ಅವನಿಗೆ ಸಿಟ್ಟು ಬರುವುದಿಲ್ಲ. ಅವನ ಗೆಳೆಯರೊಂದಿಗೆ ತಿರುಗಿದರೂ ಅವನು ಏನೂ ಅನ್ನುವುದಿಲ್ಲ. ಆ ಗೆಳೆಯರ ಹೆಂಡಂದಿರಿಗೆಲ್ಲ ಮಾತ್ರ ತನ್ನ ಮೇಲೆ ವಿಪರೀತ ಸಿಟ್ಟುಆಸೂಯೆ. ಅವರೆಲ್ಲ ಕೂಡಿದಾಗ ಮರೆಯದೆ ಚರ್ಚಿಸುವ, ದೂಷಿಸುವ ವಸ್ತು ತಾನು. ಹ್ಞು : ಗಂಡಂದಿರ ಮೇಲೆ ನಂಬಿಕೆಯಿರದ ದುರ್ದೈವೀ ಹೆಂಡಂದಿರು ಸುಂದರಿಯರಾದ ಇತರ ಹೆಂಗಸರನ್ನು ದೂಷಿಸುವುದರಿಂದಲ್ಲದೆ ಹೋದರೆ ಇನ್ನಾವುದರಿಂದ ತೃಪ್ತಿ ಹೊಂದಬೇಕು?
ಎಲ್ಲ ಕೇಳಿ, ಎಲ್ಲ ನೋಡಿ, “ನಿನ್ನ ಮೇಲೆ ವಿಶ್ವಾಸವಿದೆ' ಅನ್ನುವ ಸತೀಶನನ್ನು ಎತ್ತಿ ಅವನ ಫ್ಯಾಕ್ಟರಿಯೊಳಗಿನ ಬೆಂಕಿಯುಗುಳುವ ಬಂಬಿನಲ್ಲಿ ಹಾಕಬೇಕು ಅನ್ನಿಸುವುದು....
—ಆದರೆ ಬಹುಶಃ ಇದರಲ್ಲಿ ಅವನ ತಪ್ಪಿಲ್ಲ, ಅವನಿಗೆ ತನ್ನ ಹೆಂಡತಿಯ ಬಗೆಗಿನ ಸತ್ಯವನ್ನು ಅರಿತು ಎದುರಿಸುವ ಧೈಯ್ಯವಿರಲಾರದು ; ಅಂತೆಯೆ ಅವಳ ತಪ್ಪನ್ನು ತಾನು ಕ್ಷಮಿಸಿದ್ದೇನೆಂದುಕೊಂಡು, ಇಷ್ಟೆಲ್ಲ ಆದರೂ ಅವಳನ್ನು ಬಿಡದೆ ಪ್ರೀತಿಸುತ್ತಿರುವೆನೆಂದುಕೊಂಡು, ಅವಳಿಗಾಗಿಯೇ ಅವಳೊಂದಿಗಿದ್ದು ಅವಳನ್ನು ಜಗತ್ತಿನ ಎಲ್ಲ ದುಃಖ-ಕಷ್ಟಗಳಿಂದ ಕಾಯುತ್ತಿರುವೆನೆಂದುಕೊಂಡು, ಅವಳಿಗಾಗಿ ತ್ಯಾಗ ಮಾಡುತ್ತಿರುವೆನೆಂದುಕೊಂಡು ಸಮಾಧಾನದಿಂದಿದ್ದಾನೆ ಅವನು.
ಹ್ಞ -ತ್ಯಾಗ, ಪ್ರೀತಿಸುವ ವ್ಯಕ್ತಿಯಲ್ಲಿ ನಂಬಿಕೆಯಿದ್ದಾಗ ಮಾಡುವ ತ್ಯಾಗಕ್ಕಿಂತಲೂ, ನಂಬಿಕೆಯಿಲ್ಲದೇ ಬರೇ ಪ್ರೀತಿಗಾಗಿ ಮಾಡುವ ತ್ಯಾಗ ದೊಡ್ಡದೆಂದು ಹಿಂದೆಂದೋ ಕೇಳಿದ ನೆನಪು. ಸತೀಶನಿಗೆ ತನ್ನಲ್ಲಿ ನಂಬಿಕೆಯಿಲ್ಲವೆಂದು ತನಗೆ ಗೊತ್ತಿದೆ. ಹಾಗಾದರೆ ಪ್ರೀತಿಯಿರಬಹುದೇ ?
ಯಾಕೊ ಇಷ್ಟು ವರ್ಷಗಳ ನಂತರ ಒಮ್ಮೆಲೆ ಅವನ ಬಗ್ಗೆ 'ಪಾಪ !" ಅನಿಸುತ್ತಲಿದೆ....ಬೆಳಗು, ಮಿರಜ ಸ್ಟೇಶನ್ ಬಂತು. ಚಹಾ-ಕಾಫಿ-ವಡೆಗಳ ಧಾಂದಲೆ....
—'ಅಷ್ಟದೂರದಿಂದ ಇಷ್ಟೆಲ್ಲಾ ತ್ರಾಸು ಸಹನ ಮಾಡಿಕೊಂಡು ನೀ ಒಬ್ಯಾಕಿ ನೋಡವಾ ಇಲ್ಲೀ ತನಕಾ ಬಂದು ನಮ್ಮನ್ನ ನೋಡೂವಾಕಿ. ಉಳಿದ ಅಕ್ಕಾ-ತಂಗೇರು ಲಗ್ನಾದಕೂಡಲೆ ತವರಮನಿ ಮರತಬಿಟ್ಟಾರ. ನೀ ಮಾತ್ರ ಸ್ವಲ್ಪೂ ಬದಲಾಗಿಲ್ಲ. ಅವ್ವಾ-ಅಪ್ಪಾ ತೀರಿಕೊಂಡ ಮ್ಯಾಲೂ ನಿನಗ ತವರಮನೀ ಮ್ಯಾಲಿನ ಪ್ರೀತಿ ಹಾಂಗ ಆದ. ತಪ್ಪದ ಬಂದು ಬೆಟ್ಟಿ ಆಗತೀ.' – ಅನ್ನುತ್ತಾನೆ ಹುಬ್ಬಳ್ಳಿಯಲ್ಲಿಯ ತಮ್ಮ, ತಾನು ಅಲ್ಲಿಗೆ ಹೋದ ಪ್ರತಿಸಲ. ಅವನ ಹೆಂಡತಿ ಮನೆತುಂಬ ಓಡಾಡಿ ಸಿಹಿತಿಂಡಿ ಮಾಡುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಡ್ಡಾದಾಗ ಮೆಲ್ಲನೆ ಹೇಳುತ್ತಾಳೆ, “ನಮ್ಮ ಸುಶೀಗೆ ಪರಕಾರ ಹರದುಹೋಗ್ಯಾವ ನೋಡಿದ್ರೆಲಾ ವೈನ್, ಹ್ಯಾಂಗೂ
ಪುಟ:ನಡೆದದ್ದೇ ದಾರಿ.pdf/೧೪೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ದಾರಿ/ಹೊರಟು ಹೋದವನು
೧೩೫