________________
ಕೊನೆಯ ದಾರಿ } ಹೊರಟು ಹೋದವನು ೧೩೧ ವರದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ? - ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರವೆ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು. ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು. - ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ' ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು. ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.