ಪುಟ:ನಡೆದದ್ದೇ ದಾರಿ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದೂ ಒಬ್ಬರ ಬೆನ್ನಹಿಂದ ಟೀಕಾ ಮಾಡೂದಂದ್ರ ಎಷ್ಟ mean ! ಛೆ, ನನಗ ಬಿಲ್-ಕುಲ್ ಸೇರೂದಿಲ್ಲ. ರೇಖಾಗ ಮಾತ್ರ ಈ ಚಟಾ ಭಾಳ. ನೀ ಇಲ್ಲದಾಗ ನಿನ್ನ ಬೈಕೋತ ಇರ್ತಾಳ."

                  "ಬೈಯಿಸಿಕೊಂಡವರ ಆಯುಷ್ಯ ಹೆಚ್ಛಾಗತದಂತ. ಹೋಗ್ಲಿಬಿಡು. ಪಿಕ್ಚರಿಗೆ ಹೋಗೋಣ ಹೌದಲ್ಲೊ ಹತ್ತಕ್ಕ ?"
                  "Gone with the wind ಅಂದರ ರೋಮ್ಯಾಂಟಿಕ್ ಪಿಕ್ಚರು. ನಿಮ್ಮಂಥ ಹುಡುಗ್ಯಾರಿಗೆ ಛಲೋ. ನನಗ ಅದೆಲ್ಲಾ ಭಾಳ silly ಅನಸ್ತದ. ಆ ಕಿಸಿಂಗ್ ಸೀನ್ಸು, ಬೀಳೂದು , ಉರುಳ್ಯಾಡೂದು ..... ಛಿ ಛಿ , ಅದರ ಬದಲಿಗೆ ಸುಮ್ಮ ಲೈಬ್ರೆರಿಗೆ ಹೋಗಿ ಓದೋದು ಛಲೊ."
                  " ಮುಂಜಾನೆ ಪಿಕ್ಚರ್ ನೋಡೋಣ.ಲೈಬ್ರೆರಿಗೆ ಸಂಜೀನ್ಯಾಗ ಹೋಗೀಯಂತ. ನಾನು ಥಿಯೋಸೊಫಿಕಲ್ ಸೊಸೈಟಿಗೆ ಹೋಗ್ತೀನಿ ೬ ಘಂಟೇಕ್ಕ. ಇವತ್ತ ಚಿನ್ಮಯಾನಂದಜಿ ಅವರ ಲೆಕ್ಚರ್ ಆದ. ಗೀತಾದೊಳಗಿನ ಧ್ಯಾನಯೋಗ explain ಮಾಡತಾರ. ನನಗಂತೂ ಇತ್ತಿತ್ಲಾಗ ಅವರ ಭಾಷಣ ಇಷ್ಟ ಸೇರತಾವಂತೀ...."
                  " ಈಗೀಗ ಪ್ರತಿ ರವಿವಾರ ಸಂಜೀನ್ಯಾಗ ಅಲ್ಲೇ ಹೋಗ್ತಿರ್ತಿಯೇನು ? ರಾತ್ರಿ ತಡಾ ಆಗಿ ಬರ್ತೀಯಲ್ಲ ?"
                  "ಹೌದು, ಹೊತ್ತು ಕಳದದ್ದೇ ಗೊತ್ತಾಗೂದಿಲ್ಲ ಅವರ ಉಪನ್ಯಾಸ ಕೇಳ್ತಿದ್ದಾಗ. ಮೆಡಿಕಲ್ ಕಾಲೇಜಿನ ಹುಡಿಗ್ಯಾರೆಲ್ಲ ಸಂಜೀನ್ಯಾಗ  ಅಲ್ಲೆ-ಇಲ್ಲೆ ತಿರಿಗಿ ವ್ಯಾಳ್ಯಾ ಕಳೀತಾರ. ನನಗ ಅದೆಲ್ಲಾ ಸೇರೂದಿಲ್ಲ. ಈ ಥಿಯೋಸೊಫಿಕಲ್ ಸೊಸೈಟಿಗೆ ಮತ್ತ ಆ ರಾಮಕೃಷ್ಣ ಮಿಶನ್ನಿಗೆ ಹೋದರ ಇಷ್ಟ peace of mind ಸಿಗದಂತೀ-"
                  *

ಮಧ್ಯಾಹ್ನ :

      - ಮೂರು ಗಂಟೆ. ಅವರು ಮೂವರೂ ಹಾಸಿಗೆಯ ಮೇಲೆ ಬಿದ್ದುಕೊಂಡು ಅರ್ಧ ಎಚ್ಚರ-ಅರ್ಧ ನಿದ್ರೆಯಲ್ಲಿದ್ದಾರೆ.
                 "ಹ್ಯಾಂಗಿತ್ತು ಪಿಕ್ಚರು ? ನನಗಂತೂ ಭಾಳ ಸೇರಿತು. ನಾ ಸಂಜೀನ್ಯಾಗ ಜಗನ್ನಾಥನ್ ಕೂಡ ಹೋದಾಗ ಅದರ ಕಥೀ ಹೇಳ್ತೀನಿ ಅವನಿಗೆ."- ರೇಖಾ ಕಣ್ಣು ತೆರೆಯದೆ ಹೇಳಿದಳು.
                 " ಛಿ, ಬರೇ ಸೆಂಟಿಮೆಂಟಲ್. ಯಾವ ಗಂಡ್ಸಿಗೂ ಯಾವ ಹೆಂಗಸಿನ ಸಲುವಾಗಿನೂ ಹಿಂಗ ಖರೇ attachment ಇರೂದಿಲ್ಲ. ಅವರದೆಲ್ಲಾ ಪ್ರೀತಿ ಬರೇ ತಮ್ಮ ಹಸಿವು ಹಿಂಗಿಸಿಕೊಳ್ಳೋದರ ಪೂರ್ತೆ ಇರ್ತದ. ಖರೇ ಅಂದರ ಗಂಡಸರ್ನ ಲಗ್ನ