________________
ನಡೆದದ್ದೇ ದಾರಿ ಹೊಸ ಹೆಂಡತಿಗಾಗಿ ಹಲವಾರು ಮಿಠಾಯಿ ವ್ಯಾಪಾರ ಮಾಡುವುದರಲ್ಲಿ ತೊಡಗಿದ್ದ ಸತೀಶ, ಅವನೊಂದಿಗೆ ತಾನು ಸಭ್ಯತೆ ಮರೆತು ಅವನನ್ನು ನೋಡುತ್ತಿದ್ದೆ.... ಅಪರಿಚಿತನಾದ ಈ ಮಿಠಾಯಿವಾಲಾನ ಕಣ್ಣಲ್ಲಿ ತನಗೆ ಹಿಂದೊಮ್ಮೆ ಪರಿಚಿತವಾಗಿದ್ದ ಬೆಳಕು. ತಾನು ಪ್ರಯತ್ನ ಪಟ್ಟು ಮರೆತಿದ್ದ, ಅವ್ವ-ಅಪ್ಪ-ಜಗತ್ತು ಸೇರಿ ಜುಲುಮೆಯಿಂದ ಮರೆಸಿದ್ದ ಬೆಳಕು..... ಟ್ರೇನು ನಿಧಾನವಾಗಿ ಹೊರಟು ನಂತರ ಒಮ್ಮೆಲೆ ವೇಗ ಹೆಚ್ಚಿಸಿತ್ತು. 'ಏನಷ್ಟು ವಿಚಾರ ಮಾಡತೀ ? ನನಗ ಹೇಳು. ನಿನ್ನ ಎಲ್ಲಾ ಚಿಂತಿ-ದುಃಖ ನನಗ ಕೊಡು. ನನ್ನ ಸುಖಾ ನೀ ತಗೋ.' -ಅಂದಿದ್ದ ಸತೀಶ, ಯಾವ ಪುಸ್ತಕದಲ್ಲಿ ಓದಿದ್ದನೋ. ಅವನ ಎರವಲು ಜ್ಞಾನದ ಬಗೆಗೆ ಜುಗುಪ್ಪೆ ಅನಿಸಿದ್ದರೂ ಅವನ ಎದೆಯ ಆಸರೆ ಹಿತವೆನ್ನಿಸಿತ್ತು. 'ನೀ ಯಾತರ ಸಲುವಾಗಿ ಇಷ್ಟು ಚಿಂತೆ ಮಾಡತೀ ನನಗ ಹೇಳು. ನಿನ್ನ ಹಿಂದಿನ ಜೀವನದಾಗ ಏನರೆ ಆಗಿತ್ತೇನು ? ಹಾಂಗೇನರೆ ಇದ್ದರ ನನಗ ಹೇಳು. ನಾ ನಿನ್ನನ್ನ ತಪ್ಪು ತಿಳಿಯೋದಿಲ್ಲ. ನಾ ನಿನ್ನ ಕ್ಷಮಾ ಮಾಡತೀನಿ.' -ಅಂದಿದ್ದ ಹೊಸದಾಗಿ ಮದುವೆಯಾಗಿದ್ದ ಗಂಡ ಸತೀಶ. ಆವನ ದನಿಯಲ್ಲಿ ಹೆಂಡತಿಯ ದುಃಖ ಅರಿತು ಪಾಲುಗೊಳ್ಳುವ ಕಳಕಳಿಗಿಂತಲೂ ಅವಳ ತಪ್ಪು ಕ್ಷಮಿಸಿ ಉದಾರತೆ ತೋರಿಸುವ ಕ್ಷುಲ್ಲಕ ಆತುರವೇ ಹೆಚ್ಚಾಗಿ ಕಂಡು ಬೇಸರಬಂದಿತ್ತು ತನಗೆ. - ಈಗ ಬೆಳಗಿನ ಐದು ಗಂಟೆ. ಇನ್ನಾದರೂ ಸ್ವಲ್ಪ ಮಲಗಬೇಕು, ಒಂದು ತಾಸಿನ ಮಟ್ಟಿಗಾದರೂ, ಮಿರಜ ಬಂದಾಗ ಎದ್ದು ಚಹಾ ತಗೊಳ್ಳಬಹುದು. ಸತೀಶ ಯಾವಾಗಲೂ ಹಾಗೆಯೆ, ಕ್ಷಮಿಸುವ, ಉದಾರತೆ ತೋರಿಸುವ, ಸಮಾಧಾನ ಪಡಿಸುವ, ರಕ್ಷಿಸುವ, ತಪ್ಪು ಕಡೆಗಣಿಸುವ, ಅಸಹ್ಯ ಮನುಷ್ಯ. ಹಿಂದೆ ತಮ್ಮ ಲಗ್ನವಾದ ಹೊಸದರಲ್ಲಿ ಒಮ್ಮೆ ಯಾರೋ ಹುಬ್ಬಳ್ಳಿಯಿಂದ ತನ್ನ ಇತಿಹಾಸದ ಬಗ್ಗೆ ವರರಂಜಿತವಾದ ಅನಾಮಧೇಯ ಪತ್ರ ಬರೆದಾಗ ಅದನ್ನು ತನ್ನೆದುರಿಗೇ ಓದಿ ಹರಿದು ಹಾಕಿ ನಕ್ಕುಬಿಟ್ಟಿದ್ದ ಆತ, 'ಕಾಲೇಜಿನ್ಯಾಗಿದ್ದಾಗ ಏನೇನರೆ ಆಗಿರಾವ. ನಾ ನಿನ್ನ ಹಿಂದಿನ ತಪ್ಟೆಲ್ಲಾ ಕ್ಷಮಾ ಮಾಡಿಬಿಟ್ಟನಿ. ನಿನ್ನ ಮ್ಯಾಲೆ ನನಗ ಪೂರಾ ವಿಶ್ವಾಸ ಆದ. ಇನ್ನ ಮುಂದ ನೀ ನನಗ loyal ಇದ್ದರ ಮುಗೀತು.' ಅವನ ಈ ಮನೋಭಾವ, ಹೆಂಡತಿಯ ದೋಷಗಳನ್ನು ಮನ್ನಿಸಿ ಹೊಟ್ಟೆಯಲ್ಲಿ ಹಾಕಿಕೊಳ್ಳುವ ಈ protective instinct - ತನ್ನೊಳಗೆ ಬೆಂಕಿ ಹೊತ್ತಿಸುತ್ತದೆ. ನನಗೆ ಬೇಡ ನಿನ್ನ ಕ್ಷಮೆ, ನನಗೆ ಬೇಡ ನಿನ್ನ ದಯೆ, ನನಗೆ ಬೇಡ ನಿನ್ನ ಸಹಾನುಭೂತಿ - ಎಂದೆಲ್ಲ ಒದರಬೇಕೆನಿಸುತ್ತದೆ..... ಎಷ್ಟೋ ಸಲ ತಾನು ಕ್ಲಬ್ಬಿಗೆ ಹೋಗಿ ರಾತ್ರಿ ತಡವಾಗಿ ಮನೆಗೆ ಬಂದರೂ