ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕೊನೆಯ ದಾರಿ / ಹೊರಟು ಹೊದವನು
ಮುಂದೆ ತಿಂಗಳುಗಳವರೆಗೆ ಸತೀಶ ಮಂಕಾಗಿದ್ದಿ. ಆ ಡಾಕ್ಟರನ ಪೆಚ್ಚು ಮುಖ ನೋಡಿದಾಗೆಲ್ಲ ಹಾಯೆನಿಸುತ್ತಿತ್ತು.
ಅವನು ವರ್ಜ್ಯವೆಂದು ಹೇಳಿದ್ದ ಪಪ್ಪಾಯಿಹಣ್ಣನ್ನು - ದೊಡ್ಡ ದೊಂದು ಪಪ್ಪಾಯಿ ಹಣ್ಣನ್ನು- ಯಾರಿಗೂ ಗೊತ್ತಾಗದ ಹಾಗೆ ಆಟ್ಟದ ಮೇಲೆ ಕೂತು ತಾನು ತೀಂದದ್ದು ಕಡೆಗೂ ಯಾರಿಗೂ ಗೊತ್ತಾಗಿರಲೇ ಇಲ್ಲ, ಹಹ್ಹಹ್ಹ.... ಇರುವ ಸುಖ ಸಾಲದೆಂದು ಮಕ್ಕಳೊಂದು ಕೇಡು. ಈ ಮಕ್ಕಳು ತನ್ನವೆಂದು ತನಗೆಂದೂ ಅನಿಸಿಲ್ಲ. ಮುಂದೆ ಪಾಪು ಹುಟ್ಟಿದಾಗ ಸತೀಶನಿಗೆಷ್ಟು ಖುಶಿ - ಎಂದೂ ಯಾರೂ ಮಾಡಲಾರದ್ದೇನನ್ನೋ ತಾನು ಮಾಡಿದಾಗ ಹಾಗೆ. ಆ ಮಗು ಸುಮ್ಮನೆ ಬಾಯಿ ಕಿಸಿದಾಗ, ಕೈಕಾಲು ಬಡಿದಾಗ, ಅರ್ಥವಾಗದ ಧ್ವನಿ ಹೊರಡಿಸಿದಾಗ ಇವನಿಗೆಷ್ಟು ಹೆಮ್ಮೆ - 'ನಮ್ಮ ಪಾಪು ಬಹಾಳ ಮೀಶ್ವಿವ್ಹಸ್, ಬಹಾಳ ಶಾಣೆ, ಬಹಾಳ- "ಜಗತ್ತಿನಲ್ಲಿಯ ಎಲ್ಲಾ ಹಡೆದವರಿಗೂ ಹೀಗೇ ಅನೀಸುತ್ತದೆ ಕಣೋ ಸತೀಶ - ಎಂದು ಹೇಳೀದ್ದರೆ... ಹೆನ್ನೆರಡು ಗಂಟೆ. ಬಿಸಿಲು ಹೆಚ್ಚಾಗುತ್ತಲೇ ಇದೆ. ಯಾವುದೋ ರೋಡ್ ಸ್ವೇಷನ್ ಮೇಲೆ ಗೂಡ್ಸ್ ಗಾಡಿ ಹಳಿ ತಪ್ಪಿದ್ದರಿಂದ ಒಂದು ತಾಸು ಸುಮ್ಮನೆ ತಡವಾಗಿ ಹೋಯಿತು. ಇಡೀ ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು ಭಾರ,ತಲೆ ಭಾರ. ಈ ಸಲ ಹುಬ್ಬಳ್ಳಿಯಲ್ಲಿ ಹೆಚ್ಚು ದಿನ ನಿಲ್ಲಬಾರದು. ಕಂಪಾರ್ಟಾಮೆಂಟಿನಲ್ಲಿ ವಿಪರೀತ ಸೆಕೆ. ಫ್ಯಾನಿನ ಗಾಳಿಯಲ್ಲಿ ಉಗಿಯಾಗುತ್ತಿದೆ. ಹುಶ್, ಲೋಂಡಾ ಬರಬಾರದೆ.... ಅರ್ಧ ನಿದ್ದೆ, ಅರ್ಧ ಎಚ್ಚರ. ಟ್ರೇನು ನಿಂತಿದೆ. ಲೋಂಡಾ ಸ್ಟೇಷನ್.ಮಧ್ಯಾಹ್ನ ಎರಡು ಗಂಟೆಯಾಹಗಿರಬೇಕು. ಕಣ್ಣು ತೆರೆಯಲು ಮನಸ್ಸಿಲ್ಲ. "ಬಾಯಿಸಾಬ್ ಕೋ ಖಾನಾ ಲಾವ್ಱೂ? 'ನಿರೀಕ್ಛಿಸುತ್ತ ಹಾಗೇ ಕಣ್ಣು ಮುಚ್ಚಿ ಮಲಗಿದ್ದಳು ಆಕೆ.
ಜನರು ಹತ್ತುವ,ಇಳಿಯುವ ಗಡಿಬಿಡಿ. ಪೋರ್ಟರುಗಳ ಕೂಗಾಟ. ಚಹಾ-ಕಾಫಿ ಮಾರುವ ಹುಡುಗರ ಚೀರುದನಿ. ಯಾರದೋ ಮಗು ಅಳುವ ಸ್ವರ. ಯಾರೋ ಗಟ್ಟಿಯಾಗಿ ನಕ್ಕ ಹಾಗೆ. ಒಟ್ಟು ಗದ್ದಲೋ ಗದ್ದಲ.... ಆದರೆ ಊಹ್ಱೂ, ಮಿಠಯಿವಾಲಾ ಬಂದೇ ಇಲ್ಲ. ಆಕೆ ತಟ್ಟನೆ ಎದ್ದು ಕಿಡಿಕಿಯಿಂದ ಹೊರಗೆ ಹಣಿಕಿದಳು- ಪ್ಲ್ಯಾಟಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೂ, ಗದ್ದಲವೇನೋ ಬಹಳಷ್ಟಿತ್ತು. ಆದರೂ ಅವನು ಇದ್ದಿದ್ದರೆ ಇದ್ದಲ್ಲಿಂದಲೇ ತನ್ನ ಗಾಡಿ ಸಹಿತವಾಗಿ ಕಾಣಿಸುತ್ತಿದ್ದ. ಎಲ್ಲಿ ಅವನು? ಮೈಯಲ್ಲಿ