಲ.ಆತ ಕೆಟ್ಟವನಿರಲಿ.ಮೋಸ ಮೊಡಲಿ, ಖೂನಿ ಮಾಡಲಿ....ನಾ ಅವನ್ನ ಪ್ರೀತಿ ಮಾಡ್ತೀನಿ ಮಾಮಾ.ಹಿಂಗ ಬದಕಲಿಕ್ಕೆ ಶಕ್ಯನs ಇಲ್ಲ ನನಗ." ಎಲಾ ಹುಡುಗಿ!ನಿನ್ನೆ ಮೊನ್ನೆ ಭೆಟ್ಟಿಯಾದ ಮನುಷ್ಯನ ಬಗ್ಗೆ ಎಷ್ಟು ಇವಳಿಗೆ....... "ಹಾಂಗೆಲ್ಲ ಅನಬಾರದು ಕಲಾ...." "ಮಾಮಾ,ನೀವು ಮನಸ್ಸು ಮಾಡಿದರ ಅವನಿಗೆ ತಿಳಿಸಿ ಹೇಳಬಲ್ಲಿರಿ.ಅವನಿಗೆ ಹೇಳ್ರೀ ಮಾಮಾ.ಇಲ್ಲಂದರ ನಿಮ್ಮ ಕಲಾನ ಆಶಾ ಬಿಟ್ಟಿ ಬಿಡ್ರಿ...." " ಛೀ. ಹುಚ್ಚಿ ಏಳು,ಏಳು. ಏನಾದರೋ ಮಾಡೋಣಂತ. ನಿನಗ ಆಷ್ಟು ಮನಸ್ಸಿದ್ದರೆ ಏನರೇ ಮಾಡಾಲಿಕ್ಕೇ ಬೇಕಾತು. ನಾ ವಿಚಾರ ಮಾಡಾತೀನಿ.ನನ್ನ ಶಕ್ತಿಮೀರಿ
ಪ್ರಯತ್ನ ಮಾಡ್ತೀನಿ. ನೀ ಕಾಳಜಿ ಬಿಡು." "ಮಾಮಾ-" "ಹೌದು ಕಲಾ,ನಾ ನಿನ್ನ ಭಾಳ ಪ್ರೀತಿ ಮಾಡತೀನಿ. ನಿನ್ನ ಮನಸ್ಸಿಗೆ ಸಮಾಧಾನ ಆಗೋಹಂಗ ಮಾಡಲಿಕ್ಕೆ ಜೀವಾ ಸುದ್ಧಾ ಕೊಟ್ಟೇನು."