ಕಮಲ / ಒಂದು ರವಿವಾರ ೧೬೧
ಅನಿಸುತ್ತದೆ ತನಗೆ. ಈ ಜಡ್ಡೇ ಅಂತಹದು, ಹೆಚ್ಚಾಗುವ ತನಕ ಗೊತ್ತೇ ಆಗುವುದಿಲ್ಲ. ರೇಖಾಗೆ ಇದ್ದರೂ ಇದ್ದೀತು. ಯಾರಿಗೆ ಗೊತ್ತು ?
- ತಯಾರಾಗಿ ಕೋಣೆಗೆ ಬೀಗ ತಗುಲಿಸಿ ಹೊರಬಿದ್ದಾಗ ಮತ್ತೆ ಮನಸ್ಸಿಗೆ
ಒಂದು ಥರಾ ಮುಜುಗರ. ಶಾಂತಾ ಯಾಕೆ ಅಷ್ಟು ಫ್ಯಾಶನೇಬಲ್ ಕಾಣುತ್ತಾಳೆ ಸಾದಾ ಸೀರೆಯಲ್ಲಿ ? ಮೊಂಡ ಮೂಗಿನ ಗುಳ್ಳೆಗಣ್ಣಿನ ರೇಖಾಗೆ ಯಾಕೆ ಅಷ್ಟೊಂದು ಗಂಡಸರು ಮರುಳಾಗುವುದು ? ಈ ಗಂಡಸರು ಹೆಂಗಸಿನಲ್ಲಿ ಏನು ಬಯಸುತ್ತಾರೆ ಅನ್ನುವುದೇ ತನಗಿನ್ನೂ ತಿಳಿಯದಾಗಿದೆಯಲ್ಲ.... ಒಮ್ಮೆ Youth Festival ಗೆ ಧಾರವಾಡಕ್ಕೆ ಹೋದಾಗ ಪ್ರೊ. ಜೋಶಿ ಎಷ್ಟು ಸಮೀಪ ಬಂದಿದ್ದ ತನಗೆ... ತಾನೇ ಅವನ ಹೋಟೆಲ್ ಬಿಲ್ಲು, ಕಾಫಿ ಬಿಲ್ಲು, ಸಿನೆಮಾಗೆ- ಎಲ್ಲಾ ಕೊಟ್ಟೆ. ಅವನ ಶಾಪಿಂಗಿಗೆ ಕೂಡ- ಎರಡು ಟೆರಿಲಿನ್ ಶಟು೯, ಅವನ ಹೆಂಡತಿಗೆ ಸೀರೆ ಇತ್ಯಾದಿ- ಹಣ ಕೊಟ್ಟೆ.... ಆದರೆ ಕೊನೆ ಗಳಿಗೆಯಲ್ಲಿ ಯಾಕೋ ದೂರ ಸರಿದ. ಟೀಬೀ ಕೆಟ್ಟ ಜಡ್ಡು ಎಂದೇ ? ಆವನು ಮೂರ್ಖ. ಅದು ಸಾ೦ಸಗಿ೯ಕ ಅಲ್ಲ ಅಂತ ಬೇಕಾದರೆ ಸಿದ್ದಮಾಡಬಲ್ಲೆ. ಬೆಟ್!
-ಆತ ಒಮ್ಮೆ ಹೂ ಅಂದಿದ್ದರೆ.... ಸಂಜೆ ತಂಪಾಗಿದೆ. ದಿನಾ-ದಿನಾ ಲೈಬ್ರರಿಗೆ ಹೋಗಲು ಬೇಸರ. ತನ್ನ ಹೆಡ್
ಬಾ ಅಂತ ಹೇಳಿಲ್ಲ ಖರೆ, ಆದರೂ ಒಮ್ಮೆ ಹೋದರೆ.... ಯಾಕೋ ಆವರ ಹೆಂಡತಿಗೆ ತನ್ನನ್ನು ಕಂಡರೆ ಆಗುವುದಿಲ್ಲ. ಒಮ್ಮೆ ತಾನಿನ್ನೂ ಅವರ ಗೇಟು ದಾಟಿ ಹೊರ ಬರುವ ಮೊದಲೇ ತನಗೆ ಕೇಳಿಸುವ ಹಾಗೆಯೇ ಅಂದಿರಲಿಲ್ಲವೇ- 'ಯಾಕಿವಳು ಬಂದು ಹೊತ್ತಲ್ಲದ ಹೊತ್ತಿನ್ಯಾಗ ತ್ರಾಸ ಕೊಡ್ತಾಳೆ' -ಅಂತ? ಅಲ್ಲಿಗೆ ಬೇಡ. ಅದರ ಬದಲು ಭಡಕಲಗಲ್ಲಿಗೆ ಹೋಗಿ ರಾಮಭಟ್ಟನನ್ನು ಕಾಣುವುದು ಒಳ್ಳೆಯದು.
-ಇಡೀ ಜಗತ್ತಿನಲ್ಲಿ ಈ ರಾಮಭಟ್ಟ ಜ್ಯೋತಿಷಿಯೊಬ್ಬನೇ sensible
ಮನುಷ್ಯ ಅನಿಸುತ್ತದೆ. ಪ್ರತಿಸಲ ಹೋದಾಗ ತನ್ನ ಕೈ ನೋಡುತ್ತಾನೆ. ಕಾಗದದ ಮೇಲೆ ಏನೇನೊ ಗೆರೆ ಎಳೆಯುತ್ತಾನೆ.'ರಾಹು-ಕೇತು-ಮಂಗಲ-ಶನಿ' ಅಂತ ಮಣಮಣ ಅನ್ನುತ್ತಾನೆ. ಕವಡೆ ಎಸೆಯುತ್ತಾನೆ. ಕಣ್ಣು ಮುಚ್ಚಿ ಎರಡು ನಿಮಿಷ ಧ್ಯಾನಸ್ಥನಾಗುತ್ತಾನೆ. ಅವನು ಅಷ್ಟೆಲ್ಲ ಮಾಡುತ್ತಿರುವಾಗ ತನ್ನ ಎದೆ ಮಧುರ ಆತುರದಿಂದ ಹೊಡಕೊಳ್ಳುತ್ತಿರುತ್ತದೆ. ನಂತರ ಅವನು ಒಮ್ಮೆಲೆ ಕಣ್ಣು ತೆರೆದು ಹೂಂಕರಿಸುತ್ತಾನೆ: "ಚಿಂತೀ ಬಿಟ್ಟಬಿಡ್ರಿ ಹಿರೇಮಠಬಾಯೀ, ನಾಳಿನ ವೈಶಾಖದಾಗ- ತಪ್ಪಿದರ ಮುಂದಿನ ಮಾಘದಾಗ ನಿಮ್ಮ ಕಲ್ಯಾಣ ಆಗ್ಲಿಕ್ಕೇ ಬೇಕು. ಹೂವಿನ ಸರಾ ಎತ್ತಿಧಾಂಗ ಸರಳ ಆಗತದ. ಉತ್ತಮ ವರಾ ಸಿಗತಾನ. ಈ ಸರೆ ಆತಂತs ತಿಳೀರಿ."