ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂದು ರಾತ್ರಿ ಹೆಂಡತಿಯ ಸಮೀಪ ಸರಿದಾಗ ಯಾಕೋ ಕಲಾನ ಶಿಲಾಬಾಲಿಕೆಯ ಮೈಕಟ್ಟು ನೆನಪಿಗೆ ಬಂದು ಆವಳು ಚಂದೂಲಾಲನನ್ನು ಮದುವೆಯಾದರೆ ಆನಿಸಿ, ಎಂಥದೋ ಸಂಕಟ ಆನಿಸಿ, 'ಛೇ, ಕೂಡದು, ಶಕ್ಯವಿಲ್ಲ.' ಎಂದೇನೇನೋ ಅನಿಸಿತು....

       -ಮರುದಿನ ಆಫ಼ೀಸಿನಲ್ಲಿ ಚಂದೂಲಾಲ ಸಹಜವೆಂಬಂತೆ "ಯಾಕ್ರೀ ಹ್ಯಾಂಗ ಇದ್ದಾಳ ಕಲಾ?" ಅಂದಾಗ ನೀರು ತುಂಬಿದ ಅವಳ ಕಣ್ಣುಗಳು- 'ಕಲಾನ ಆಶಾ ಬಿಟ್ಟಬಿಡ್ರಿ'- ನೆನಪಾಗಿ, ನಕ್ಕು ಹೇಳಿದ ಆತ, "ಆರಾಮ ಇದ್ದಾಳ ಆಕೀಗೇನು? ಒಂದು ಛಲೋ ವರ ನೋಡಿ ಲಗ್ನಾ ಮಾಡಬೇಕಂತೀವಿ ಲಗೂನ."
         ಕಲಾನಿಗೆ ಬುದ್ದಿಯಿಲ್ಲ ಪ್ರೇಮಭಂಗವಾದ ಹೊಸದರಲ್ಲಿ ಹೀಗೆಲ್ಲ ಅನಿಸುವುದು ಸಹಜ. ಮುಂದೆ ತಾನೇ ಸರಿಯಾಗುತ್ತಾಳೆ ಅವಳಿಗೆ ಯಾವುದರಿಂದ ಹೆಚ್ಚು ಒಳ್ಳೆಯದಾಗುವುದೆಂಬುದು ತನಗಲ್ಲವೇ ತಿಳಿಯುವುದು.

"ಆವನ ಮನಸ್ಸು ಬದಲಾಗೋಹಾಂಗ ಕಾಣಸೂದಿಲ್ಲ ಕಲಾ. ಬರೇ ಬಾಸ್ ಮಗಳು ಸುದ್ದೀ ಮಾತಾಡತಾನ. ನಿನ್ನ ಮಾತು ತೆಗಸಿಯೇ ಕೊಡೋದಿಲ್ಲ. ಅರಾಮ ಇದ್ದಾನ ಮಗ. ನೀ ಯಾಕವನ ಸಲುವಾಗಿ ವ್ಯರ್ಥ ಕೊರಗತೀಯೇ ತಿಳೀಲೊಲ್ಲದು.ನೀ ಆವನಕಿಂದತ ಆರಾಮ ಇರು.ನಿನಗೇನು ಕಡಿಮ್ಯಾಗೇದ?"

         -ಕಾಲಾ ಅಳಲಿಲ್ಲಿ. ಮಾತೂ ಆಡಲಿಲ್ಲಿ. ಸುಮ್ಮನಾದಳು.
         ನಂತರವೂ ಸುಮ್ಮನೆ ಇದ್ದಳು .
         ಯಾಕೋ ಚಿಂತೆಗಳೆಲ್ಲಾ ಮುಗಿದಂತೆ ಅನಿಸುತ್ತಿದೆ ಇತ್ತೀಚೆ. ಇನ್ನು ಚಂದೂಲಾಲನ ಲಗ್ನ್, ತನಗೆ ಪ್ರಮೋಶನ್....ಮೊದಲು ಅಂಧೇರಿಯಲ್ಲಿಯ ಆ ಕತ್ತಲು ಮನೆ ಬಿಡಬೇಕು.ಒಂದು ಛೆಂದ ಪುಟ್ಟ ಫ಼್ಲ್ಯಾಟು ಹಿಡಿಯಬೇಕು. ಒಂದು ಸಣ್ಣ ತೋಟ..ಬೇಕಾದರೆ ಒಂದು ಸ್ಕೂಟರ್

ಸಹ ಕೊಳ್ಳಬಹುದು.ತನ್ನ ಕೂದಲೇನೂ ಬೆಳ್ಳಗಾಗಿಲ್ಲ.ಸ್ವಲ್ಪ ಉದುರುತ್ತಿವೆ ಆ..ತನಗೆ ಫಿಟ್ ಪ್ಯಾಂಟ್ ಚೆಂದ ಕಾಣುತ್ತದೆಂದು ಮೊನ್ನೆ ಕಲಾ ಹೇಳಿದ್ದುಳು..ಒಂದು ಒಳ್ಳೆಯ ಟೆರಿಲಿನ್ ಪೀಸ ಕೊಳ್ಳಲಿಕ್ಕೆ ಅಡ್ಡಿಯಿಲ್ಲ. ಮೊದಲು ಪ್ರಮೋಶನ್.

    'ಪ್ರಮೋಶನ್ ಸಿಕ್ಕಕೂಡಲೇ ಮೊದಲು ಸತ್ಯನಾರಾಯಣ ಪೂಜೆ ಮಾಡಸಬೇಕ್ರೀ'-ಅನ್ನುತ್ತಿದ್ದಾಳೆ ಹೆಂಡತಿ, ಎಂದಿನಿಂದಲೂ.
    ಹ್ಹ, ದೇವರೆ ನೆನಪಾದರೆ ತನಗೆ ನಗು ಬರುತ್ತದೆ.ಮೊದಲಿನಿಂದಲೂ ಹಾಗೆಯೇ.