ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮

ನಡೆದದ್ದೇ ದಾರಿ ಒ೦ದು ದಿನ ಗುಡಿಗೆ ಹೊದ ನೆನಪಿಲ್ಲ. ಕೈ ಮುಗಿದ ನೆನಪಿಲ್ಲ. ದೆವರು.... ಮನುಷ್ಯನ ದೌರ್ಬಲ್ಯ, ಮೂರ್ಖತನ, ಅಯೊಗ್ಯತನಗಳ ಸಾಕಾರ ಕಲ್ಪನೆ ಥೂ, disgusting....

``ನಾಳಿನಿ೦ದ ಕಲಾ ಮತ್ತೆ ಕೆಲಸಕ್ಕೆ ಹಾಜರ ಆಗತಾಳೀನ್ರಿ ಶ೦ಕರ ಮಾಮಾ? ಆಕಿ ರಜಾ ಮುಗೀತಲ್ಲ?"

ಮೀಸ್ ಪರ್ವತಿ. "ಒ ಯೆಸ್, ಬರದ ಎಲ್ಲಿಗೆ ಹೊಗತಾಳ?"

ಪೈಲುಗಳನ್ನು ಕಟೀಡುತ್ತಾ ಊತ್ತರಿಸಿದ ಶ೦ಕರಮಾಮಾ.ಮನೆಗೆ ಹೊಗಿ ರಾತ್ರಿ ಊಟಕ್ಕೆ ಕಾಯಬೆಡವೆ೦ದು ಹೆ೦ಡತಿಗೆ ಹೆಳಿ ಬಾ೦ದ್ರದಲ್ಲಿರುವ ಚ೦ದೂಲಾಲನ ಕಡೆ ಹೊಗಬೀಕು. ಅವನ ಅಡಿಗೆಯನು ಚಿಕನ್ಕರಿ ಬಹಳ ಛಲೊ ಮಾಡತನೆ.ಚ೦ದೂಲಾಲನ ಪಾರ್ಟಿ ಅ೦ದರೆ ಮೂರು ದಿನ ಅಮಲು ಇಳಿಯುವುದಿಲ್ಲ. "ಆಪ್ಕ ಕಾ ಫೊನ್ ಹೈ ಸಾಬ್"- ಶ೦ಕರಮಾಮಾನ ಅಮಲು ಏರುತ್ತಿದ್ದುದು ಅಲ್ಲಿಗೇ ನಿ೦ತಿತು.ಯಾರಪ್ಪ ಎ೦ದು ಗೊಣಗಿಕೊ೦ಡೇ ಎದ್ದ ಆತ. ಒ೦ದು ಕ್ಶಣ ಕಾಲು ನಡುಕ; ಅಸಿ ಮ್ಯಾನೇಜರ್ ಬೋರ್ಡು, ಮಿಸ್ ಪರ್ವತಿ,ಟೈಪ್ ರೈಟರ್,ಟೇಬಲು,ಕುರ್ಚಿಗಳು,ಊಳಿದವರು-ಎಲ್ಲ ತಲೆಕೆಳಗೆ,ಕಾಲು ಮೇಲೆ,ಆಫೀಸು ಗಿಮಿ ಗಿಮಿ ತಿರುಗುತ್ತಿದೆ...ಸಮುದ್ರ ಭೊರೆ೦ದು ಊಕ್ಕಿ ಊಕ್ಕಿ ಕುತ್ತಿಗೆಗೆ ಬರುತ್ತಿದೆ... -ನೆರೆಮನೆಯ ಸಿ೦ಗ್ ನ ಧ್ವನಿ ಆಚೆಯಿ೦ದ,'ಕಲಾ ಆತ್ಮಹತ್ಯೆ ಮಾಡಿಕೊ೦ಡಳು.... ಹ್ಞಾ,ಹೌದು,ರೂಮಿನ ತೊಲೆಗೆ ಸೀರೆಯೀ೦ದ ನೇಣು ಹಾಕಿಕೊ೦ಡು... ನನ್ನ ಹೆ೦ಡತಿ ನಿಮ್ಮ ಮನೆಯವರ ಜೋಡಿ ಇದ್ದಾಳ... ಹ್ಞಾ ಹ್ಞಾ,ಪೊಲೀಸರಿಗೆ ತಿಳಿಸಲ್ಲ... ಲಗೂ ಲಗೂ ಬರ್ರಿ.' ಬೀಳಲಿದ್ದ ಶ೦ಕರಮಾಮಾನನ್ನು ಆಧರಿಸಿ ಹಿಡಿದರು ಯಾರೋ. ಪ್ಲಾಟ್ ಫಾರ್ಮ್ ಮೇಲಿನ ಗದ್ದಲ, ಸೇ೦ಗಾ ಮಾರುವ ಮೂದುಕಿ, ಕುಷ್ಟರೋಗಿ ಭಿಕ್ಶುಕ- ಎ೦ದಿನ೦ತೆಯೇ.ಸುಡುವ ಬಿಸಿಲು-ಹೊರಗೆ,ಒಳಗೆ-ಎ೦ದಿನ೦ತೆಯೇ-ಏನೂ ಬದಲಾವಣೆಯಿಲ್ಲ. ಕಲಾ ಸತ್ತು ಎ೦ಟು ದಿನ. ಇ೦ದು ತಾನು ಹೊರಬಿದ್ದದ್ದು. ಎಲ್ಲೋ ದೂರ ವರ್ಗ ಮಾಡಿಸಿಕೋ೦ಡು ಹೊರಟಿದ್ದಾನೆ ಚ೦ದೂಲಾಲ.