ಪುಟ:ನಡೆದದ್ದೇ ದಾರಿ.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮಲ್ ನಡೆದದ್ದೇ ದಾರಿ

ಎಲ್ಲಾರೂ first class ಬರ್ತಾರೆರತಬರ್ತರ್. ಅದರಾಗೇನದ?"

" ಆದರೆ ಶಾಂತಾ  ಖರೇನs ಹುಷಾರ ಇದ್ದಾಳಂತ ಮೊನ್ನೆ ಆಕೀ ಪ್ರೊಫೆಸರs              

ಹೇಳಿಲ್ಲs ಮುಂದಿನ ಮನೀಗೆ ಹೊಸದಾಗಿ ಬಂಡ ಡಾ.ಶಾಸ್ತ್ರಿ ?"

   " ಅಯ್ಯ ಬಿಡ, ಈಕೀಗೆ ಕಣ್ಣು-ಮೂಗು ತಿರುವಿ ಮಂದೀನ್ನ ಬುಟ್ಟೀಗೆ                
ಹಾಕ್ಕೊಳ್ಳೋ ಕಲಾ ಅದ. ಅದಕ್ಕ ಮುಳ್ಳಾಗಿ ಎಲ್ಲಾರೂ ಹೊಗಳ್ತಾರ ಆಕಿನ್ನ.            
ನೋಡಿದಿಲ್ಲೋ ಆ ದಿವ್ಸ ಆಕೀ ಕಾಲೇಜ ಗ್ಯಾದರಿಂಗಿಗೆ ಹೋದಾಗ ಎಷ್ಟ ಮಂದಿ                 
ಆಕೀ ಹಿಂದಿಂದ 'ಮಿಸ್ ಚಿಟ್ನೀಸ್, ಮಿಸ್ ಚಿಟ್ನೀಸ್ ' ಅನಕೋತ ತಿರಗತಿದ್ವು !                 
ನನಗಂತೂ ಚೂರೂ ಪಸಂದಿಲ್ಲ ಆಕೀ ಚಾಲು. "
   "ಛೆ೦ದ  ಹುಡುಗ್ಯಾರ ಬಗ್ಗೆ ಎಲ್ಲಾರಿಗೂ ಆಸ್ಥಾ ಇರೋದು ಸಹಜ."
   "ಅದೇನು ಮಹಾ ಛೆ೦ದ ಈಕೀದು? ಬಿಳೇ ತೊಗಲು, ಹಿಂದ- ಮುಂದ ದಪ್ಪ-          
  ದಪ್ಪ..."
     "ಅದು ಹೋಗ್ಲಿ ಗಿರಿಜಾ , ಸಿನೆಮಾಕ್ಕಂತೂ ಹೋಗೋಣಲ್ಲಾ ?"
     "ಓ ಯೆಸ್."
     *
     ರೇಖಾ ಸ್ನಾನಕ್ಕೆ ಹೋದಾಗ , ಕಿರುದನಿಯಲ್ಲಿ ಹಾಡುತ್ತ ಸೀರೆ                 
 ಸುತ್ತಿಕೊಳ್ಳುತ್ತಿದ್ದ ಶಾಂತಾಳ ಸಮೀಪ ಬಂದಳು ಗಿರಿಜಾ, "ಶಾಂತಾ,ಭಾಳ ದಿವ್ಸದಿಂದ     
 ನಿನಗೊಂದು ಸುದ್ದಿ ಹೇಳಬೇಕಂತೀನಿ."
         "ಅದೇ, ನಿಮ್ಮ ಡಿಪಾರ್ಟಮೆಂತಟಿನ ಹೆಡ್ ರಿಟಾರ್ ಆಗೋ ಸುದ್ದಿ
    ಹೌದಲ್ಲೋ ?"             
          "ಅಲ್ಲ, ರೇಖಾನ ಸುದ್ದಿ.ಇತ್ತಿತ್ಲಾಗ ಅಕೀ ಹಾರಾಟ ಭಾಳ ಆಗೇದ. ಆಫೀಸಿಗೆ   
 ಹೋಗೋವಾಗ ಹ್ಯಾಂಗ ಡ್ರೆಸ್ ಮಾಡತಾಳ ನೋಡಿದೇನು ? ಎಷ್ಟ ಬಿಗಿ-ಬಿಗಿ ಅರಿವೆ      
 ಹಾಕ್ಕೋತಾಳ, ಶಿವಶಿವ, ನನಗೆ ಅಸಹ್ಯ ಅನಸ್ತದೆ. ನಿನಗೆ ಗೊತ್ತದs ಏನು, ಮೊನ್ನೆ            
 ನಮ್ಮ ಡಿಪಾರ್ಟ್ಮೆಂಟಿನ್ಯಾಗ ಪ್ರೊಫೆಸರ್ ಜೋಶಿ ಹೇಳ್ತಿದ್ರು, ಅವರ ತಮ್ಮ ಈಕೀ                         
 ಆಫೀಸಿನ್ಯಾಗೇ ಇದ್ದಾನಲ್ಲ, ಈಕೀನ್ನ ಒಬ್ಬರೂ ಬಿಟ್ಟಿಲ್ಲ೦ತ."
         "ನಿಮ್ಮ ಪ್ರೊ. ಜೋಶಿಯ ತಂಗಿ ನನ್ನ ಕ್ಲಾಸ್ ಮೇಟ್. ಆಕೇನು ರೇಖಾನ         
   ಸಲುವಾಗಿ ಹಾಂಗ ಕೇಳಿದ್ದು ನಾ ಕೇಳಿಲ್ಲ. ನಿಮ್ಮ ಜೋಶಿ ಸುಳ್ಳ ಹೇಳ್ತಿರಬೇಕು.                    
   ಇಲ್ಲಂದರ-" 
        "ಇಲ್ಲಂದರ ನಾ ಸುಳ್ಳ ಹೇಳ್ತಿರಬೇಕು ಅಂತಿಯೇನು? ನನಗ್ಯಾಕಬೇಕು ಇಲ್ಲದ         
     ಕಾರಭಾರ ? ಹಾಂಗ ಕೇಳಿದ್ರ ನನಗ ಮಂದೀ ಸುದ್ದಿ ಮಾತಾಡೂದ ಸೇರೂದಿಲ್ಲ.