ಪುಟ:ನಡೆದದ್ದೇ ದಾರಿ.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲು/ ಒಂದು ರವಿವಾರ ೧೫೩

                                              ಒಂದು ರವಿವಾರ  
ಮುಂಜಾನೆ:
       ಇಕ್ಕಟ್ಟಾದ ಓಣಿ. ರಸ್ತೆಯ ಎರಡೂ ಬದಿಗೂ ಸಾಲಾಗಿ ಮನೆಗಳು, ಚರಂಡಿಗಳು. ಗಟಾರದ ಗುಂಟ ಆ ಕಡೆ ಬೆನ್ನುಮಾಡಿ ಮಣ್ಣಲ್ಲಿ ಬೆರಳಿನಿಂದ ಚಿತ್ರ ತೆಗೆಯುತ್ತ ಕೂತ ಮಕ್ಕಳು. ರಾತ್ರಿಯಿಡೇ ಸುರಿದ ಮಳೆಯಿಂದಾಗಿ ಕಿಚಿಕಿಚಿಯಾದ ದಾರಿ.ನಳ ಸುರಿಯುವ, ಭಾಂಡಿ ಎತ್ತಿಕ್ಕುವ ಸಪ್ಪಳ.ಹಾಲಿನವರ ಸೈಕಲುಗಳ ಸರ್ ಸರ್.ಬೆಳಗಾವಿಯಲ್ಲಿ ಬೆಳಗಾಗಿದೆ.
       ರಸ್ತೆಯ ತಿರುವಿನ ಕೊನೇ ಮನೆಯ ಅಟ್ಟದ ಮೇಲಿನ ಮುಂದಿನ ಮೂರು ಕೋಣೆಗಳು.ಮನೆಯ ಮಾಲಿಕತಿ  ಗಿರಿಜಾ ಹಿರೇಮಠ್,ಅವಳ ಜೊತೆಗೆ ಇನ್ನಿಬ್ಬರು ಹುಡುಗಿಯರು,ಕಡಿಮೆ ಬಾಡಿಗೆಗೆ ಇದ್ದವರು,ಒಂಟಿಯಾಗಿದ್ದ ಮಾಲಿಕತಿಗೆ ಜೊತೆಯಾ ಆದ್ದ ಹಾಗೆ:ಕಾರ್ಪೊರೇಶನ್ನಲ್ಲಿ ಟೈಪಿಸ್ಟ್ ಆಗಿದ್ದ ರೇಖಾ ಆಪ್ಟೆ, ಮೆಡಿಕಲ್ ಕಾಲೇಜಿನಲ್ಲಿ  ಓದುತ್ತಿದ ಶಾಂತಾ ಚಿಟ್ನಿಸ.
    "ಏ ಏಳs ಮಾರಾಯಳs, ಎಂಟ ಹೊಡೇಲಿಕ್ಕೆ ಬಂತು"- ಮಲಗಿದ್ದವಳ ಹೊದಿಕೆ ಎಳೆಯುತ್ತಾಳೆ ರೇಖಾ.
       ಹೊದಿಕೆಯನ್ನು ಇನ್ನೂ ಬಿಗಿಯಾಗಿ ಮೈಗೆ ಸುತ್ತಿಕೊಂಡು ಹಾಸಿಗೆಯಲ್ಲಿ ಗುಬ್ಬಚ್ಚಿಯಂತೆ ಹುದುಗುತ್ತ ಸ್ವಲ್ಪ  ಸಿಟ್ಟಿನಿಂದಲ್ಲೇ ಉತ್ತರಿಸುತ್ತಾಳೆ ಶಾಂತಾ,"ನಾನ್ಯಾಕ ಕಾಡುತಿ? ಹೋಗು ಹೋಗು. ಗಿರಿಜಾನ ಜೋಡಿ ಏನರೆ ಲಿಟರೇಚರ್ ಓದು ಹೋಗು".
    "ಗಿರಿಜಾಗೂ ಆಕೀ ಲಿಟರೇಚರ್ ಗೂ ಕೂಡೇ ಬೆಂಕಿ ಹಚ್ತು .ರವಿವಾರ ಸುದ್ದಾ ನಮಗ ಮಲಗಗೊಡೊದಿಲ್ಲ. ಯಾವಾಗ ನಸಿಕಿನ್ಯಾಗ ಐದಕ್ಕೆ ಎದ್ದಾಳ ಪುಣ್ಯವಂತಿ,ದೀಪ ಹಚಿಗೊಂಡು ಕೂತುಬಿಟ್ಟಾಳ ಪುಸ್ತಕಾ ಹಿಡಕೊಂಡು. ಯಾವಾಗ ಬ್ಯಾರೀಕಡೆ ರೂಮೂ ಸಿಕ್ಕೀತು ಅಂತೀನಿ ನಾ ಅಂತೂ"'
      ಮೂಲೆಯ ಟೇಬಲಿನ ಹತ್ತಿರ ಓದುತ್ತಾ ಕೂತ ಗಿರಿಜಾಗೆ ಸಿಟ್ಟು ಮೂಗಿನ ಮೇಲೆಯೆ: "ಮಿಸ್ ರೇಖಾ ಅಷ್ಟೇ, ನಿನಗೆ ಗೊತ್ತಿರಬೇಕು ಈ ರೂಮು ನಂದು ಅಂತ. ಎನ್ನೋ ಪಾಪ,ಬ್ಯಾರೇ ಊರಿಂದ ಬಂದೀ ಅಂತ, ರಸ್ತೀದ ಮ್ಯಾಲ  ಮಲಗೋ ಹಾಂಗ