ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿಸುಮಾತನಾಡಿದವರು; ತಿನ್ನಿಂದ ಚಾಕಲೇಟು ಪಡೆದು ಓಡಿಹೋಗಿ ತಮ್ಮ ತಾಯಂದಿರ ಸೆರಗಲ್ಲಿ ಮರೆಯಾಗುವ ಮಂದಿಯ ಮಕ್ಕಳು; ಅವರೆಲ್ಲರ ನಡುವೆ ದೊಡ್ಡ ಕಣ್ಣುಗಳ ಭವ್ಯ ನಿಲುವಿನ ವೀರ ಯೋಧನೊಬ್ಬ...

    ಯಾರೋ ಚೀರುಧ್ವನಿಯಲ್ಲಿ ಅಳುತ್ತಿದ್ದರೆ.
      - ಎಂದೋ ದೊರವಾದ ತನ್ನ ಅಪ್ಪನ ಪ್ರೇತವೇ?
    ಯಾರೋ ಗಟ್ಟಿಯಾಗಿ ನಗುತ್ತಿದ್ದಾರೆ.
      - ಹಣೆತುಂಬ ಕುಂಕುಮ, ತಲೆತುಂಬ ಹೂ, ಹೊಸ ಸೀರೆಗಳಿಂದ ಅಲಂಕೃತವಾಗಿ ಚಟ್ಟಕ್ಕೆ ಬಿಗಿದಿದ್ದ, 'ಪುಣ್ಯವ್ಂತೆ' ಅಂತ ಎಲ್ಲ್ರಿಂದ ಅನ್ನಿಸಿಕೊಂಡ, ಶಾಂತಾನ ಹೆಣವೇ?
     - ಶಾಂತಾ, ನೀನು ಖರೇನೇ ಪುಣ್ಯವಂತೆ ಕಣೆ. ನಿನ್ನ ಗಂಡ ನಿನ್ನನ್ನು ಬಹಳ ಪ್ರೀತಿಸುತಿದ್ದ. ಆದರೆ ಅದು ಅವನಿಗೆ ಹೇಗೆ ಗೊತ್ತಾಯಿತೆಂದು ನಿನಗೆ ಗೊತ್ತೇ?
  - ನ್ನ್ನಿಂದ ಕಣೆ, ನನ್ನಿಂದ. I was the means. ಮಜಾ ಅಲ್ಲವೆ. ಹಹ್ಹ...
         ಅಂದಹಾಗೆ ಒಂದು ವೇಳೆ ಬ್ಲಡ್ ಪ್ರೆಶರಿನಿಂದ ನೀನು ಗೋಟಕ್ ಅಂದಿರದಿದ್ದರೆ - ಅಂದಿರದಿದ್ದರೆ - ಅಲ್ಲ, ನಮ್ಮ ಕೈಯಲ್ಲಿ ಏನಿದೆ? ಎಲ್ಲ ದೇವರ ಇಚ್ಛೆ. ನೇನು ಸತ್ತದ್ದೂ ದೇವರ ಇಚ್ಛೆ. ನಿನ್ನ ಸಾವು ಒಂದು ಸಾಮಾನ್ಯ ಘಟನೆ. ಅದರ ಪರಿಣಾಮ - ಅಂದ ಹಾಗೆ ಅದಕ್ಕೂಂ  ಪರಿಣಾಮವಿದೆಯೆಂದ ಬಳಿಕ ಅದು ಬರಿ ಘಟನೆ ಹೇಗಾದೀತು? ಅದೋಂದು ಕರಣ. ಅದರ ಪರಿಣಾಮ -
   - 'ಅಂದ್ಹಾಂಗ ನಾವು ಎಂದ ಸಬ್ ರಜಿಸ್ಟ್ರಾರ ಆಫೀಸಿಗೆ ಹೋಗೋಣ ಮಿನಿ?'
   ಆಕೆ ಧಡಕ್ಕನೆ ಎದ್ದಳು. ದೃಢವಾದ ಹೆಜ್ಜೆಗಳಿಂದ ಟೇಬಲ್ ಸಮೀಪ ಹೋಗಿ ಕೂತಳು. ಡ್ರಾಯರಿನಿಂದ ಬಿಳಿ ಕಾಗದ ತೆಗೆದು ರಜಾಚೀಟಿ ಬರೆದಷ್ಟೆ ನಿಶ್ಚಲತೆಯಿಂದ ಅದರ ಮೇಲೆ ಬರೆದಳು: 'ನನ್ನನ್ನು ಕ್ಷಮಿಸು. ಕೆನಡಾಕ್ಕೆ ಹೋಗುವುದನ್ನು ಕ್ಯಾನ್ಸಲ್ ಮಾಡುವುದು ಈಗ ಸಾದ್ಯವಿಲ್ಲ. ನಮ್ಮ ದಾರಿ ಕವಲೊಡೆದಿದೆ.
    ಗಿರಿಜಾನ ಲಗ್ನ ಚೆನ್ನಗಿ ಮಾಡು. ಅವಳಿಗೆ ನನ್ನ ಆಶೀರ್ವಾದಗಳು. ನಿನಗೆ ಹೆಚ್ಚಿಗೆ ಹೇಳುವ ಅವಶ್ಯಕತೆಯಿಲ್ಲ - You are a brave man.'
   - ಪತ್ರವನ್ನು ಆಳಿನೊಂದಿಗೆ ಕೂಡಲೇ ಅಂಚಿಗೆ ಕಳಿಸಿ ,ಅರುದಿನದ ಟ್ರೀನಿಗೆ ರಿಝಾರ್ವೇಶನ್ ಮಾಡಿಸಲೆಂದು ಆಕೆ ಸ್ವತಃ ಸ್ಟೇಶನ್ನಿಗೆ ನಡೆದಳು.