ಪುಟ:ನಡೆದದ್ದೇ ದಾರಿ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ನಡೆದದ್ಡೇ ದಾರಿ

ಆಗಬಾರದು ಅಂತ ಜಾಗಾ ಕೊಟ್ಟೀನಿ ನಿನಗ. ಬಗೀಹರೀದಿದ್ರ ಹೋಗಿಬಿಡು. ಯಾರ ಬ್ಯಾಡಂತಾರ? ಏನs ಶಾಂತಾ?" "ಓಹೋ, ಸಿಟ್ಟಾಗಬ್ಯಾಡ ಗಿರಿಜಾ, ಮುಂಜಾನೆದ್ದ ಕೂಡಲೇ ಜಗಳಾ ಸುರೂ ಮಾಡಿದಲ್ಲ?" "ಯಾರು ಜಗಳಾ ಸುರೂ ಮಾಡೀದವ್ರು? ನಾ ನನ್ನಷ್ಟಕ್ಕೆ ಓದಿಕೋತ ಕೂತೀನಿ. ನೀನs ಅಲ್ಲೇನು ನನಗ ಬೆಂಕೀ ಹಚ್ಚಲಿಕ್ಕೆ ಹೋರಟಾಕಿ?" -ಚೀರು ದನಿಯನ್ನು ಎತ್ತರಿಸುತ್ತ ಗಿರಿಜಾ ಮಾತಾಡುತ್ತಾಳೆ,"ನನಗ ಯಾರೂ ಇಲ್ಲ ಅಂತ ಹಿಂಗ ಹಗರ ಮಾತು ಬರ್ತವ ಹೌದಲ್ಲೊ ನಿನ್ನ ಬಾಯಿಂದ? ಇಷ್ಟ ತಿಳಕೋ ರೇಖಾ, ಕೆಳಗಿನ ಮನ್ಯಾಗೇ ಇದ್ದೂ ಸಹಿತ ನಮ್ಮ ಅಣ್ಣಾ-ಅತ್ತಿಗಿ ನನ್ನ ಮುಖಾ ನೋಡೂದೆಲ್ಲ ಖರೆ, ಆದರ ನಮ್ಮಪ್ಪಾ ಸಾಯೋವಾಗ ನನಗ ಈ ಮ್ಯಾಲಿನ ಮನಿ, ಭತ್ತದ ಗದ್ದಿ, ತೆಂಗಿನ ತೋಟ, ಅಲ್ಲದs ಕ್ಯಾಶ್ ಕಂಡಾಪಟಿ ರೊಕ್ಕಾ ಕೊಟ್ಟ ಹೋಗ್ಯಾನ. ನಾಯೇನು ತಿಂಗಳಾ ನೂರಾಐವತ್ತು ಪಗಾರದ ಟೈಪಿಸ್ಟಕೀ ಮಾಡೋ ಭಿಕಾರಿ ಅಲ್ಲ." -ಗಿರಿಜಾನ ಮಾತು ಹೆಚ್ಚಾಯಿತು ಅನಿಸಿತು ಶಾಂತಾಗೆ. ಇನ್ನು ಅವಳನ್ನು ತಡೆಯದಿದ್ದರೆ ರೇಖಾನ ಟೈಪಿಸ್ಟ್ ಕೆಲಸವಷ್ಟೆ ಅಲ್ಲದೆ ಅವಳ ಕುಲಗೋತ್ರವೆಲ್ಲ ಉದ್ಧಾರವಾಗುವುದೆಂದು ಗೊತ್ತು. ಆಕೆಯ ನಿದ್ದೆಯಂತೂ ಪೂರಾ ಹಾರಿಹೋಗಿತ್ತು. ಎದ್ದು ಹಾಸಿಗೆ ಕೊಡವುತ್ತ ಆಕೆ ಮಾತು ಬದಲಿಸಿದಳು, "ಅಂಗದಾಂಗ ರೇಖಾ, ನಿಂದೇನು ಇವತ್ತು ಔಟಿಂಗ್ ಇಲ್ಲೇನು ಎಲ್ಲ್ಯೂ?" ಮುಖದ ತುಂಬ ನಗು ತಂದುಕೊಂಡು ಗೋಣು ಓರೆಮಾಡಿ ಕಣ್ಣು ಕಿರಿದುಮಾಡಿ ರೇಖಾ ಉತ್ತರಿಸಿದಳು,"ಓ, ಔಟಿಂಗ್ ಇಲ್ಲದೇ ಸಂಡೇ ಎಂಥಾದ್ದು? ನನ್ನ ರವಿವಾರದ ಪ್ರೋಗ್ರ್ಯಾಮೆಲ್ಲಾ ಆಗಾವು ಫಿಕ್ಸ್ ಆಗಿರ್ತಾವ." "ಎಲ್ಲಿ ಹೋಗಾಕಿ ಹಂಗಾರ ಇವತ್ತ?" ಗಿರಿಜಾನ ಧ್ವನಿಯಲ್ಲಿ ಅವಳ ಅಂಕೆ ಮೀರಿದ ಕುತೂಹಲ, "ರಾಮತೀರ್ಥಕ್ಕs?" "ಛೆ,ಹೋದ ರವಿವಾರ ನಮ್ಮ ಬಾಸ್ ಸೇಠೀ ಜೋಡಿ ರಾಮತೀರ್ಥಕ್ಕೆ ಹೋಗಿದ್ನೆಲ್ಲಾ. ಮತ್ತ-ಮತ್ತ ಒಬ್ಬರ ಜೋಡೀನs ಒಂದs ಕಡೆಗs ಹೋಗೋದ್ರಾಗ charm ಇರೂದಿಲ್ಲ. ಇವತ್ತು ನಮ್ಮ ಆಫೀಸ್ ಸ್ಯೂಪರಿಂಟೆಂಡೆಂಟ್ ಜಗನ್ನಥನ್ ಇದ್ದಾನಲ್ಲಾ, ಅವನ ಇನ್ವಿಟೇಶನ್ ಆದ. ಆತ ಹೊಸದಾಗಿ ಸ್ಕೂಟರ್ ತಗೊಂಡಾನ. ಹಂಗ ಕೂತು ಹೋಗ್ತಾ ಇರೋದು-ಪೂನಾ ರೋಡಿನ ಗುಂಟ. ಸಂಜೀನ್ಯಾಗ ಆ ಕಡೆ ಭಾಳ fine ಇರ್ತದ. ಸ್ವಲ್ಪ ಮುಂದ- ಅಂದರ ಒಂದು ೮-೧೦ ಮೈಲು ಹೋದ ಮ್ಯಾಲ ಘಾಟ ಏರಿಯಾ ಬರ್ತದ್ಂತ....ಅಂದರ ಬರೇ ಜಂಗಲ್-"