ಪುಟ:ನಡೆದದ್ದೇ ದಾರಿ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦

ನಡೆದದ್ದೇ ದಾರಿ


ನಿನ್ನ ಕಡೆ ಅನುಕೂಲ ಆದಾಗೆಲ್ಲ. ಮಿನಿ, ನನ್ನ ಕಡೆ ನೋಡು, ನನ್ನ ಕಣ್ಣಾಗ ಕಣ್ಣಿಡು. ಈಗ ಹೇಳು- ನಿನಗ ನನ್ನ ಮ್ಯಾಲೆ ಸಂಶೆ ಅನಸ್ತದೇನು ? -

            -ಇಲ್ಲ, ಆಕೆಗೆ ಎಂದೂ ಸಂಶಯ ಅನಿಸಲಿಲ್ಲ.
           ಅಸಂಖ್ಯ ರಾತ್ರಿಗಳು- ಮಳೆ ಸುರಿಯುತ್ತಿತ್ತು ;ಬೆಳದಿಂಗಳು ಬೀಳುತ್ತಿತ್ತು ;

ದಟ್ಟ ಕಟ್ಟಲು ಕವಿಯುತ್ತಿತ್ತು ; ಮೈ ಕೊರೆಯುವ ಚಳಿ ಬಿಡುತ್ತಿತ್ತು ; ತನ್ನ ಚಿಕ್ಕ ಮನೆಯ ಅಂಗಳದಲ್ಲಿ ಸುಮ್ಮನೆ ದೆವ್ವ ಬಡಿದವರ ಹಾಗೆ ಮಧ್ಯ ರಾತ್ರಿಯವರೆಗೂ ನಿಂತು ಆಕೆ ತಿರುಗಿ ಒಳಗೆ ಬರುತ್ತಿದ್ದಳು.

          ಆಫೀಸಿನ ಕೆಲಸಕ್ಕಾಗಿ ಕೆಲವು ಸಲ ಆಕೆ ಬೇರೆ ಊರುಗಳಿಗೆ 

ಹೋಗುಬೇಕಾಗುತ್ತಿತ್ತು - ಆಫೀಸಿನ ವ್ಯಾನು, ಅದರಲ್ಲಿ ಹಲ್ಲು ಕಿರಿಯುವ ವಂದಿಬ್ಬರು ಗಂಡು ಸಹೋದ್ಯೋಗಿಗಳು ; ಹೊಟೇಲುಗಳಲ್ಲಿ ಕಪ್ಪು ಕನ್ನಡಕದೊಳಗಿಂದ ಓರೆಯಾಗಿ ನೋಡುವ ಮ್ಯಾನೇಜರುಗಳು ; ರಸ್ತೆಗಳಲ್ಲಿ ಕಣ್ಣುಬಾಯಿ ತೆರೆದು ನೋಡುವ ಜನಗಳ ಮಧ್ಯೇ ಓಡಾಟ ; ಬಸ್ಸುಗಳಲ್ಲಿ ಪ್ರವಾಸ ಮಾಡಬೇಕಾದಾಗ ಯಾವಾಗಲೂ ಯಾರು ಪಕ್ಕಕ್ಕೆ ಬಂದು ಕೂಡುತ್ತಾರೋ, ಅವರಿಗೆ ಬಸ್ಸಿನಲ್ಲಿ ತಪ್ಪದೆ ತೂಕಡಿಕೆ ಬಂದಾಗ ಯಾವ ಕಡೆ ಜೋಲಿ ಹೋಗುತ್ತಾರೋ ಎಂಬ ಕಳವಳ ; ತಿರುಗಿ ಮನೆಗೆ ಬಂದಾಗ ಆಕೆ ಎರಡು ದಿನ ಮುಸುಗು ಹಾಕಿ ಮಲಗಿಬಿಡುತ್ತಿದ್ದಳು. ಸಮಯ ಕಳೆಯುವುದು ಒಮ್ಮೊಮ್ಮೆ ತೀರ ಕಷ್ಟವೆನಿಸಿದಾಗ ಮಗ್ಗುಲು ಮನೆಗಳ ಮಕ್ಕಳಂತೂ ಇದ್ದೇ ಇರುತ್ತಿದ್ದರಲ್ಲ - ಪುಟ್ಟುವಿಗೆ ಕ್ಯಾಡಬರೀಸ್ ಕ್ರಿಸ್ಟ್ ಬಹಳ ಪ್ರೀತಿ ; ಆಶಾ, ಲತಾಗೋ ಡ್ರಾಯಿಂಗ್ ರೂಮಿನಲ್ಲಿ ಶೋಕೇಸ್ ನಲ್ಲಿಟ್ಟಿರುವ ಗೊಂಬೆಗಳ ಮೇಲೆ ಕಣ್ಣು ;ಪಾಪಣ್ಣಿಗೆ ಆಕೆಯ ಬೆನ್ನ ಮೇಲೆ ಕುದುರೆ ಸವಾರಿ ಮಾಡಲು ಬಹಳ ಹುರುಪು, ಕತ್ತಲಾದ ನಂತರ ಮಕ್ಕಳನ್ನು ಅವರವರ ಮನೆಗಳಿಗೆ ಕಳಿಸಿಬಂದು ಊಟಮಾಡದೆ ಬಿದ್ದುಕೊಂಡಾಗ ಇವರಲ್ಲಿ ಯಾರ್ಯಾರು ಮುಂದೆ ಶೂರರಾಗಬಹದು, ಯಾರ್ಯಾರ ಕಣ್ಣುಗಳು ದೊಡ್ಡವಾಗಿವೆ- ಇತ್ಯಾದಿ ವಿಚಾರಗಳಲ್ಲಿ ಆಕೆಗೆ ಬೆಳಗಾದುದೇ ತಿಳಿಯುತ್ತಿರಲಿಲ್ಲ.

             - ಆತನಿಗೆ ಗೊತ್ತಾಗುತಿರಲಿಲ್ಲವೆಂದಲ್ಲ. ಹಾಗೆ ಆತ ಬಹಳ ಹುಷಾರು.

ಯಂದಾದರೊಮ್ಮೆ ಬರುತ್ತಿದ್ದರೂ ಆತನಿಗೆ ಎಲ್ಲ ಗೊತ್ತಾಗುತ್ತಿತ್ತು. 'ಮಿನಿ, ಹಾಂಗ ನೋಡಿದರ ನಿನ್ನ ತ್ಯಾಗ ಭಾಳ ದೊಡ್ಡದು. ಹದಿನಯ್ದು ವರ್ಷಾಗಿ ಹೋತು ನಾನು ನೀನು ಕೂಡಿ. ಅರ್ಧಾ ಆಯುಷ್ಯ ಕಳೀತು ಇಬ್ಬರದೂ. ನೀ ನನ್ನ ಸಲುವಾಗಿ ಭಾಳ ಸಹನ ಮಾಡೀದಿ. ಒಂದು ದಿನಾ ಬಂದೀತು- ನಿನ್ನ ತ್ಯಾಗದ ಋಣಾ ಬಡ್ಡೀಸಹಿತ ತೀರಿಸೋ ಅವಕಾಶ ನನಗೂ ಸಿಕ್ಕೀತು....' ಎದೆಗೊತ್ತಿಕೊಂಡು ಆಕೆಯ ತಲೆಗೂದಲಲ್ಲಿ