ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೪೩
ಕವಲು
ಒಂದು ತಿಂಗಳ ನಂತರ ಮೊನ್ನೆ ಆತ ಬಂದಾಗ ಬಹಳ ಉತ್ಸಾಹದಲ್ಲಿದ್ದ. ಇಪ್ಪತ್ತು ವರ್ಷಗಳಿಂದಲೂ ತಾವು ಭೆಟ್ಟಿಯಾಗಿದ್ದರು ಅದೇ ಮೊದಲನೆಯ ಸಲ ಭೆಟ್ಟಿಯಾದ ಹಾಗೆ ಇತಿಹಾಸ- ಭೂಗೋಲ ಕುರಿತು ಮಾತಾಡಿದೆ. ಸ್ವತಃ ಐವತ್ತರ ಗಡಿ ದಾಟಿ ಎರಡು ವರ್ಷವಾಗಿದ್ದರೂ ಇನ್ನು ಮುಂದೆಯೇ ನಿಜವಾದ ಜೀವನ ಸುರುಮಾಡಲಿರುವ ಹಾಗೆ ಕಾಣಿಸಿದೆ. ಆಗಿಹೋದದ್ದೆಲ್ಲ ತೀರ insignificant ಸುಲಭವಾಗಿ ಮರೆತು ಹೋಗಬಲ್ಲದ್ದು, ಭವಿಷ್ಯವೊಂದು ಸುಂದರ ಕನಸು - ಎಂದು ತನ್ನನ್ನು ನಂಬಿಸಲು ಹೆಣಗಿದೆ. ನಿಜವಾಗಿ ಆತ ಇಪ್ಪತ್ತು ವರ್ಷ ಚಿಕ್ಕವನಾಗಿ ತೋರಿದ.
- ಅಸ್ವಸ್ಥ ಮನಸ್ಸಿನಿಂದ ಆಕೆ ಮಲಗಿದ್ದಂತೆಯೇ ಪಕ್ಕಕ್ಕೆ ಹೊರಳಿ ಗೋಡೆಗೆ ಹಾಕಿದ್ದ ನಿಲುಗನ್ನಡಿಯ ಕಡೆ ನೋಡಿದಳು. ಅಲ್ಲಲ್ಲಿ ನರೆತ ಕೂದಲು, ಕಣ್ಣ ಕೆಳಗೆ ಕಪ್ಪಗಿನ ಗೆರೆ, ಹಣೆಯ ಮೇಲೆರಡು ನೀರಿಗೆ ... ಇದೇನು, ಇಪ್ಪತ್ತು ವರ್ಷಗಳಲ್ಲಿಯೂ ಒಮ್ಮೆಯೂ ತಾನು ಕನ್ನಡಿ ನೋಡಲಿಲ್ಲವೇ? ಈ ಪರಿಯ ಬದಲಾವಣೆ ಅದು ಹೇಗೆ ತನ್ನ ಲಕ್ಷ್ಯಕ್ಕೆ ಬಂದಿಲ್ಲ? ಇಂದೇ ಏಕೆ ತನಗೆ ನಲವತ್ತಾಯಿತೆಂದು ಅನಿಸುತ್ತಿದೆ? - ವಯಸ್ಸು ತನಗೊಬ್ಬಳಿಗೇ ಆಗಬೇಕೆ? ಮೊನ್ನೆ ಅಷ್ಟೆಲ್ಲ ಮಾತಾಡಿ ಕೊನೆಗೆ ತೀರಾ ಮೃದು ಧ್ವನಿಯಲ್ಲಿ, ಆ ಕೊನೆಯ ಪ್ರಶ್ನೆ ಕೇಳುವಾಗಲಂತೂ ಆತ ನಿಜವಾಗಿ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆಯೇ ಕಾಣಿಸಿದನ್ನೆಲ್ಲ, ಅದು ಹೇಗೆ? ಖರೇನೆ ಆತನ ಜೀವನೋತ್ಸಾಹ ಅಸೂಹೆ ಪಡುವಂಥದ್ದು : ' ಈ ಅಂಬಾಸಡರ್ ಕೊಟ್ಟಿಡಬೇಕಂತ ಮಾಡೀನಿ ಚುನುಭಾಯಿ ಸೇಠಗ. ಹ್ಯಾಂಗೂ ಹಳೇದಾಗೇದ. ನನಗ - ನಿನಗ ಒಂದು ಬೇಬಿ ಆಸ್ಟಿನ್ ಸಾಕು. ಹೋಗ್ಬಿಡೋಣ ಅದರಾಗ ಕೂತು - ದುನಿಯಾ ಕೆ ಉಸ್ಸ್ ಪಾರ ... ಈಗೇನು, ಯಾರಪ್ಪನ ಭಿದೇನು ಇಲ್ಲ ನನಗ. I am a brave ಮ್ಯಾನ್. ಏನಂತೀ ಮಿನಿ?' - ' ಅಲ್ಲ ಮಿನಿ, ಹ್ಯಾಂಗೂ ರಿಟೈರ್ ಆಗೋ ದಿವ್ಸ ಬಂದುವಲ್ಲ, ಇನ್ನ ಈ ಪುಣೆ ಬಿಟ್ಟು ನಮ್ಮ ಶಿರಸೀ ಕಡೆನೇ ಒಂದ ಎಸ್ಟೇಟ್ ತಗೊಂಡು ಅಲ್ಲಿ ಮಣಿ ಕಟ್ಸೋದು ಛಲೋ ಅಲ್ಲ s ? ನೀ ಹಗಲೆಲ್ಲ ಹೇಳತಿದಿಲ್ಲ s - ಅಡಿವ್ಯಾಗ ಗುಡಿಸಲು ಕಟ್ಟಿಗೊಂದು ಇರಬೇಕು ಅನಿಸ್ತದ ಅಂತ ? ಸುತ್ತಲೆಲ್ಲ ತೆಂಗಿನ ಗಿಡ.