ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಡೆದದ್ದೇ ದಾರಿ `ಸ್ವೀಪಿಂಗ್ ಪಿಲ್ಸ್ ಓವರ್‌ ಡೋಜಾಗಿದೆ' - ಅಂದಿದ್ದರು ಫ್ಯಾಮಿಲಿ ಡಾಕ್ಟರು. 'ನಿನ್ನೆ ರಾತ್ರಿ ಯಾರು ಅವರಿಗೆ ಔಷಧ ಕೊಟ್ಟಿದ್ದು ?" 'ನಾನು' ಎಂದಿದ್ದೆ ತಾನು ದೃಢವಾಗಿ, “ನೀವು ಹೇಳಿದ್ದ ಮಿಕ್ಸಚರ್ ಮತ್ತ ದಿನಾ ಕೊಡುಹಾಂಗ ಒಂದು ಗುಳಿಗಿ ಕೊಟ್ಟನಿ....' -ಹೆಂಡತಿ ಆಗಲಿದ ದುಃಖದಿಂದಲೋ ಜಡ್ಡಿನ ಬಾಧೆ ತಾಳದಂತಾಗಿಯೋ ಅಪ್ಪ ಬೇಕೆಂತಲೇ ಸೀಪಿಂಗ್ ಪಿಲ್ಸ್ ತೆಗೆದುಕೊಂಡು ಸತ್ತಿರಬೇಕೆಂಬ ಘೋರ ತಾಪದಾಯಕ ಅರಿವಿನಿಂದಾಗಿ ಎಲ್ಲರೂ ಬಹಳ ಅತ್ತರು. -ಸುಮ್ಮನೆ ಕೂತಿದ್ದ ನನ್ನನ್ನೇ ನೋಡಿ ಗಾಬರಿಯಿಂದ ಹತ್ತಿರ ಬಂದು ಬೆನ್ನು ತಟ್ಟಿದ್ದ ಸತೀಶ, 'ನಿನಗ ಭಾಳ ದುಃಖ ಆಗೇದಂತ ನನಗೆ ಗೊತ್ತದ. ಆದರೇನು ಮಾಡೂದು ? ಜೀವನದಾಗ ಇವೆಲ್ಲ ಬರೂವ, ಸಮಾಧಾನ ಮಾಡಿಕೋ. ಧೈರ್ಯಾ ತಂದುಕೋ.' ಈ ಮನುಷ್ಯ ತನ್ನನ್ನು ತಪ್ಪು ತಿಳಿಯುವುದಕ್ಕೂ ಒಂದು ಮಿತಿ ಬೇಡವೇ ಎನಿಸಿ, ಕೆಟ್ಟೆನಿಸಿ, ಆಗ ಆಳು ಬಂದಿತ್ತು. ಆದರೆ ಅಂದಿನ ರಾತ್ರಿ ಅಪ್ಪನಿಗೆ ಒಂದೇ ಗುಳಿಗೆ ಕೊಟ್ಟಿದ್ದೆನೋ ಅಥವಾ ಕೈತಪ್ಪಿ ಇಲ್ಲವೆ ಮರವೆಯಿಂದ ಇಲ್ಲವೆ ಗೊತ್ತಾಗದೆ ಇಲ್ಲವೆ ಏನೋ ಆಗಿ ಹೆಚ್ಚು ಕೊಟ್ಟಿದ್ದೆನೋ ತನಗೆ ಈಗಲೂ ನೆನಪಾಗಿಲ್ಲ .... ಈಗ ರಾತ್ರಿ ಎರಡು ಗಂಟೆ. ದಟ್ಟ ಕತ್ತಲು ಹೊರಗೆ, ಈಗಲೇ ಮಲಗಿ ಸ್ವಲ್ಪ ನಿದ್ದೆ ಮಾಡಬೇಕು. ಇಲ್ಲವಾದರೆ ಹಗಲಾದಾಗ ನಿದ್ದೆ ಹತ್ತಿ ಲೋಂಡಾ ಬಂದಾಗ ಎಚ್ಚರಾಗದೇ ಹೋದೀತು. ಛ, ಸುಳ್ಳೆ ಹೆದರಿಕೆ ತನಗೆ. ಎಷ್ಟೋ ಸಲ ಪೂನಾದಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಪೂನಾಕ್ಕೆ ಪ್ರವಾಸ ಮಾಡುವಾಗ ಪೂರಾ ಹದಿನಾಲ್ಕು ತಾಸು ತಾನು ನಿದ್ರಿಸಿದ್ದುಂಟು. ಆದರೂ ಲೋಂಡಾ ಬಂದಾಗ ಮಾತ್ರ ತಾನಾಗಿ ಎಚ್ಚರಾಗುವುದು. ಪ್ರತಿ ಸಲ ಹಾಗೆಯೆ. ಪೂನಾದಲ್ಲಿ ಮನೆಯೊಳಗೆ ಎಷ್ಟೋ ಸಲ ಮಕ್ಕಳ ಪರೀಕ್ಷೆ ಇದ್ದಾಗ, ಸತೀಶನಿಗೆ ಆಫೀಸಿನಲ್ಲಿ ಕೆಲಸ ಜಾಸ್ತಿ ಇದ್ದಾಗ, ಎಲ್ಲಾ ಹಾಗೇ ಚೆಲ್ಲಿ ಬಿಟ್ಟು ತಾನು ಹುಬ್ಬಳ್ಳಿಗೆ ಬರುತ್ತಿದ್ದುದುಂಟು. ಬಂದರೆ ಎಂದೂ ಎರಡು ದಿನಕ್ಕಿಂತ ಹೆಚ್ಚಿಗೆ ಇರಲಿಕ್ಕೆ ಆಗಿಲ್ಲ ತನಗೆ. ಇಲ್ಲಿಗೆ ಬಂದಾಗ ಯಾಕೆ ಬಂದೆನೋ ಅನಿಸುವುದು, ಬರಿದಾದ ಮನಸ್ಸು, ಬರಿದಾದ ತಲೆ ಹೊತ್ತು ಬಂದಷ್ಟೇ ಗಡಿಬಿಡಿ- ಅಸಮಾಧಾನದಿಂದ ತಿರುಗಿ ಹೊರಡುತ್ತಿದ್ದೆ. ಆದರೆ ಈ ಬಂದೋ ಬರಿದನ್ನು ಏನೋ ತುಂಬಿದಂತೆ ಅನಿಸುವುದು,