ಪುಟ:ನಡೆದದ್ದೇ ದಾರಿ.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಶ್ವಾಸ ಆತಿಲ್ಲೋ ? ಈ ದೂರದ ಹದಿ,ರಜಾದ ಪ್ರಶ್ನಿ , ಮನ್ಯಾಗ ಏನು ತಿಳಿದಾರೋ ಆನ್ಯೂ anjike- nothing can come in my way ' -ನೂರಾರು ಮೈಲುಗಳಾಚೆಯಿಂದ ಕೇವಲ ತನ್ನನು ಕಾಣಲೆಂದೇ ಬರುತ್ತಿದ್ದೆ ಆತನ ದಣಿದ ಮುಖ ನೋಡಿದಾಗ ಆಕೆಗೆ ಜೀವನದಲ್ಲಿ ಸಾರ್ಥಕ್ಯವೆಂದರೆ ಇದೇ ಇರಬೇಕು ಆನಿಸುತ್ತಿದೆ.

   -' ಒಮೊಮ್ಮೆ ನನಗೇನನಿಸ್ತದ ಗೊತ್ತೇನು ಮಿನಿ ? ನಾವು ಹಿಂಗ ಕಳ್ಳತನದಿಂದ ಭೆಟ್ಟಿಯಾಗೋ ಬದಲು ನಾ ಒಮ್ಮೆ ಎಲ್ಲಾರ ಮುಂದ ನಮ್ಮ ಸಂಬಂಧ announce ಮಾಡಿಬಿಡ್ತಿನಿ. ಅದು ಕಾಯ್ಡೋಶೀರ ಆಗೋದಿಲ್ಲ ಖರೆ, ಆದರ ಪ್ರೀತಿಗೆ ಯಾವ ಸೂಳೇಮಗಾ ಕಾಯ್ದೆ ಲಾಗೂ ಮಾಡ್ತಾನ ? ನಾವು ಒಂದು ಮನೀ ಮಾಡೋನು, ಮಕ್ಕಳ್ನ ಹಡಿಯೋಣು...ನಮ್ಮಿಬ್ಬರ ಮಗಾ ನನಹಾಂಗ brave ಆಗತಾನೆ, ಮತ್ತ wವಾಹ ನಿನ್ನಹಂಗ ಛನ್ದ ದೊಡ್ಡ ಕಣ್ಣು ಇರತಾವ... ರಾಜಾರೋಷಾಗಿ ಸಂಸಾರ ಮಾಡೋಣು.ನೀ ಯಾಕ ಹೆದರತೀ ?ನಾಯೋನ ನನ್ನ ಹೆಂಡತೀ ಮಕ್ಕಳಿಗೆ ಅನ್ಯಾಯ ಮಾಡಿಧಾಂಗಾಗೂದೆಲ್ಲ ಇದರಿಂದ. ಐವತ್ತು ಸಾವಿರದ ಇನ್ಶೂರೆನ್ಸ್ ಪಾಲಿಸಿ ಆದ ಅವರ ಹೆಸರಿಗೆ .ಮನಿ ಆದ,ಹೋಲಾ ಆವ,ಕ್ಯಾಶ್ ಆದ .ನಾ ಹಾಂಗ ಪೂರಾ ಬಿಡೂದಿಲ್ಲ ಆವರನ್ನ .ನಿನ್ನಿಂದ ಸವುಡು ಸಿಕ್ಕಾಗೆಲ್ಲಾ ಹೋಗಿ ಭೆಟ್ಟಿ-ಗಿಟ್ಟಿ ಆಗಿ ಬರ್ತೀನಿ ...ಏನಂತಿ?' -ಆ ಮಾತಿನಲ್ಲಿಯ ಗಟ್ಟಿ ವಿಶ್ವಾಸದಿಂದ ಆಕೆಗೆ ಎಷ್ಟೊಂದು ಕೃತಕೃತೈತೆಯೆನಿಸಿತ್ತೆಂದರೆ ಅದನ್ನು ಪರೀಕ್ಷೆ ಮಾಡುವ ಆವಶ್ಯಕತೆ ಆಕೆಗೆ ಎಂದೂ ತೋರಿರಲಿಲ್ಲ.

ಮೊನ್ನೆ ಆತ ಕೇಳಿದ್ದು ಮಹತ್ವದ ಪ್ರಶ್ನೆ ಖರೆ,ಆದರೆ ಅನಿರೀಕ್ಷಿತವಾದದ್ದಲ್ಲ.ಅನಪೇಕ್ಷಿತವೂ ಅಲ್ಲ.ಈ ಪ್ರಶ್ನೆಗಾಗಿ ಇಪತ್ತು ವರ್ಷಗಳಿಂದಲೂ ದಾರಿ ಕಾಯುತ್ತಿಲ್ಲವೇ ತಾನು? ಹಾಗೆ ನೋಡಿದರೆ ಈ ಪ್ರಶ್ನೆಗೆ ತಾನು ಉತ್ತರ ಹೇಳಲೇಬೇಕೆಂಬುದೇನು ಕಡ್ಡಾಯವೆಲ್ಲ. ಹೊಸದಾಗಿ ಯೋಚಿಸುವುದು ಏನಿದೆ ಇದರಲ್ಲಿ ? ಈ ಪ್ರಶ್ನೆ, ಇದಕ್ಕುತ್ತರವಾಗಿ ತನ್ನ ಹೃದಯ ಗರಿಗೆದರಿ ಮುಗಿಲಿಗೆ ಹಾರುವುದು,ಹಾರುತ್ತಲೇ ಹೋಗುವುದು- ಎಷ್ಟು ಸಾವಿರ ಸಲ ಇದರ ರಿಹರ್ಸಲ್ ನಡೆದಿಲ್ಲ ತನ್ನ ಮನಸ್ಸಿನಲ್ಲಿ? ತಾನು ಉತ್ತರಿಸುವ ತೊಂದರೆ ತೆಗೆದುಕೊಳ್ಳುವುದೇ ಬೇಕಿಲ್ಲ.ಆತನಿಗೆ ಎಲ್ಲ ಪ್ರಶ್ನೆಗಳ ಉತ್ತರ ಗೊತ್ತು. ಹಾಗೆ ನೋಡಿದರೆ ಆತನ ಪ್ರಶ್ನೆಗಳೇ ಉತ್ತರಗಳು ಆಹಿರುತ್ತವೆ.ಆತನೆಂದೂ ಯಾವ ಪ್ರಶ್ನೆಯನ್ನೂ ತನ್ನೆದುರು ಇಟ್ಟಿಲ್ಲ.ಆತನೇ ಉತ್ತರವನ್ನೂ ಹೇಳಿ ತನ್ನ ಕೆಲಸ ಹಗುರ ಮಾಡಿಬಿಡುತ್ತಾನೆ...

    - 'ನೋಡ ಮಿನಿ.ನಾ ಈಗ ಸ್ವಲ್ಪ ತ್ರಾಸದಾಗಿದ್ದೀನಿ.ನಂದೂ-ನಿಂದೂ ಕಥೀ ಎಲ್ಲ ಗೊತ್ತಾದಾಗಿನಿಂದ ಶಾಂತಾ ರಾಕ್ಷಸಿ ಆಗ್ಯಾಳ.ಬಂದವ್ರು-ಹೋದವ್ರು-