ಪುಟ:ನಡೆದದ್ದೇ ದಾರಿ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________


ಕೊನೆಯ ದಾರಿ / ಮುಕ್ತಿ



ಅವನೂ ಮುಕ್ತನಾಗುತ್ತಾನೆ ಲಫಂಗ....
ಕಲಾ.... ತಿರುತಿರುಗಿ ಅವಳ ಹೊರಬಿದ್ದ ಕಣ್ಣುಗುಡ್ಡೆಗಳೇ ನೆನಪಾಗುತ್ತಿವೆ
. ಜಂತಿಗೆ ತೂಗಾಡುತ್ತಿದ್ದ ವಿಕೃತವಾದ ದೇಹ- ಶಿಲಾಬಾಲಿಕೆಯ ಮಾದಕತೆ ಇರಲಿಲ್ಲ.
ಭಯಂಕರವಾಗಿ ಅಂಜಿಕೆ ಬರುವಂತಿತ್ತು ಕಲಾನ ಹೆಣ.
ಏನೆಂದುಕೊಂಡಳೋ ಸಾಯುವಾಗ.... ಏನು ವಿಚಾರಿಸಿದ್ದಾಳು ? ನೋವಾಗಿರಬಹುದೇ ? ಹೇಗೆ ಸಹಿಸಿದ್ದಾಳು... ಹೀಗೆ ಮುಕ್ತಿ ಪಡೆಯಬಯಸುವಷ್ಟು ಆಸಹನೀಯವಾಗಿತ್ತೇ ಬದುಕು ಅವಳಿಗೆ ?.....'ಕಲಾನ ಆಶಾ ಬಿಟ್ಟ ಬಿಡ್ರಿ'.....
ತಾನು ಹೇಗೆ ಮುಕ್ತನಾಗುವುದು ಇದರಿಂದ ? ತಾನು.... ಎಲ್ಲರಿಗೂ ಹಿತ ಮಾಡುತ್ತ ಬಂದಿರುವ ತಾನು.... ಸುಳ್ಳಾದರೂ ಹೇಳಿ ಪರಹಿತ ಮಾಡುವ ತಾನು....? ತಾನು ಪಾಪಿಯೇ ? ಮುಕ್ತಿಯಿಲ್ಲವೇ ತನಗೆ ?
-ಛೇ, ಹೀಗೆಲ್ಲ ಅನಿಸಬಾರದು. ಅನಿಸಿಸಿಕೊಳ್ಳಬಾರದು....
ಶಂಕರಮಾಮಾನ ಕಾಲು ಅಪ್ರಯತ್ನವಾಗಿ ರಸ್ತೆಯ ಬದಿಗೆ ಹೊರಳುತ್ತವೆ... ಸೋತು ಹೋಗಿದ್ದ ಕಾಲುಗಳು, ಹೈರಾಣಾಗಿದ್ದ ಮೈ-ಮನಸ್ಸು..... ಹಳೆಯ ಗುಡಿ, ಇಷ್ಟು ವರ್ಷಗಳಿಂದಲೂ ಇಲ್ಲೇ ಇತ್ತೇ ಈ ಗುಡಿ ? ತನಗೇಕೆ ಕಂಡಿರಲಿಲ್ಲ ಒಮ್ಮೆಯೂ ?
-ದೊಡ್ಡ ಕಂಬಗಳು, ಜೀರ್ಣವಾಗಿದ್ದ ಚಪ್ಪರ, ಮಂದ ಬೆಳಕು, ಉಳಿದದ್ದೆಲ್ಲ
ಕತ್ತಲು.... ಈ ಕಲ್ಲು ದೇವರು ಕೊಡುತ್ತಾನೆಯೇ ತನಗೆ ಶಾಂತಿ ? ತನ್ನೊಳಗೆ ಒಂದೇ
ಸಮನೆ ಉರಿಯುತ್ತಿರುವ ಬೆಂಕಿ ಆರಿಸುವನೇ ಇವನು ? ಸುತ್ತೆಲ್ಲ ಕಡೆಯಿಂದ
ಭೋರ್ಗರೆಯುತ್ತ ತನ್ನನ್ನು ಪೂರ್ಣ ಮುಳುಗಿಸಲೆಂದು ಬರುತ್ತಿರುವ ಈ ರಾಕ್ಷಸ
ಅಲೆಗಳನ್ನು ತಡೆಯುವನೇ ? ತನ್ನ ಮೈತುಂಬ ಸುಡುತ್ತ ಹರಿದಾಡುತ್ತಿರುವ ಈ
ವಿಷವನ್ನು ತಣ್ಣಗಾಗಿಸುವನೇ ? ಕೊಡುವನೇ ಈ ನಾಲಾಯಕ ತನಗೆ ಮುಕ್ತಿಯನ್ನು
-ಶಂಕರ ಮಾಮಾ ಪೂರಾ ಸೋತು ಕುಸಿದು ಕಲ್ಲು ಕಂಬಕ್ಕೆ ತಲೆಯೊರಗಿಸಿ ಬಿಕ್ಕಿ ಬಿಕ್ಕಿ ಅತ್ತನು.