ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

158

ಮಾಡಿಕೊಳ್ಳೋ ಹೆಂಗಸರೇ ಮೂರ್ಖರು " -- ಗಿರಿಜಾ

         ಶಾಂತಾ ಮುಸುಕಿನೊಳಗಿಂದ : "ಲಗ್ನಾ ಮಾಡಿಕೊಳೋದು ಮೂರ್ಖತನ ಅನ್ಸುದಿಲ್ಲ ನನಗ.ಲಗ್ನ ಅಂದರ ಪವಿತ್ರ ಬಂಧನ. ಆದರ ಲಗ್ನ ಇಲ್ಲದ ಸಿಕ್ಕವರ ಕೂಡ ಸಂಬಂಧ ಬೆಳಸತಾರಲ್ಲ ಈ ಇಂಗ್ಲಿಶ್ ಪಿಕ್ಚರಿನ್ಯಾಗ. ಅದು ಮಾತ್ರ ತೀರ ಹೊಲಸು ಅನಸ್ತದ ನನಗ. ಎಷ್ಟ ಪಾಪದ ಕೆಲಸಲ್ಲ ಅದು? ಹಾಂಗೆಲ್ಲ ಮಾಡಿದರ ಗಂಡಾ-ಹೆಂಡ್ತಿ ಸಂಬಂಧದ sacredness ಕ್ಕೆ ಏನ ಕಿಮ್ಮತ್ತು ಉಳಧಾಂಗಾತು ?"
        'ಎಲ್ಲೇ sacredness ಪುರಣ ತಗದೀ ಶಾಂತಾ?enjoy ಮಾಡೋ opportunity ಇದ್ದಾಗ enjoy ಮಾಡ್ಬೇಕು. ಎಂದರೆ ಒಮ್ಮೆ ಯಾರ ಜೋಡಿ ಅರೆ ಕತ್ತಲ್ಯಾಗ ದೂರ ಹೋಗು, ಅಂದರ ಗೋತಾಗತದ ಅದರ ಸುಖಾ" -- ರೇಖಾ ಹೇಳಿದಳು, "ನನಗ ಈ ಗೊಡ್ಡು ವೇದಾಂತ ಸೇರೋದಿಲ್ಲ ನೋಡು. ಈಗ ನಾವು ಆರಾಮಗಿರೋ ದಿವಸ. ಮುದುಕರಾದ ಮ್ಯಾಲೆ ಅಥವಾ ಲಗ್ನಾ ಮಾಡಿಕೊಂಡ ಮ್ಯಾಲೆ ಹಿಂಗ (ಇರ್ಲಿಕ್ಕೆ) ಆದೀತೇನು? ಅದಕ್ಕ ನನಗ ಎಷ್ಟು ವರಾ ಬಂದ್ರೂ ನಾ (ಎಲ್ಲಾರನ್ನೂ) reject ಮಾಡೀನಿ."
        "ಛಿ ಛಿ, ಹಿಂದೂ ಹೆಂಗ್ಸಾಗಿ ಎಂಥಾ ಮಾತಾಡ್ತೀ ರೇಖಾ? ಹಿಂಗೆಲ್ಲಾ (ಅಂಬಾರದು) , ನೀಯೇನಂತೀ ಗಿರಿಜಾ?"
        "ಲಗ್ನದ ಮಾತು ನನಗ ಕೆಲಬ್ಯಾಡ್ರೆವಾ. ಇಂಥಾ ಚಿಲ್ಲರೆ ವಿಷಯ ಮಾತಾಡಿ ಟೈಮು ಹಾಳು ಮಾಡೋ ಮನಸ್ಸಿಲ್ಲ ನನಗ. ಸಂಜಿನ್ಯಗ ನಮ್ಮ ಹೆಡೆ ಬಾ ಅಂತ ಹೇಳಿದ್ರು. ಅವರ ಕಡೆ ಯಾವಾಗ ಹೋಗ್ಲಿ, ಲೈಬ್ರೆರಿಗೆ ಯಾವಾಗ ಹೋಗ್ಲಿ ಅಂತ ವಿಚಾರ ಮಾಡಲಿಕ್ಹತ್ತೀನಿ ನಾ."
        "ಬೇಕಾದಾಗ ಹೋಗು, ರಾತ್ರಿ ಊಟಕ್ಕೆ ಮಾತ್ರ ನನ್ನ ದಾರೀ ಕಾಯಬ್ಯಡ. ನಾ ಜಗನ್ನಾಥನ್ ಜೋಡಿ ಔಟಿಂಗ್ ಗೆ  ಹೋಗಿ ಬಂದಮ್ಯಾಲ ಶ್ರೀಧರ ಕುಲಕರ್ಣಿಯ ಕಡೆ ಡಿನ್ನರ್ ಗೆ ಹೋಗಬೇಕು, (ಬರಲಿಕ್ಕೆ) ತಡಾ ಆದೇತು.
        "ಹ್ಞಾ, ನಂದು ದಾರಿ ಕಾಯಬ್ಯಾಡ ಗಿರಿಜಾ, ಚಿನ್ಮಯಾನಂದಜಿ ಲೆಕ್ಚರು ಮುಗದು ಮ್ಯಾಲ ಅಲ್ಲಿ discussion ಅದ. ಮೊನ್ನಿನ ರವಿವಾರ ಅವರು ಆತ್ಮ-ಪರಮಾತ್ಮನ ಸಂಬಂಧ ಅರ್ಧಾ ಹೇಳಿ ನಿಲ್ಲಿಸಿದ್ರು. ಇವತ್ತು ಪೂರಾ ಕೆಳಬೇಕು."
        "ನನಗರೆ ಎಲ್ಲೆ ಲಗೂ ಬರುದಾಗ್ತದ? ನಮ್ಮ ಹೆಡ್ ಅವರ ಮನೀಗೆ ಹೋದರೆ ಅವರ ಹೆಂಡ್ತಿ ಬಿಡೋದಿಲ್ಲ. ಊಟಕ್ಕ ಹಾಕೆ ಕಳಸ್ತಾಳ."
        "ಯಾಕೋ ಮೈ-ಕೈ ನೋವು" -- ರೇಖಾ ಎದ್ದು ಕುಳಿತು ಹೇಳಿದಳು. ಗಿರಿಜಾ ಪಟಕ್ಕನೆ ಮಾತಾಡಿದಳು. "ನೀ ಇತ್ತಿತ್ಲಾಗ ಯಾಕೋ ಸೊರಗಲಿಕ್ಹತ್ತಿ