ಪುಟ:ನಡೆದದ್ದೇ ದಾರಿ.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಲು / ಒಂದು ರವಿವಾರ ೧೫೫

 "ಗೊತ್ತಾತ ಬಿಡು ರೇಖಾ, ಹೆಚ್ಚಿನ explanation ಬ್ಯಾಡಾ ನಮಗ. ಒಟ್ಟಿನ ಮ್ಯಾಲ ನೀ ಮುಂಜಾನೆ- ಮಧ್ಯಾಹ್ನ ಫ಼್ರೀ ಇದ್ದೀ ಆಂಧಾಂಗಾತು. ಹತ್ತ ಘಂಟೇಕ್ಕ ರೆಕ್ಸ್ ಗೆ 'Gone with the wind' ಆದ. ಹೋಗೋಣೇನು ? ಏನಂತೀ ಗಿರಿಜಾ ? "

"ಆ ?" ಗಿರಿಜಾನ ಮನಸ್ಸು ಗಾಳಿಗುಂಟ ಹೋಗಿತ್ತು- ರೇಖಾ ಹೇಳಿದ ಘಾಟ ಏರಿಯಾದತ್ತ. ಶಾಂತಾನ ಮಾತಿಗೆ ಒಮ್ಮೆಲೆ ಉತ್ತರಿಸಲು ತಿಳಿಯಲಿಲ್ಲ ಆಕೆಗೆ, "ಏನು ? Gone with the wind ? ಹೌದೌದು." ಪಕಪಕನೆ ನಕ್ಕಳು ರೇಖಾ,"ಎಲ್ಲಿಗೆ ಹೋಗೀರಿ ಬಾಯಿಸಾಬ್ ? ಯಾರ ಕನಸು ಕಾಣಲಿಕತ್ತೀರಿ ?" "ಸುಮ್ನಿರು ರೇಖಾ,"-ಗಿರಿಜಾನ ಧ್ವನಿಯಲ್ಲಿ ಮತ್ತೆ ಸಿಡಿಸಿಡಿ, "ಆಂಥಾ ಕನಸು-ಗಿನಸು ಕಾಣೂದು ಎಲ್ಲಾ ನಿನಗs ಇರಲಿ. ನನಗ ನನ್ನ ಪುಸ್ತಕದ್ದು. ನನ್ನ ಕೆಲಸದ್ದು ಕನಸು." "ಕೆಲಸದ್ದೇನು ಕನಸು ? ಪಿಎಚ್.ಡಿ ಆತು, ಪ್ರಮೋಶನ್ ಸಿಕ್ಕಿತು, ಇನ್ ಕ್ರಿಮೆಂಟ್ ಸಿಕ್ಕವು. ಇನ್ನ ಸ್ವಲ್ಪ ಲಗ್ನ-ಗಿಗ್ನದ ವಿಚಾರ ಮಾಡ್ರೆಲಾ." "ಛೀ ಛೀ",ಮೈಮೇಲಿನ ಹುಳ ಕೊಡವಿದ ಹಾಗೆ ಕಹಿ ಮುಖ ಮಾಡಿದಳು ಗಿರಿಜಾ, "ಯಾಕ ಎಲ್ಲಾ ಹೆಂಗಸ್ರೂ ಲಗ್ನ-ಲಗ್ನ ಅಂತ ಬಡಕೋತಾರೋ ಅಂತೀನಿ. ಏನದ ಅದರಾಗ ? ಒಬ್ಬ ಹುಂಬ ಗಂಡಸಿನ ಆಳಾಗಿ ಇರೋದು. ಅವರಿಗೆ ಹೆಂಗ್ಸರ ಮನಸ್ಸು understand ಆಗೋದಿಲ್ಲ. ಬಿಡೋದಿಲ್ಲ. ಇವ್ರು ಬರೇ ಮಕ್ಕಳ್ನ ಹಡಕೋತ ಸಾಯೋದು. Disgusting ! ನನಗಂತೂ ಅವರನ್ನ ಕಂಡರ ಆಗೂದಿಲ್ಲ. ನಾ ಹಿಂಗs ಇರಬೇಕು ಅಂತ decide ಮಾಡಿಬಿಟ್ಟೀನಿ." "ಇಂಥಾ ಸಣ್ಣ ವಯಸ್ಸಿನ್ಯಾಗ ಇಷ್ಟ ವೈರಾಗ್ಯ ಅಂದ್ರ ಅದ್ಬುತ."

-ಬಾಥ್ ರೂಮಿಗೆ ಹೋಗುತ್ತ ಶಾಂತಾ ಅಂದಳು. ಅವಳು 'ಸಣ್ಣ' ಅನ್ನುವಾಗ ಕಣ್ಣು ಮಿಟುಕಿಸಿದ್ದು ನೋಡಿದ ರೇಖಾಗೆ ನಗು ಬಂತು.

ಶಾಂತಾ ಹೋದ ದಿಸೆಯನ್ನೆ ನೋಡುತ್ತಿದ್ದ ಗಿರಿಜಾ ಆಕೆ ಕಣ್ಣು ಮರೆಯಾದೊಡನೆ ಧ್ವನಿ ತಗ್ಗಿಸಿ ಹೇಳಿದಳು, "ನಿನಗ ಗೊತ್ತಿಲ್ಲ ರೇಖಾ, ಈ ಶಾಂತಾ ಭಾಳ ಬೆರಿಕಿ ಹೆಣ್ಣು. ಒಂದ ಸ್ವಲ್ಪ ಛಲೋ ಫಿಗರ್ ಅದ ಅಂತ ಮಹಾಸೊಕ್ಕು. ತಾ ಭಾಳ ಶ್ಯಾಣ್ಯಾಕಿ ಅಂತ boast ಮಾಡ್ತಿರತಾಳ.ಆದರ ಈಕಿ first class ಬಂದದ್ದು, ಈಕೀಗೆ scholarship ಸಿಕ್ಕದ್ದು ಎಲ್ಲಾ ವಶೀಲಿ ಮ್ಯಾಲೆ. ನನಗ ಗೊತ್ತದ ಆ ಕಥಿ." "ಹೌದೇನು ಗಿರಿಜಾ ? ಯಾರು ಹೇಳಿದ್ರು?" "ಹಿಂಗೇ ಬಂತು ಸುದ್ದಿ. ಈಕೀದೇನು ಶ್ಯಾಣೇತನಾ ಸುಟ್ಟಿತು, ಘೋಕ ಹಾಕಿದರ