ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲು/ಕವಲು ೧೪೫ ನೌಕರೀ ಸಿಕ್ಕಿತು ಅಂತ ವಾರ ಕೆನಡಾಕ್ಕ ಹೊಗ್ಲಿಕ್ಕೆ ತಯಾರಾಗೀದಿ. ಆರು ತಿಂಗಲಿಂದ ಅದರ ಸಲುವಾಗಿ ಖಟಿಪಿಟಿ ನಡಿಸೀದಿ.ನಿನ್ನ ಪಾಸ್ ಪೊೇಟ್ ಸುದ್ಧಾ ಬಂತು....ಆದರ ಈಗ ಎಲ್ಲಾ ಕ್ಯಾನ್ಸಲ್ ಮಾಡಬೆಕಾತು ನೊೇಡು. ನಿನಗೀನ ಇನ್ನ ದೂರ ಹೋಗೋ ಅವಶ್ಯಕತಾ ಉಳೀಲಿಲ್ಲ. ನಾ ನಿನ್ನ ಬಿಟ್ಟರ ಹೌದಲ್ಲೊ? ಇನ್ನ ಮ್ಯಲ ನಿನ್ನ ಎಲ್ಲಿಯೂ ಒಬ್ಬಕಿನ್ನೆ ಬಿಡೂದಿಲ್ಲ ನಾನು. ಎಲ್ಲೆ ಹೊದ್ರು ರಾಜರಾಣಿ ಜೊಡೀ ಜೊಡೀ ....'

        -ನಾ ಅಂತೀನಿ ಮಿನಿ, ನೀ ಇನ್ನ ನೌಕರೀ ಬಿಟ್ಟ ಬಿಡೋದು ಛಲೋ.ನಾ ನಿವೃತ್ತಿ ಆದ ಮ್ಯಾಲಂತೂ ಇಬ್ರೂ ಹೋಗಿ ನಮ್ಮ ಎಸ್ಟೆಟಿನ್ಯಾಗ ಥಣ್ಣಗ ಇದ್ದ ಬಿಡೋಣ. ನನಗರೆ ಏನ ಜವಾಬ್ದರಿ ಉಳದದ? ನಮ್ಮ ರಾಜೂಂದಂತೂ ನೌಕರಿ ಆತು, ಲಗ್ನಾತು. ಆವನಶ್ಟು ಆವಾ ಆರಾಮಿದ್ದಾನ. ಗಿರಿಜಾಂದೂ ನಿಶೇ ಆಗೇದ. ಈ ತಿಂಗಳ ಆಖೇರಕ್ಕ ಆಕೀದೊಂದ ಲಗ್ನ ಮುಗದ ಹೋಗತದ-ಪಾಪ, ಶಾಂತಾ ಇದೊಂದ ನೋಡಿ ಹೋಗ್ಬೇಕಾಗಿತ್ತಲ್ಲ ಮಿನಿ?- ಆಮೂಲ್ಯ ನ ಅಂತೂ free bird, ನಿನ್ನ ಹಿಂದಿಂದೇ ಹಾರಲಿಕ್ಕೆ!

-ನಂತರ ಒಮ್ಮೆಲೆ ತನ್ನ ತೀರ ಸಮೀಪ ಸರಿದು ಕಿವಿಯಲ್ಲಿ ಪಿಸುಗುಡುವಶ್ಟು ಹಗುರವಾದ ಧ್ವನಿಯಲ್ಲಿ ಆತ ಕೇಳಿದ್ದ: ಅಂಧ್ಯಾಂಗ ನಾವು ಎಂದ ಸಬ್ ರೆಜಿಸ್ಟ್ರರ್ ಆಫ಼ೀಸೀಗೆ ಹೋಗೋಣ ಇನಿ?- ಒಂದು ಕ್ಶಣ ತಡೆದು ಉಗುಳು ನುಂಗಿ ಮತ್ತೆ : ಅಂದರ ಜಾತೀ ಪ್ರಶ್ನೆ ಒಂದ ಅದ ಅಲ್ಲ. ಯಾರಾದ್ರೂ ಆಹದವ್ರು ಅಡ್ಡಗಾಲು ಹಾಕ್ಯಾರು ಅಂತ. ರೆಜಿಸ್ಥ್ರೇಶನ್ ಮಾಡಿಸಿಬಿಡೂದು ಛಲೋ. ಹಾಂಗ ನಿನಗೆ ಬೇಕಾದ್ರ ಅಮೂಲ್ಯ ಯಾವ್ದರೆ ಗುಡೀಗೆ ಹೋಗಿ...' -ನಾನು ನಾಳೆ ಸ್ವಲ್ಪ ಊರಿನ ಕಡೆ ಹೋಗಿ ಆ ಪ್ಲಾಟಿನ ಖರೀದಿಫತ್ರ ಮುಹೆಸಿಕೊಂಡ ಬರ್ಥಿನಿ. ನಿನಗೆ ಗೊತ್ತದ ಏನು ಮಿನಿ,ಪ್ಲಟಿನ ಖರೀದಿಪತ್ರ ಮುಗಿಸಿಕೊಂಡ ಬರ್ತಿನೀ. ನಿನಗೆ ಗೊತ್ತದ ಏನು ಮಿನಿ, ಪ್ಲಾಟಿನ ಖರೀದಿ ನಿನ್ನ ಹಹೆಸರ್ಲೇ ಆಗೂದದ. ನಲ್ಲ್ಕಾರು ದಿನಾ ಆದೀತು. ಅಶ್ತರಾಗ ನೀ ಉಲದದ್ದು ತಯಾರಿ ಮಾಡಿಕೊಂಡಿರು ಅಙ? ಆತನ ಉತ್ಸಾಹ ನೆನೆಯುತದಂತೆ ಎದುರಿನ ಕನ್ನದಿಯಲ್ಲಿನ ತನ್ನ ಪ್ರತಿಬಿಂಬೆ ಆಕೆಗೆ ಒಮ್ಮೆಲೆ ಕಾಣದಂತಯಿತು.ಬಹುಶಃ ಕಿಟಕಿಯಲ್ಲಿಂದ ಮಳೆನೀರು ಕನ್ನಡಿಗೆ ಸಿಡಿದು ಗಾಜು ಮಸುಕಾಗಿದೆ. ಆತನ ಪ್ರಶ್ನೆಗೆ ಸರಲವಾಗಿ ಉತ್ತರ ಹೇಳಲಗಿರಲಿಲ್ಲ ಆಕೆಗೆ. ಆತ ಮಾತ್ರ ಎಷು ಸರಲವಾಗಿ ಕೇಳಿದ್ದ! ಆತ ಯಾವಾಗಲೂ ಹಾಗೆಯೇ.ಜೀವನದ ಕ್ಲಿಷತಮ.